Advertisement

ಮನವಿ ಬದಲು ಮಾಡಿಕೊಂಡರೆ ದಂಡಕಮ್ಮಿ: ಸುಪ್ರೀಂಕೋರ್ಟ್‌

01:26 PM Jan 30, 2018 | Team Udayavani |

ನವದೆಹಲಿ: ಕರ್ನಾಟಕದ ಮಾಹಿತಿ ಹಕ್ಕು ಹೋರಾಟಗಾರ ಟಿ.ಜೆ.ಅಬ್ರಾಹಾಂಗೆ ವಿಧಿಸಲಾಗಿದ್ದ 25 ಲಕ್ಷ ರೂ. ದಂಡದ ಮೊತ್ತ ಕಡಿಮೆ ಮಾಡುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಕಲಬುರಗಿಯಲ್ಲಿ ನಗರ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಮಿನಿ ವಿಧಾನಸೌಧವನ್ನು 6 ಕಿಮೀ ದೂರಕ್ಕೆ ವರ್ಗಾಯಿಸಿದ್ದನ್ನು ಪ್ರಶ್ನಿಸಿ ಅವರು ಅರ್ಜಿ ಸಲ್ಲಿಸಿದ್ದರು.

Advertisement

2017ರ ಜು.3ರಂದು ಅದರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ಅವರಿಗೆ ದಂಡ ವಿಧಿಸಿ, ವರ್ಗಾವಣೆ ಕ್ರಮ ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿರಿಸಿಕೊಂಡೇ ಕೈಗೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. 

ಸೋಮವಾರ ಅದೇ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ “ಅರ್ಜಿದಾರರು ತಮ್ಮ ಮನವಿಯಲ್ಲಿ ಬದಲು ಮಾಡಿಕೊಂಡಲ್ಲಿ ದಂಡದ ಮೊತ್ತ ಕಡಿಮೆ ಮಾಡುವ ಬಗ್ಗೆ ಪರಿಶೀಲಿಸುವುದಾಗಿ’ ಹೇಳಿತು. ಸುಪ್ರೀಂಕೋರ್ಟ್‌ ಹಿರಿಯ ನ್ಯಾಯವಾದಿ ಸಲ್ಮಾನ್‌ ಖುರ್ಷಿದ್‌ರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿತ್ತು. ಮುಂದಿನ ವಿಚಾರಣೆ ಮಾ.5ರಂದು ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next