Advertisement

SBI ಸಾಲದ ಬಡ್ಡಿ ಶೇ.0.1 ಏರಿಕೆ: ಇಎಂಐ ದುಬಾರಿ

12:23 AM Jun 16, 2024 | Team Udayavani |

ಹೊಸದಿಲ್ಲಿ: ದೇಶದ ಅತೀದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಎಂಸಿಎಲ್‌ಆರ್‌ ದರವನ್ನು ಶನಿವಾರ 10 ಮೂಲಾಂಕ (0.1%)ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಎಸ್‌ಬಿಐನಲ್ಲಿ ಎಂಸಿಎಲ್‌ಆರ್‌ ಆಧಾರದಲ್ಲಿ ಸಾಲ ಪಡೆದಿರುವವರ ಇಎಂಐ ಕೂಡ ಇನ್ನು ಹೆಚ್ಚಳವಾಗಲಿದೆ.

Advertisement

ಹೀಗಾಗಿ, ವಾಹನ, ಗೃಹ ಸಾಲಗಳ ಇಎಂಐ ತುಟ್ಟಿ ಯಾ ಗಲಿದೆ. ಹೊಸ ಕ್ರಮದ ಪ್ರಕಾರ ಎಂಸಿಎಲ್‌ಆರ್‌ ಅನ್ವಯ 1 ವರ್ಷದ ಅವಧಿಗೆ ಸಾಲ ಪಡೆದಿರುವವರಿಗೆ ವಿಧಿಸಿರುವ ವಾರ್ಷಿಕ ಬಡ್ಡಿ ದರವು ಶೇ.8.65 ರಿಂದ ಶೇ. 8.75ಕ್ಕೆ ಹೆಚ್ಚಳವಾಗಲಿದೆ. ಸಾಲ ನೀಡುವ ಸಂಸ್ಥೆಯ ನಿರ್ವಹಣ ವೆಚ್ಚ, ನಿಧಿ ವೆಚ್ಚ, ಲಾಭಂಶ ಎಲ್ಲವನ್ನೂ ಪರಿಗಣಿಸಿ ಆ ಸಂಸ್ಥೆ ಯಾರಿಗಾದರೂ ಸಾಲ ನೀಡ ಬೇಕಾದಲ್ಲಿ ಇಷ್ಟೇ ಬಡ್ಡಿದರದಲ್ಲಿ ನೀಡ ಬಹುದು ಎಂದು ಕನಿಷ್ಠ ಬಡ್ಡಿ ದರವನ್ನು ಆರ್‌ಬಿಐ ನಿಗದಿ ಪಡಿಸಿರುತ್ತದೆ. ಈ ದರವು ಸಾಲಗಾರರ ಮೇಲೂ ಹೆಚ್ಚಿನ ಹೊರೆಯಾಗದಂತೆ ನಿಗದಿಯಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next