ನವದೆಹಲಿ: ದೇಶಾದ್ಯಂತ ಕೊರೊನಾ ವ್ಯಾಪಿಸುತ್ತಿರುವುದರಿಂದ ಜನರಿಗೆ ಆನ್‌ಲೈನ್ ಮೂಲಕ ತನ್ನಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಎಸ್‌ಬಿಐ ಅನುವು ಮಾಡಿಕೊಟ್ಟಿದೆ. ಅಲ್ಲದೆ, ಕೆವೈಸಿಯನ್ನು (ಗ್ರಾಹಕರನ್ನು ತಿಳಿಯುವ ಪ್ರಕ್ರಿಯೆ) ವಿಡಿಯೊ ಕರೆ ಮೂಲಕ ನಡೆಸುವ ಸೌಲಭ್ಯ ಕಲ್ಪಿಸಿದೆ.
ಎಸ್‌ಬಿಐನ ಯೊನೊ ಮೊಬೈಲ್ ಆ್ಯಪ್ ಮೂಲಕ ಇವನ್ನು ನಿರ್ವಹಿಸಬಹುದಾಗಿದೆ. ಯೊನೊ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಲ್ಲಿ “ನ್ಯೂ ಟು ಎಸ್‌ಬಿಐ’ ಆಯ್ಕೆ ಮಾಡಿ, ಆಧಾರ್, ಇತರೆ ಮಾಹಿತಿಗಳನ್ನು ತುಂಬಬೇಕು.
ಕೆವೈಸಿಗಾಗಿ ವಿಡಿಯೊ ಕರೆ ಮಾಡುವುದಕ್ಕೆ ಸಮಯ ನಿಗದಿ ಮಾಡಿಕೊಳ್ಳಬೇಕು. ಕೆವೈಸಿ ಮುಗಿದ ನಂತರ ಖಾತೆ ತಂತಾನೆ ಶುರುವಾಗಿರುತ್ತದೆ.
ಇದನ್ನೂ ಓದಿ :ಜನ ಸಾಯುತ್ತಿದ್ದರೆ ನೀವು ಮೋಜು ಮಾಡುತ್ತಿದ್ದಿರಿ: ಸೆಲೆಬ್ರಿಟಿಗಳ ವಿರುದ್ಧ ಸಿದ್ಧಕಿ ಆಕ್ರೋಶ