Advertisement

SBI;ವ್ಯವಹಾರ ಬಗ್ಗೆ ಸರಕಾರದ ಜತೆ ಮಾತುಕತೆ:ಬಿಕ್ಕಟ್ಟು ಪರಿಹರಿಸುವ ಪ್ರಯತ್ನ

12:54 AM Aug 16, 2024 | Team Udayavani |

ಬೆಂಗಳೂರು: ತನ್ನ ಜತೆಗೆ ಭವಿಷ್ಯದಲ್ಲಿ ಯಾವುದೇ ವ್ಯವಹಾರ ನಡೆಸದೇ ಇರಲು ಕರ್ನಾಟಕ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಈಗ ಸರಕಾರದ ಜತೆಗೆ ಅಧಿಕೃತ ಸಂವಹನಕ್ಕೆ ಮುಂದಾಗಿದೆ.

Advertisement

ಈ ಸಂಬಂಧ ಹೇಳಿಕೆ ಹೊರಡಿಸಿರುವ ಎಸ್‌ಬಿಐ ರಾಜ್ಯ ಸರಕಾರ ಆ. 12ರಂದು ಹೊರಡಿಸಿದ್ದ ಆದೇಶದ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆಗೆ ಮಾತುಕತೆ ನಡೆಯುತ್ತಿದೆ. ಈ ಪ್ರಕರಣ ಸಂಬಂಧ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಯಾವುದೇ ಹೇಳಿಕೆ ನೀಡುವುದಕ್ಕೆ ಬ್ಯಾಂಕ್‌ ಬಯಸುವುದಿಲ್ಲ. ಆದಾಗಿಯೂ ಈ ಬಿಕ್ಕಟ್ಟನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಪ್ರಕಟನೆ ಮೂಲಕ ತಿಳಿಸಿದೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಶಿಫಾರಸಿನ ಹಿನ್ನೆಲೆಯಲ್ಲಿ ಎಸ್‌ಬಿಐ ಹಾಗೂ ಪಿಎನ್‌ಬಿ ಜತೆಗೆ ಸರಕಾರದ ಎಲ್ಲ ಇಲಾಖೆಗಳು, ನಿಗಮ, ಮಂಡಳಿಗಳು, ವಿಶ್ವವಿದ್ಯಾನಿಲಯಗಳು ತಾವು ಇಟ್ಟಿರುವ ಠೇವಣಿಯನ್ನು ವಾಪಸ್‌ ಪಡೆದು, ಭವಿಷ್ಯದಲ್ಲಿ ಯಾವುದೇ ವ್ಯವಹಾರ ನಡೆಸಕೂಡದು ಎಂದು ಹಣಕಾಸು ಇಲಾಖೆ ಹೊರಡಿಸಿದ ಆದೇಶದ ಬಗ್ಗೆ ಆ. 14ರಂದು ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.

ನೀವು ಮೊದಲು ಓದಿದ್ದು ಇಲ್ಲೇ…
“ಎಸ್‌ಬಿಐ, ಪಿಎನ್‌ಬಿ ಜತೆ ಸರಕಾರಿ ವ್ಯವಹಾರ ಬಂದ್‌’ ಶೀರ್ಷಿಕೆಯಲ್ಲಿ ಆಗಸ್ಟ್‌ 14ರಂದು ಉದಯ ವಾಣಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next