Advertisement

ಸಾಯಿಶ್ರೀ ‘ಸೇವಾಸಿಂಧು’: ತೆಲಂಗಾಣದ ವಲಸೆ ಕಾರ್ಮಿಕರಿಗೆ ಉಡುಪಿಯಲ್ಲಿ ಆಪತ್ಬಾಂಧವಳಾದ ಟೆಕ್ಕಿ

01:17 AM May 20, 2020 | Hari Prasad |

ಉಡುಪಿ: ಮುಂಬಯಿಯವರಾದ ಆಕೆ ಅನ್ಯಕಾರ್ಯ ನಿಮಿತ್ತ ಮಣಿಪಾಲಕ್ಕೆ ಬಂದಿದ್ದವರು ಲಾಕ್‌ಡೌನ್‌ನಿಂದಾಗಿ ಅಲ್ಲೇ ಬಾಕಿಯಾಗಿದ್ದರು.

Advertisement

ಲಾಕ್‌ಡೌನ್‌ ಭಾಗಶಃ ತೆರವಾಗುತ್ತಿದ್ದಂತೆ ಉಡುಪಿಯ ರೈಲುನಿಲ್ದಾಣದಲ್ಲಿ ತೆಲಂಗಾಣದ ಅನಕ್ಷರಸ್ಥ ವಲಸೆ ಕಾರ್ಮಿಕರು ಊರಿಗೆ ತೆರಳಲು ಪರದಾಡುತ್ತಿರುವುದು ಕಣ್ಣಿಗೆ ಬಿತ್ತು.

ತಕ್ಷಣ ಆಕೆ ನಿಲ್ದಾಣದಲ್ಲಿಯೇ ಸ್ವಂತ ಲ್ಯಾಪ್‌ಟಾಪ್‌ ತೆರೆದರು, ಕಾರ್ಮಿಕರು ಮರಳಿ ಮನೆ ಸೇರಲು ‘ಸೇವಾಸಿಂಧು’ವಾದರು.

ಈಕೆ ಮಣಿಪಾಲ ಎಂಐಟಿಯ ಹಳೆ ವಿದ್ಯಾರ್ಥಿನಿ ಸಾಯಿಶ್ರೀ ಅಕೊಂಡಿ. ಇವರ ನೆರವು ಪಡೆದವರು ತೆಲಂಗಾಣದ 49 ಕಾರ್ಮಿಕರು. ಅಕ್ಷರ ಜ್ಞಾನವಿಲ್ಲದ ಅವರಿಗೆ ಅಡ್ಡಿಯಾಗಿದ್ದುದು ಇಂಟರ್‌ನೆಟ್‌ ಮೂಲಕ ‘ಸೇವಾ ಸಿಂಧು’ ವೆಬ್ ‌ಸೈಟ್‌ನಲ್ಲಿ ಹೆಸರು ನೋಂದಾವಣೆ.

ಸಾಯಿಶ್ರೀ 2018ರಲ್ಲಿ ಎಂಐಟಿಯಲ್ಲಿ ಬಿಟೆಕ್‌ ಪೂರೈಸಿದವರು. ಇತ್ತೀಚೆಗೆ ಮತ್ತೆ ಮಣಿಪಾಲಕ್ಕೆ ಬಂದಿದ್ದಾಗ ಲಾಕ್‌ಡೌನ್‌ ಆಯಿತು. ಕಾರ್ಯನಿಮಿತ್ತ ಉಡುಪಿ ರೈಲು ನಿಲ್ದಾಣಕ್ಕೆ ಹೋಗಿದ್ದಾಗ ಕಾರ್ಮಿಕರ ಕಷ್ಟ ಕಂಡು ತನ್ನಿಂದ ಸಹಾಯ ಸಾಧ್ಯವೇ ಎಂದು ಯೋಚಿಸಿದರು.

Advertisement

ಮೇ 12ರಂದು ‘ಸೇವಾ ಸಿಂಧು’ ವೆಬ್‌ಸೈಟ್‌ ತೆರೆದು ಎಲ್ಲ 49 ಜನ ವಲಸೆ ಕಾರ್ಮಿಕರ ಹೆಸರು ನೋಂದಾಯಿಸಿದರು. ಅಲ್ಲದೆ ಕಾರ್ಮಿಕರ ಸಂಕಷ್ಟದ ಬಗ್ಗೆ ತೆಲಂಗಾಣ ಸಿಎಂಗೆ ಟ್ಯಾಗ್‌ ಮಾಡುವ ಮೂಲಕ ಅವರ ಗಮನಸೆಳೆದರು. ಸಿಎಂ ಕಚೇರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ, ದೂರವಾಣಿ ಕರೆಯೂ ಬಂತು.

ಮಂಗಳವಾರ ಪ್ರಯಾಣ
ಮೇ 19ರಂದು ಮಧ್ಯಾಹ್ನ ಎರಡು ಕೆಎಸ್ಸಾರ್ಟಿಸಿ ಬಸ್‌ಗಳ ಮೂಲಕ ತೆಲಂಗಾಣದ ವಲಸೆ ಕಾರ್ಮಿಕರು ಪ್ರಯಾಣ ಆರಂಭಿಸಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಆಡಳಿತ ಯಂತ್ರಗಳೇ ಕೈ ಕಟ್ಟಿ ಕುಳಿತಿದ್ದಾಗ ಯುವತಿಯೊಬ್ಬಳ ಮನುಷ್ಯಸಹಜ ಸ್ಪಂದನೆ ಗಮನಸೆಳೆಯುತ್ತಿದೆ.


ಗೆಳೆಯ ಹಾಗೂ ಮಣಿಪಾಲ ಪೊಲೀಸರ ಸಾಥ್‌

ಸಾಯಿಶ್ರೀ ಮತ್ತು ಆಕೆಯ ಸಹಪಾಠಿ ವಿನೀತ್‌ ಇಂದ್ರಾಳಿ ರೈಲು ನಿಲ್ದಾಣದ ಬಳಿ ವಲಸೆ ಕಾರ್ಮಿಕರಿಗೆ ನೆರವಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಮಣಿಪಾಲ ಠಾಣೆಯ ಪೊಲೀಸ್‌ ಸಿಬಂದಿ ಸಹಕಾರ ನೀಡಿದ್ದಾರೆ.
ಕಾರ್ಮಿಕರ ಪ್ರಯಾಣಕ್ಕಾಗಿ ಕೆಎಸ್ಸಾರ್ಟಿಸಿ ಬಸ್‌ ಒದಗಿಸಲು ಮನವಿ ಮಾಡಿದಾಗ 2 ಬಸ್‌ ನೀಡಿದರೂ 1,98,200 ರೂ. ಬಾಡಿಗೆ ನಿಗದಿಪಡಿಸಿದ್ದರು.

ಇಲ್ಲೂ ಸಾಯಿಶ್ರೀ ಕಾರ್ಮಿಕ ಸ್ನೇಹಿಯಾಗಿ ಕೆಲಸ ಮಾಡಿದ್ದು, ಇಷ್ಟು ದೊಡ್ಡ ಮೊತ್ತವನ್ನು ಕಾರ್ಮಿಕರು ಭರಿಸಲು ಸಾಧ್ಯವಿಲ್ಲ ಎಂದು ಮತ್ತೆ ತೆಲಂಗಾಣ ಸರಕಾರದ ಸಹಾಯ ಯಾಚಿಸಿದರು. ಸ್ವತಃ ಸಾರ್ವಜನಿಕರಿಂದ 50 ಸಾವಿರ ರೂ. ಸಂಗ್ರಹಿಸಿದರು. ಅವರ ಆಗ್ರಹದ ಪರಿಣಾಮ ತೆಲಂಗಾಣ ಸರಕಾರವೇ ಉಳಿದ ಹಣವನ್ನು ಭರಿಸುವುದಾಗಿ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next