Advertisement

ಠೇವಣಿ ಮೇಲೆ ಎಸ್‌ಬಿಐ ಬಡ್ಡಿ ಇಳಿಕೆ

01:27 AM Jul 30, 2019 | Team Udayavani |

ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್‌ ಹಲವು ಅವಧಿಯ ಹೂಡಿಕೆಗಳ ಮೇಲೆ ಬಡ್ಡಿ ಇಳಿಕೆ ಮಾಡಿದ್ದು, ಸಣ್ಣ ಉಳಿತಾಯಗಾರರಿಗೆ ಆಘಾತ ನೀಡಿದೆ. ಇತ್ತೀಚೆಗೆ ಆರ್‌ಬಿಐ ರೆಪೋ ದರ ಇಳಿಕೆ ಮಾಡಿರುವುದು ಮತ್ತು ಇತರ ಕಾರಣದಿಂದಾಗಿ ಎಸ್‌ಬಿಐ ಈ ಇಳಿಕೆ ಮಾಡಿದೆ. 179 ದಿನಗಳೊಳಗಿನ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ.5.75 ರಿಂದ ಶೇ.5ಕ್ಕೆ, 211 ದಿನಗಳಿಂದ 1 ವರ್ಷದವರೆಗಿನ ಹೂಡಿಕೆಯ ಮೇಲೆ ಶೇ.6.40 ರಿಂದ ಶೇ. 6.25ಕ್ಕೆ ಬಡ್ಡಿ ದರ ಇಳಿಕೆ ಮಾಡಲಾಗಿದೆ.

Advertisement

ಅದೇ ರೀತಿ 1 ರಿಂದ 2 ವರ್ಷಗಳವರೆಗಿನ ಠೇವಣಿಯ ಮೇಲೆ ಶೇ. 7ರಿಂದ ಶೇ. 6.80ಕ್ಕೆ, 2 ರಿಂದ 3 ವರ್ಷಗಳವರೆಗಿನ ಠೇವಣಿಯ ಮೇಲೆ ಶೇ. 6.75 ರಿಂದ ಶೇ. 6.70 ಕ್ಕೆ ಬಡ್ಡಿ ದರ ಇಳಿಕೆ ಮಾಡಲಾಗಿದೆ. ಈ ಹಿಂದೆ ಮೇಯಲ್ಲೂ ಎಸ್‌ಬಿಐ ಬಡ್ಡಿ ದರ ಇಳಿಕೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next