ನವ ದೆಹಲಿ : ಗ್ರಾಹಕರು ತಮ್ಮ ಬ್ಯಾಂಕಿಂಗ್ ವಿವರಗಳ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ರಾಷ್ಟ್ರದ ಅತ್ಯಂತ ದೊಡ್ಡ ಬ್ಯಾಂಕ್ ಎಸ್ ಬಿ ಐ ತನ್ನ ಗ್ರಾಹಕರಿಗೆ ಮತ್ತೆ ತನ್ನ ಅಧಿಕೃತ ಟ್ವೀಟರ್ ಮೂಲಕ ಎಚ್ಚರಿಕೆ ನೀಡಿದೆ.
ತುರ್ತು ಸಂದರ್ಭದಲ್ಲಿ ಮನಿ ಟ್ರ್ಯಾನ್ಸ್ಯಾಕ್ಶನ್ ಮಾಡುವ ಅಗತ್ಯವಿದ್ದಲ್ಲಿ ಬ್ಯಾಂಕ್ ನ ಡಿಜಿಟಲ್ ಬ್ಯಾಂಕಿಂಗ್ ಗಾಗಿ ಇರುವ YONO App ಹಾಗೂ BHIM ಸೇವೆಗಳನ್ನು ಬಳಸಿ ಎಂದು ಕೂಡ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆ ನಿಡಿದೆ.
ಓದಿ : ಬೆಡ್ ಹಂಚಿಕೆಯಲ್ಲಿ ಭಾರೀ ಅವ್ಯವಹಾರ: ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ
ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವಂತೆ ಬ್ಯಾಂಕಿಂಗ್ ಸೈಬರ್ ಕ್ರೈಮ್ ಚಟುವಟಿಕೆಗಳು ಕೂಡ ಏರಿಕೆಯಾಗುತ್ತಿದೆ. ಖಾತೆದಾರರಿಗೆ ವಂಚನೆ ಮಾಡಲು ಹೊಸ ಮಾರ್ಗಗಳ ತಂತ್ರವನ್ನು ಸೈಬರ್ ವಂಚಕರು ಹೆಣೆದಿದ್ದಾರೆ. ಬ್ಯಾಂಕ್ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ನಕಲಿ ಬ್ಯಾಂಕ್ ನ ಆ್ಯಪ್ ಗಳ ಮೂಲಕ ಗ್ರಾಹಕರನ್ನು ವಂಚಿಸುತ್ತಿರುವ ಘಟನೆ ಬೆಳಕಿಗೆ ಬಂದಿರುವ ಕಾರಣದಿಂದಾಗಿ ಎಸ್ ಬಿ ಐ ಪದೇ ಪದೇ ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ಸೈಬರ್ ಕ್ರೈಮ್ ನ ಬಗ್ಗೆ ಎಚ್ಚರಿಕೆ ನೀಡುತ್ತಿದೆ.
Related Articles
ಸೈಬರ್ ವಂಚನೆಗೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಎಸ್ ಬಿ ಐ, ಇತ್ತೀಚಿನ ದಿನಗಳಲ್ಲಿ ವಂಚಕರು ಗ್ರಾಹಕರಿಗೆ KYC ಡಾಕ್ಯುಮೆಂಟ್ ಕೇಳುವುದರ ಜೊತೆಗೆ Quick View ಆ್ಯಪ್ ಗಳ ಮೂಲಕ ಗ್ರಾಹಕರಿಗೆ ಪಂಗನಾಮ ಹಾಕಲು ಯತ್ನಸುತ್ತಿದ್ದು, ಒಂದು ವೇಳೆ ಯಾವುದೇ ಒಬ್ಬ ಗ್ರಾಹಕರು ಅವರ ಈ ಬಲೆಗೆ ಬಿದ್ದರೆ, ಅವರ ಸ್ಮಾರ್ಟ್ ಫೋನ್ ನಿಂದ KYC ಹೆಸರಿನಲ್ಲಿ ಎಲ್ಲ ರೀತಿಯ ಸೂಕ್ಷ್ಮ ಹಾಗೂ ಗೌಪ್ಯ ಮಾಹಿತಿ ಕದಿಯುತ್ತಾರೆ. ಇದರಲ್ಲಿ ಗ್ರಾಹಕರ ಖಾತೆಯ ID, ಪಾಸ್ವರ್ಡ್ ಸೇರಿದಂತೆ ಇತರೆ ಮಾಹಿತಿಗಳನ್ನು ಅವರು ಪಡೆಯುತ್ತಾರೆ. ಹಾಗಾಗಿ ಈ ವಂಚನೆಗೆ ಬಲಿಯಾಗಬೇಡಿ ಎಂದು ಬ್ಯಾಂಕ್ ಕೇಳಿಕೊಂಡಿದೆ.
ಓದಿ : ಜನತೆ ನನಗೆ ಸೋತು ಗೆದ್ದಿರುವವರು ಎಂದು ಸರ್ಟಿಫಿಕೇಟ್ ನೀಡಿದ್ದಾರೆ: ಸತೀಶ್ ಜಾರಕಿಹೊಳಿ