Advertisement

ಎಸ್‌ಬಿಆರ್‌ ಶತಮಾನೋತವ್ಸಆಚರಿಸಲಿ: ಸಿದೇಶªರ ಸ್ವಾಮೀಜಿ

10:15 AM Nov 11, 2018 | |

ಕಲಬುರಗಿ: ಕಳೆದ 50 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾರಸ್ವತ ಸೇವೆ ನೀಡಿರುವ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್‌) ಸುವರ್ಣ ಮಹೋತ್ಸವದಂತೆ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಲಿ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಹಾರೈಸಿದರು.

Advertisement

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್‌)ಯ ಸುವರ್ಣ ಮಹೋತ್ಸವ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉತ್ಸವದ ಎರಡನೇ ದಿನದ ಮೊದಲನೇ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿ ಅವರು ಮಾತನಾಡಿದರು.

ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಅಭ್ಯಸಿಸಿ ಜೀವನವನ್ನು ಉತ್ತುಂಗಕ್ಕೇರಿಸಿಕೊಂಡಿದ್ದಾರೆ. ಹೀಗಾಗಿ ಎಸ್‌ಬಿಆರ್‌ ನಾಡಿನ ತುಂಬೆಲ್ಲ ತನ್ನ ಜ್ಞಾನಸೌರಭ ಬೀರಿದೆ. ಇದು ಹೀಗೆ ಮುಂದುವರಿದು ಜಗತ್ತಿನಾದ್ಯಂತ ಹರಡಲಿ. ಸಂಸ್ಥೆ ಹೀಗೆ ಗುಣಮಟ್ಟದಿಂದ ಬೆಳೆಯಲು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಶರಣಬಸವಪ್ಪ ಅಪ್ಪ ಹಾಗೂ ಇತರರ ಶ್ರಮ ಅಡಗಿದೆ ಎಂದರು. ಮಾತನಾಡುವುದು ಸುಲಭ. ಸಂತೋಷ ನೋಡಿ ಸಂತೋಷ ಪಡುವುದು ಮುಖ್ಯವಾಗಿದೆ. ಶಾಲೆಯ ಪ್ರಾಚಾರ್ಯರಾದ ಪ್ರೊ| ಎನ್‌.ಎಸ್‌. ದೇವರಕಲ್‌ ಅವರ ಹೆಸರು ಹೇಳಿದ ಸಂದರ್ಭದಲ್ಲಿ ತಾವೆಲ್ಲರೂ ಹರ್ಷ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಅವರು ತಮ್ಮ ವ್ಯಕ್ತಿತ್ವ ಹಾಗೂ ಶಾಲಾ ಶೈಕ್ಷಣಿಕ ಅಭಿವೃದ್ಧಿಗೆ ಎಷ್ಟು ಶ್ರಮಿಸಿದ್ದಾರೆ ಎನ್ನುವುದನ್ನು ನಿರೂಪಿಸುತ್ತದೆ ಎಂದು ನುಡಿದರು.

ಕೇಂದ್ರದ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಾವು ಎಷ್ಟೇ ಉನ್ನತ ಸ್ಥಾನಕ್ಕೇರಿದ್ದರೂ ಮೂಲಭೂತವಾಗಿ ಕೆಳಹಂತದಲ್ಲಿ ಗುರುಗಳಿಂದ ಕಲಿತ ಶಿಕ್ಷಣವೇ ಕಾರಣ ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಗುರುಗಳಿಗೆ ಸದಾ ವಿನಯವಾಗಿರಬೇಕು. ವಿನಯ ಇದ್ದರೆ ವಿದ್ಯೆ ಒಲಿಯಲು ಸಾಧ್ಯ ಎಂದು ಹೇಳಿದರು.

ಬಿಜೆಪಿ ಮುಖಂಡ ಬಿ.ವೈ. ವಿಜಯೇಂದ್ರ ಮಾತನಾಡಿ, ಜೀವನದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಹೊಂದಬೇಕೆಂದರೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಈ ಶಾಲೆಯಲ್ಲಿ ಈ ತತ್ವ ಕಾರ್ಯಾನುಚರಣೆ ಇರುವ ಹಿನ್ನೆಲೆಯಲ್ಲಿಯೇ ವಿದ್ಯಾರ್ಥಿಗಳು ಬೆಳೆಯಲು ಕಾರಣವಾಗಿದೆ ಎಂದರು.

Advertisement

ಹೈ.ಕ ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ: ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಡಾ| ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ, ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ದೊಡ್ಡ ಕೊಡುಗೆ ನೀಡಿದೆ. ಹೈ.ಕ ಭಾಗದಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎನ್ನುವುದನ್ನು ನಿರೂಪಿಸಿದೆ. ಅಲ್ಲದೇ ಬುದ್ಧಿ ಜತೆಗೆ ಹೃದಯ ವೈಶಾಲ್ಯತೆಯನ್ನು ಬೆಳೆಸಿ ತೋರಿಸಿದೆ ಎಂದು ಹೇಳಿದರು.

ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಶರಣಪ್ಪ ಮಟ್ಟೂರ, ಮಾಜಿ ಶಾಸಕ ಶಶೀಲ್‌ ಜಿ. ನಮೋಶಿ, ಶರಣಬಸವ ವಿವಿ ಕುಲಪತಿ ಡಾ| ನಿರಂಜನ್‌ ನಿಷ್ಠಿ, ಕುಲಸಚಿವ ಡಾ| ವಿ.ಡಿ. ಮೈತ್ರಿ, ಪ್ರಮುಖರಾದ ಮಲ್ಲಿಕಾರ್ಜುನ ನಿಷ್ಠಿ, ರಾಜು ಭೀಮಳ್ಳಿ, ಗೋದಾವರಿ ಭೀಮಳ್ಳಿ, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ| ಭರತ ಕೊಣಿನ್‌, ಉಪಾಧ್ಯಕ್ಷ ಬಸವರಾಜ ಖಂಡೇರಾವ್‌ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸ್ವಾಗತಿಸಿದರು, ಹಳೆ ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿ ಶ್ರೀಕೃಷ್ಣ ಸತಾಳಕರ್‌ ವಂದಿಸಿದರು. ಇದಕ್ಕೂ ಮುಂಚೆ ಬೆಳಗ್ಗೆ ಯೋಗ, ಕರಾಟೆ ಹಾಗೂ ಮಲ್ಲಕಂಬ ಕಾರ್ಯಕ್ರಮಗಳು ನಡೆದವು.

ಗುರುವಿನೊಂದಿಗೆ ಶಿಷ್ಯರು ಸುದೀರ್ಘ‌ 42 ವರ್ಷಗಳ ಕಾಲ ಎಸ್‌ಬಿಆರ್‌ ಶಾಲೆಯ ಪ್ರಾಚಾರ್ಯರಾಗಿ ಮುನ್ನಡೆದುಕೊಂಡು ಬರುತ್ತಿರುವ ಪ್ರೊ| ಎನ್‌.ಎಸ್‌. ದೇವರಕಲ್‌ ಅವರೊಂದಿಗೆ ಶಾಲೆಯ ಹಿಂದಿನ ವಿದ್ಯಾರ್ಥಿಗಳು ಬ್ಯಾಚ್‌ ಪ್ರಕಾರ ಸರದಿಯಲ್ಲಿ ನಿಂತು ಪೋಟೋ ತೆಗೆದುಕೊಳ್ಳುತ್ತಿರುವುದು
ಗಮನ ಸೆಳೆಯಿತು. ಕೆಲವು ವಿದ್ಯಾರ್ಥಿಗಳಂತೂ ಎಸ್‌ಬಿಆರ್‌ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದೇ ತಾವು ಏನಾದರೂ ಸಾಮಾಜಿಕವಾಗಿ ಕೊಡುಗೆ ನೀಡಲು ಸಾಧ್ಯವಾಯಿತು ಎಂದು ಸಂತಸ ಹಂಚಿಕೊಂಡರು.

ಮಹೋತ್ಸವದಲ್ಲಿಂದು ಬೆಳಗ್ಗೆ 6:30ಕ್ಕೆ ಯೋಗ, ಕರಾಟೆ ಹಾಗೂ ಮಲ್ಲಕಂಬ ಪ್ರದರ್ಶನ ನಡೆಯಲಿವೆ. 8ಕ್ಕೆ ನೋಂದಣಿ ಕಾರ್ಯ. 10ಕ್ಕೆ ನಾಡಗೀತೆ ಹಾಗೂ ಶಾಲಾ ಪ್ರಾರ್ಥನೆಗೀತೆ. 10:40ಕ್ಕೆ ಅತಿಥಿಗಳ ಪರಿಚಯ. ಬೆಳಗ್ಗೆ 11:05ಕ್ಕೆ ಮೂರನೇ ದಿನದ ಕಾರ್ಯಕ್ರಮ ಉದ್ಘಾಟನೆ. ಮೈಸೂರು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಉದ್ಘಾಟನೆ ನೆರವೇರಿಸುವರು. 

ಕೊತ್ತಲಬಸವೇಶ್ವರ ಸದಾಶಿವ ಸ್ವಾಮೀಜಿ, ಖಾಜಾ ಬಂದೇನವಾಜ್‌ ದರ್ಗಾದ ಡಾ| ಸೈಯದ್‌ ಶಾ ಗೇಸುದರಾಜ ಖುಸ್ರೋ ಹುಸೇನ್‌ ಹಾಗೂ ಬೆಳಗಾವಿ ಕೆಎಲ್‌ಇ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಂಜೆ 6:30ಕ್ಕೆ ಗದಗನ ದಿವ್ಯಾಗ್ನ ಮಕ್ಕಳಿಂದ ಮಲ್ಲಕಂಬ. ತದನಂತರ ಖ್ಯಾತ ಗಾಯಕರಾದ ಸುನೀಲ ನೆಲೋಗಿ, ಸೈಯದ್‌ ಸುಹಾನ್‌, ಸಂಜಯ ಅಡೆR ಇತರ ಕಲಾವಿದರಿಂದ ಸಂಗೀತ ರಸಮಂಜರಿ ನಡೆಯಲಿದೆ.
 
ರಾಜ್ಯದಲ್ಲಿನ ಶೈಕ್ಷಣಿಕ ಕ್ಷೇತ್ರಕ್ಕೆ ವೀರಶೈವ ಲಿಂಗಾಯತ ಮಠಗಳ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ್ಯಾ ಪೂರ್ವ ಕಾಲದಿಂದಲೇ ನಾಡಿನ ಮಠಗಳು ಅನ್ನದಾಸೋಹ ಜತೆಗೆ ಶೈಕ್ಷಣಿಕ ದಾಸೋಹ ಕೈಗೊಂಡಿವೆ. ಇದರಲ್ಲಿ ಈ ಸಂಸ್ಥೆಯೂ ಸೇರಿದೆ. ಶರಣಬಸವೇಶ್ವರ ವಿದ್ಯಾವರ್ಧಕ
ಸಂಘ ತನ್ನ ಗುಣಾತ್ಮಕ ಶಿಕ್ಷಣದಿಂದ ಹೆಸರು ಮಾಡಿದೆ. ಸಂಶೋಧಾನಾಭಿವೃದ್ಧಿ ಇನ್ನಷ್ಟು ವೃದ್ಧಿಸಲಿ.
 ರಮೇಶ ಜಿಗಜಿಣಗಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next