ಮೂಲದ ಹಾಕಿ ಆಟಗಾರ್ತಿ ಸಯೀದಾ ಖಾನಂ ಮಗುವನ್ನೂ ಸಂಭಾಳಿಸಿ ಹಾಕಿಯನ್ನೂ ಆಡಿ ಸೈ ಎನಿಸಿಕೊಂಡಿದ್ದಾರೆ. ಇಂತಹ ವಿಶೇಷ ಘಟನೆಗೆ ಸಾಕ್ಷಿಯಾಗಿದ್ದು ಧಾರವಾಡದಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್.
Advertisement
ಧಾರವಾಡ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಬಳ್ಳಾರಿ ಮತ್ತು ಹಾಸನ ತಂಡದ ನಡುವೆ ಹಾಕಿ ಪಂದ್ಯ ನಡೆಯಿತು. ಬಳ್ಳಾರಿ ಪರ ಆಡಿದ ಸಯೀದಾ ತಂಡ 2-1ರಿಂದ ಗೆಲ್ಲಲು ನೆರವಾದರು. ಸಯೀದಾರ ಕ್ರೀಡಾಸ್ಫೂರ್ತಿಎದುರಾಳಿ ಹಾಸನ ಆಟಗಾರ್ತಿಯರನ್ನು ಅಚ್ಚರಿಗೆ ದೂಡಿತು.
ಸಯೀದಾ 22 ವರ್ಷದ ಆಟಗಾರ್ತಿ. ಕಳೆದ ಎರಡು ವರ್ಷದ ಹಿಂದೆ ಬೆಂಗಳೂರಿನ ಮೊಹಮ್ಮದ್ ಅಕºರ್ ಜಲಾವುಲ್ಲಾರನ್ನು ವಿವಾಹವಾದರು. ಈಗ ದಂಪತಿಗೆ 10 ತಿಂಗಳು ಮಗುವಿದೆ. ರಾಜ್ಯ ಒಲಿಂಪಿಕ್ಸ್‌ನಲ್ಲಿ ಹಾಸನ ಕೂಡ ಬಲಿಷ್ಠವಾಗಿದ್ದರಿಂದ ಬಳ್ಳಾರಿ ಕೋಚ್ ಸಯೀದಾರನ್ನು ಆಡಿಸುವ ನಿರ್ಧಾರ ಮಾಡಿದರು. ಈ ರೀತಿಯ ಒಂದು
ನಿರೀಕ್ಷೆಯಿದ್ದಿದ್ದರಿಂದ ಸಯೀದಾ ಅಭ್ಯಾಸವನ್ನೂ ನಡೆಸಿದ್ದರು. ಪತಿಯೂ ಅದಕ್ಕೆ ಬೆಂಬಲವಾದರು. ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ದು ಸಯೀದಾ ಬಾಟಲಿಯಲ್ಲಿ ಹಾಲು ಮಗುವಿಗೆ ಹಾಲು ಕುಡಿಸುತ್ತ ಕುಡಿಸುತ್ತಲೇ ಮಗುವನ್ನು ಬೇರೆಯವರ ಕೈಗೆ ಒಪ್ಪಿಸಿ ಕೈಯಲ್ಲಿ ಸ್ಟಿಕ್ ಹಿಡಿದು ಕಣಕ್ಕಿಳಿದಿದ್ದು. ಕಳೆದ 13 ವರ್ಷದಿಂದ ಹಾಕಿ ಆಡುತ್ತಿರುವ ಸಯೀದಾ
ತನ್ನ ಕ್ರೀಡೆಗಾಗಿ ತಮ್ಮನ್ನು ಅರ್ಪಿಸಿಕೊಂಡಿರುವ ರೀತಿಗೆ ಸಾಕ್ಷಿಯಿದು. ಭಾರತ ತಂಡದಲ್ಲೂ ಆಡಿದ್ದಾರೆ: ವಿಶೇಷವೆಂದರೆ ಭಾರತ ಕಿರಿಯರ ತಂಡದ ಪರ ಏಷ್ಯನ್ ಗೇಮ್ಸ್‌ನಲ್ಲೂ ಆಡಿದ್ದಾರೆ. ರಾಜ್ಯದಲ್ಲೂ ದೀರ್ಘಕಾಲದಿಂದ ಹಾಕಿ ಆಡಿದ್ದಾರೆ. ತನ್ನ ತಂಡ ಬಳ್ಳಾರಿ ಚಾಂಪಿಯನ್ ಆಗುವವರೆಗೂ ತಾನು ವಿರಮಿಸುವುದಿಲ್ಲ ಎಂದು ಸಯೀದಾ ಹೇಳುತ್ತಾರೆ.