Advertisement

ರಫೇಲ್‌ ಡೀಲ್‌ ಬಗ್ಗೆ ಅಫಿದಾವಿತ್‌ ಸಲ್ಲಿಸಿ : ಕೇಂದ್ರಕ್ಕೆ ಸುಪ್ರೀಂ

11:38 AM Oct 31, 2018 | Team Udayavani |

ಹೊಸದಿಲ್ಲಿ : ‘ಭಾರತ – ಫ್ರಾನ್ಸ್‌ ನಡುವಿನ ವಿವಾದಿತ ರಫೇಲ್‌ ಫೈಟರ್‌ ಜೆಟ್‌ ಒಪ್ಪಂದದಡಿಯ ಖರೀದಿ ದರವನ್ನು ಏಕೆ ಬಹಿರಂಗಪಡಿಸಲಾಗದು ಮತ್ತು ಅದನ್ನು ನ್ಯಾಯಾಲಯದೊಂದಿಗೆ ಏಕೆ ಹಂಚಿಕೊಳ್ಳಲಾಗದು’ ಎಂಬ ಬಗ್ಗೆ  ಹತ್ತು ದಿನಗಳ ಒಳಗೆ ಅಫಿದಾವಿತ್‌ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಕೇಂದ್ರ ಸರಕಾರಕ್ಕೆ ಸೂಚಿಸಿದೆ.

Advertisement

ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು ಜಸ್ಟಿಸ್‌ ಗಳಾದ ಯು ಯು ಲಲಿತ್‌ ಹಾಗೂ ಕೆ ಎಂ ಜೋಸೆಫ್ ಅವರನ್ನು ಒಳಗೊಂಡ ಪೀಠವು “ಅರ್ಜಿದಾರರೊಂದಿಗೆ ಸಾರ್ವಜನಿಕರಿಗೂ ತಿಳಿಸುವ ರೀತಿಯಲ್ಲಿ ರಫೇಲ್‌ ಫೈಟರ್‌ ಜೆಟ್‌ ಡೀಲ್‌ ವಿವರಗಳನ್ನು ಹಂಚಿಕೊಳ್ಳಬಾರದೇಕೆ’ ಎಂದು ಕೇಂದ್ರ ಸರಕಾರವನ್ನು ಕೇಳಿತು. 

ಪ್ರಕರಣದ ವಿಚಾರಣೆಯನ್ನು ನವೆಂಬರ್‌ 14ಕ್ಕೆ ನಿಗದಿಸಿರುವ ಸುಪ್ರೀಂ ಕೋರ್ಟ್‌ “ವ್ಯೂಹಾತ್ಮಕ ಮತ್ತು ರಹಸ್ಯದ ಮಾಹಿತಿ ಮತ್ತು ದಾಖಲೆ ಪತ್ರಗಳನ್ನು ಹಂಚಿಕೊಳ್ಳುವ’ ಬಗೆಗಿನ ಸೂಕ್ಷ್ಮತೆಯನ್ನು ಪರಿಶೀಲಿಸಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next