Advertisement
ಯಾವುದೇ ಅಹಿತಕರ ಕಾರಣದಿಂದಾಗಿ ನೀವು ಮತ್ತು ನಿಮ್ಮ ಕುಟುಂಬವನ್ನು ಯಾವುದೇ ರೀತಿಯ ಆರ್ಥಿಕ ಸಮಸ್ಯೆಯಿಂದ ಪಾರು ಮಾಡಲು ವಿಶ್ವಾಸಾರ್ಹ ಜೀವ ವಿಮೆಗಳು ಸಹಾಯ ಮಾಡುತ್ತದೆ. ತುರ್ತು ಸದರ್ಭಕ್ಕಾಗಿ ಜೀವ ವಿಮೆ ಪಾಲಿಸಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು.
Related Articles
Advertisement
ಎಸ್ ಬಿ ಐ ಆರಂಭಿಸಿರುವ ಈ ಯೋಜನೆಯಲ್ಲಿ, ಕೆಲವು ಗಂಭೀರ ಕಾಯಿಲೆಗಳಿಗೆ ಗುರಿಯಾದರೆ ಪ್ರೀಮಿಯಂನಲ್ಲಿ ರಿಯಾಯಿತಿ ಕೂಡ ಸಿಗಲಿದೆ.
ಈ ಯೋಜನೆಯಲ್ಲಿ 36 ಗಂಭೀರ ರೋಗಗಳು ಈ ಪಾಲಸಿ ವ್ಯಾಪ್ತಿಗೆ ಬರುತ್ತವೆ. ಅಷ್ಟೇ ಅಲ್ಲ ಸಂಪೂರ್ಣ ಪಾಲಿಸಿ ಅವಧಿಯಲ್ಲಿ ಪ್ರೀಮಿಯಂ ಸ್ಥಿರವಾಗಿರುತ್ತದೆ, ಅಂದರೆ ಹಣದುಬ್ಬರ ಹೆಚ್ಚಾದಂತೆ ಪ್ರೀಮಿಯಂ ಹೆಚ್ಚಿಸುವ ಬಗ್ಗೆ ನೀವು ಚಿಂತಿಸಬೇಕಾದ ಅವಶ್ಯಕತೆ ಇಲ್ಲ.
ಓದಿ : ನೀರನ್ನು ಯಾವ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು?
ಈ ಪಾಲಸಿಯ ಬಗ್ಗೆ ತಿಳಿಯಬೇಕಾದ ಕೆಲ ಅಂಶಗಳು ಇಂತಿವೆ :
ಈ ಪಾಲಿಸಿಯನ್ನು ಪಡೆಯಲು ಕನಿಷ್ಠ 18 ಮತ್ತು ಗರಿಷ್ಟ 65 ವರ್ಷ ಆದವರು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು.
ಕನಿಷ್ಠ 28 ಮತ್ತು ಗರಿಷ್ಟ 75 ವರ್ಷ ಈ ಪಾಲಿಸಿಯ ಮ್ಯಾಚುರಿಟಿ ವಯಸ್ಸಾಗಿದೆ.
ಕನಿಷ್ಠ 20 ಲಕ್ಷ ಹಾಗೂ ಗರಿಷ್ಟ 2.5 ಕೋಟಿ ರೂ. ಈ ಪಾಲಿಸಿಯ ಬೇಸಿಕ್ ಸ್ಯಾಮ್ ಅಷ್ಯೂರ್ಡ್ ಆಗಿದೆ.
ವಾರ್ಷಿಕ/ಅರ್ಧ ವಾರ್ಷಿಕ/ ತ್ರಿಮಾಸಿಕದಂತಹ ಪ್ರಿಮಿಯಂ ಮೋಡ್ ಈ ಪಾಲಿಸಿಗಿದೆ.
ಮಾಸಿಕ ಪ್ರಿಮಿಯಂ ಮೋಡ್ ನಲ್ಲಿ ಮೊದಲ ಮೂರು ತಿಂಗಳ ಪ್ರಿಮಿಯಂ ಅಡ್ವಾನ್ಸ್ ಪಾವತಿಸಬೇಕಾಗುತ್ತದೆ.
ಇನ್ನು ಈ ಪಾಲಸಿಯ ಅವಧಿ 10, 15, 20, 25 ಹಾಗೂ 30 ವರ್ಷಗಳಾಗಿವೆ.
ಓದಿ : ತಮಿಳು ನಾಡು : ದೇವರು ಖಂಡಿತವಾಗಿ ಶಿಕ್ಷಿಸುತ್ತಾನೆ : ಪಳನಿಸ್ವಾಮಿ