Advertisement

ಸಯಾನ್‌ ಜಿಎಸ್‌ಬಿ ಸೇವಾ ಮಂಡಳ: ಆಧ್ಯಾತ್ಮಿಕ ಶಿಬಿರ ಸಮಾರೋಪ

04:12 PM May 29, 2019 | Team Udayavani |

ಮುಂಬಯಿ: ಜಿಎಸ್‌ಬಿ ಸೇವಾ ಮಂಡಲದ ಆಶ್ರಯದಲ್ಲಿ ವಾರ್ಷಿಕ ಆಧ್ಯಾತ್ಮಿಕ ಶಿಬಿರವು ಮಂಡಲದ ಶ್ರೀ ಗುರುಗಣೇಶ ಪ್ರಸಾದ ಸಭಾಗೃಹದಲ್ಲಿ ಮೇ 20 ರಿಂದ ಮೇ 26 ರವರೆಗೆ ನಡೆಯಿತು.

Advertisement

ಸಮಾಜದ ಉಪನಯನವಾದ ವಟುಗಳಿಗೆ ಸಂಧ್ಯಾವಂದನೆ, ಉತ್ತಮ ಬೋಧನೆಯನ್ನು ಪಂಡಿತ್‌ ಎಂ. ನರಸಿಂಹ ಆಚಾರ್ಯ ಮಂಗಳೂರು, ವೇದಮೂರ್ತಿ ಎಚ್‌. ವೆಂಕಟೇಶ್‌, ವೇದವ್ಯಾಸ ಭಟ್‌, ಹೇಮ ಪ್ರಕಾಶ್‌ ಶೆಣೈ, ಶಿವಾನಂದ ಭಟ್‌, ಮೋಹನ್‌ ಶೆಣೈ ಮೊದಲಾದ ಹಿರಿಯ ವಿದ್ವಾಂಸರಿಂದ ಮಕ್ಕಳಿಗೆ ತರಬೇತಿ ನೀಡಲಾಯಿತು. ಸುಮಾರು ಮೂವತ್ತು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಂಡರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಕೊಡುಗೈದಾನಿ ಸುಗುಣಾ ಕಮಲಾಕ್ಷ ಕಾಮತ್‌ ದಹಿಸರ್‌ ವಹಿಸಿದ್ದು, ಶಿಬಿರದ ಪೂರ್ಣ ಉಸ್ತುವಾರಿ ವಹಿಸಿದ ಮಂಡಳದ ಹಿರಿಯ ಕಾರ್ಯಕರ್ತರಾದ ವೇ|ಮೂ| ವಿಜಯ ಎಸ್‌. ಭಟ್‌ ಮತ್ತು ವೈದಿಕರು ಪ್ರಾರ್ಥನೆಗೈದರು. ಸೇವಾ ಮಂಡಳದ ಟ್ರಸ್ಟಿ ಆರ್‌. ಜಿ. ಭಟ್‌ ಅವರು ಅತಿಥಿಗಳನ್ನು ಪರಿಚಯಿಸಿ, ಸಮಾಜದ ಪೂಜ್ಯ ಗುರುವರ್ಯರಾದ ಶ್ರೀ ಕಾಶೀ ಮಠಾಧೀಶ ವೃಂದಾವನಸ್ಥ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಆದೇಶ ಹಾಗೂ ಮಾರ್ಗದರ್ಶನದಂತೆ ಈ ಶಿಬಿರವು ನಡೆದು ಬಂದಿದೆ. ಸಮಾಜದ ವಟುಗಳಿಗೆ ಸಂಧ್ಯಾವಂದನೆ ಉಪಾಸನೆ, ಯೋಗ, ಸತ್ಸಂಗ, ಭಜನೆ, ಧಾರ್ಮಿಕ ಆಚರಣೆ, ಮೊದಲಾದ ವಿಚಾರಗಳ ಬೋಧನೆ ಪಡೆದುದರಿಂದ ಮುಂದೆ ಜೀವನದಲ್ಲಿ ಯಶಸ್ಸು ಸಿಗಲಿದೆ ಎಂದು ಆಶಿಸಿದರು.

ಶಿಬಿರದ ಮುಖ್ಯ ಉಪನ್ಯಾಸಕ ಪಂಡಿತ್‌ ನರಸಿಂಹ ಆಚಾರ್ಯ ಅವರು
ಮಾತನಾಡಿ, ಶಿಬಿರದಲ್ಲಿ ವಟುಗಳಿಗೆ ಅಧ್ಯಯನ ಮತ್ತು ಗಾಯತ್ರಿ ಉಪಾಸನೆಯ ಮಹತ್ವ ತಿಳಿಸಿದರು. ಬಳಿಕ ಗಾಯತ್ರಿ ಉಪಾಸನೆಯ ಉದ್ದೇಶವಿವರಿಸಿ, ತಾವು ಅಧ್ಯಯನ ಮಾಡಿದ ಮಂತ್ರ-ಧ್ಯಾನ ಸೂಕ್ತಾದಿಗಳನ್ನು ಪಠಿಸಿದರು.

ಅತಿಥಿಗಳಾಗಿದ್ದ ಶಶಿಧರ ಪೈ ದಂಪತಿ ವಟುಗಳಿಗೆ ಬಹುಮಾನವನ್ನಿತ್ತು ಗೌರವಿಸಿದರು. ನ್ಯಾಯವಾದಿ ಜಿ. ಎಸ್‌. ಕಿಣಿ ಅವರು ಮಾತನಾಡಿ, ಗುರುಕುಲ ಪದ್ಧತಿ ನಮ್ಮನ್ನು ಉನ್ನತ ಸ್ಥಾನಕ್ಕೆ ಏರಲು ಬೇಕಾದ ಸಂಯಮ ಜ್ಞಾನದ ಮೂಲಕ ಆತ್ಮಸ್ಥೈರ್ಯ ವೃದ್ಧಿಗಾಗಿ ನಿತ್ಯ ಮಾಡುವ ಸಂಧ್ಯಾವಂದನೆ, ಉಪಾಸನೆ ಕಾರಣ. ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Advertisement

ಸುಗುಣಾ ಕಾಮತ್‌ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈಗಿನ ಸಮಯದಲ್ಲಿ ಯುವ ಪ್ರತಿಭೆಗಳು ಮುಂದೆ ಸಮಗ್ರ ಅಭಿವೃದ್ಧಿ ಕಾಣಬೇಕಾದಲ್ಲಿ ಇಂತಹ ಶಿಬಿರಗಳ ಅಗತ್ಯವಿದೆ ಎಂದರಲ್ಲದೆ ಶಿಬಿರಕ್ಕೆ ಮಕ್ಕಳನ್ನು ಕಳುಹಿಸಿದ ಪಾಲಕರನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಸುಗುಣಾ ಕಾಮತ್‌, ನ್ಯಾಯವಾದಿ ಜೆ. ಎಸ್‌. ಕಿಣಿ, ಶಶಿಧರ ಪೈ ದಂಪತಿ, ಸೇವಾ ಮಂಡಲದ ಉಪಾಧ್ಯಕ್ಷ ಯಶವಂತ್‌ ಕಾಮತ್‌, ಕೋಶಾಧಿಕಾರಿ ಕೃಷ್ಣ ಪೈ, ಕಾರ್ಯದರ್ಶಿ
ಶಿವಾನಂದ ಭಟ್‌ಉಪಸ್ಥಿತರಿದ್ದರು.

ವೇದಮೂರ್ತಿ ವಿಜಯ ಎಸ್‌. ಭಟ್‌ ಅವರು ಶಿಬಿರದಲ್ಲಿ ಬೋಧಿಸಿದ ಪಂಡಿತ್‌ ಎಂ. ನರಸಿಂಹ ಆಚಾರ್ಯ ಮತ್ತು ತಂಡದವರಿಗೆ, ಫಲಾಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಆಯೋಜಿಸಿದ ತೊಡಾರ್‌ ವಿಷ್ಣುದಾಸ್‌ ಪೈ ಅವರಿಗೆ ವಂದಿಸಿದರು. ಸೇವಾ ಮಂಡಲದ ಟ್ರಸ್ಟಿಗಳಾದ ದೀಪಕ್‌ ಕಾಮತ್‌, ಸುರೇಶ್‌
ಭಟ್‌, ಅನಂತ ಶೆಣೈ, ವಟುಗಳ ಮಾತಾಪಿತರು ಉಪಸ್ಥಿತರಿದ್ದರು. ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next