Advertisement

ಸೇ ನೋ ಟು ಡ್ರಗ್ಸ್‌ !

06:00 AM Oct 05, 2018 | Team Udayavani |

ಮಾದಕ ವ್ಯಸನ ವಿರೋಧಿ ಮಾಸಾಚರಣೆಯನ್ನು ಉಡುಪಿಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಬಲವಾಗಿಯೇ ವಿದ್ಯಾರ್ಥಿಗಳಿಂದ ಹಿರಿಯರವರೆಗೂ say no to drugs ಎನ್ನುವ ಧ್ವನಿಗೆ ಜೊತೆಯಾದದ್ದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜೊತೆಗೆ ಉಡುಪಿ ಪೊಲೀಸ್‌ ಇಲಾಖೆ ಮತ್ತು ಪ್ರಸ್‌ ಕ್ಲಬ್‌, ಉಡುಪಿ. ಕಳೆದ ಒಂದು ತಿಂಗಳಿನಿಂದ ಉಡುಪಿಯ ನಾನಾ ಬೀದಿಗಳಲ್ಲಿ ವಿವಿಧ ಬಗೆಯ ಕಾರ್ಯಕ್ರಮವನ್ನು ಮಾಡಿ ಸಹಿ ಸಂಗ್ರಹಿಸಿ ಸೆಲ್ಫಿ ತೆಗೆಯುವ ವಿನೂತನ ಪ್ರಯತ್ನದಿಂದ ವಿದ್ಯಾರ್ಥಿಗಳಲ್ಲಿ ಜಾಗ್ರತೆಯನ್ನು ಮೂಡಿಸುತ್ತಿದೆ. ಇದನ್ನು ನಗರದ ಪ್ರಮುಖ  ಮಾಲ್‌ಗ‌ಳಲ್ಲಿ ಮತ್ತು ಇನ್ನಿತರ ಕಡೆಗಳಲ್ಲಿ ಇಡಲಾಗಿತ್ತು.

Advertisement

ಇದರ ಮುಂದುವರಿದ ಭಾಗವಾಗಿ ಕಳೆದ ಭಾನುವಾರ ಮಣಿಪಾಲ್‌ ರನ್ನರ್ಸ್‌ ಕ್ಲಬ್‌ ಮಾದಕ ವ್ಯಸನ ಮುಕ್ತಕ್ಕಾಗಿ ತನ್ನ ಬೆಂಬಲವನ್ನು ನೀಡಿ ಪೊಲೀಸ್‌ ಇಲಾಖೆ ಮತ್ತು ಕಾರ್ಯನಿರತ ಪತ್ರಕರ್ತರ ಜೊತೆಗೊಡಿ un against Drug abuse ಎನ್ನುವ ಧ್ಯೇಯವನ್ನು ಇಟ್ಟುಕೊಂಡು ಮ್ಯಾರಥಾನ್‌ ಓಟವನ್ನು ಆಯೋಜನೆ ಮಾಡಿತ್ತು.

ಮ್ಯಾರಥಾನ್‌ಗೆ ಉಡುಪಿ ಮಾತ್ರವಲ್ಲದೆ, ಮಂಗಳೂರಿನಿಂದ ಕೂಡ ವಿದ್ಯಾರ್ಥಿಗಳು ಬಂದು ಯಶಸ್ಸು ಮಾಡಿರುವುದು ಖುಷಿಯ ವಿಚಾರ. ಮ್ಯಾರಥಾನ್‌ ಆರಂಭವಾದದ್ದು ಬೆಳಗ್ಗೆ 7.30ರ ಹೊತ್ತಿಗೆ. ಆದರೆ ಜನಸಾಗರ ಬಂದು ಸಾಲುಗಟ್ಟಿ ನಿಂತಿರೋದು ಬೆಳಗ್ಗೆ 5 ಗಂಟೆಯಿಂದ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮ್ಯಾರಥಾನ್‌ನ ಧ್ಯೇಯವನ್ನು ಬೆಂಬಲಿಸುವುದರ ಜೊತೆಗೆ ಅಭೂತಪೂರ್ವ ಯಶಸ್ಸನ್ನು ಕೂಡ ಕಂಡಿತು.
ಟೀಶರ್ಟ್‌ ಪಡೆದುಕೊಂಡು ಒಂದಿಷ್ಟು ವ್ಯಾಯಾಮ ಮಾಡಿ 5 ಕಿ. ಮೀ. ಓಡಿ, ಜನರಲ್ಲಿ ಮಾದಕ ವ್ಯಸನದ ಅಪಾಯದ ಬಗ್ಗೆ ಅರಿವನ್ನು ಮೂಡಿಸಲು ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಜನ ಮೂರು ಸಾವಿರಕ್ಕೂ ಮಿಕ್ಕಿತ್ತು.

ಮಣಿಪಾಲ್‌ ವಿ.ವಿ.ಯ ವಿದ್ಯಾರ್ಥಿಗಳು, ಅಕ್ಕಪಕ್ಕದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ರಜೆಯ ದಿನವನ್ನು ನಿದ್ದೆಯಲ್ಲಿ ಕಳೆಯದೇ ಹುಮ್ಮಸ್ಸಿನಿಂದ ಬಂದ ಗಂಡಸರು, ಪಾಠದ ನಡುವೆ ಬಿಡುವು ಸಿಕ್ಕ ದಿನದಲ್ಲಿ ವಿದ್ಯಾರ್ಥಿಗಳ ಹಿಂದೆ ಹಿಂದೆ ಮನೆಯ ಮಾತುಕತೆಯಾಡುತ್ತ ಓಡುತ್ತಿರುವ ಲೆಕ್ಚರರ್ಸ್‌ಗಳು, ಅಪ್ಪ-ಅಮ್ಮನ ಜೊತೆ ಬಿಟ್ಟು ಉತ್ಸಾಹದಿಂದ ವೇಗವಾಗಿ ಮುಂದೆ ಓಡುತ್ತ ಕೊನೆಗೆ ಕಾಲಿನೋವಿನಿಂದ ಕುಂಟುತ್ತ ಮೆಲ್ಲನೆ ಓಡುತ್ತಿರುವ ಪುಟ್ಟ ಮಕ್ಕಳು.

ಇಯರ್‌ ಫೋನ್‌ ಹಾಕಿಕೊಂಡು ಸುಸ್ತನ್ನು ಅಲ್ಲಗೆಳೆದು ದಣಿಯದೇ ಓಡುತ್ತಲೇ ಇರುವ ಕೆಲ ತರುಣ-ತರುಣಿಯರು, ಓಡುತ್ತ ದಣಿದು ಏದುರುಸಿರು ಬಿಡುತ್ತ ನಡೆದು ಹೋಗುತ್ತಿರುವವರನ್ನು ಚಿಯರ್‌ ಆಪ್‌ ಮಾಡಿ ಮುಂದೆ ಹೋಗಿ ನೀರು ಸರಬರಾಜು ಮಾಡಿ ಸ್ಪರ್ಧಾಳುಗಳಲ್ಲಿ ಉತ್ಸಾಹದ ಚಿಗುರು ಭರಿಸುವ ಸ್ವಯಂಸೇವಕರ ತಂಡ ನಿರ್ವಹಿಸಿದ ಪಾತ್ರ ಶ್ಲಾಘನೀಯ.

Advertisement

ಹೀಗೆ, ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ಮೊದಲ ಬಾರಿ ಮ್ಯಾರಥಾನ್‌ ಒಂದರಲ್ಲಿ ಓಡಿದ್ದು ಖುಷಿಯಾಯಿತು. ಇವೆಲ್ಲವೂ ಸಾಧ್ಯವಾದದ್ದು ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರಸ್‌ ಕ್ಲಬ್‌ ಉಡುಪಿ ಜೊತೆಗೆ ರನ್ನ‌ರ್ಸ್‌ ಕ್ಲಬ್‌ ಮಣಿಪಾಲ್
 say no to drugs…

ಸುಹಾನ್‌
ನಿಕಟಪೂರ್ವ ಹಳೆವಿದ್ಯಾರ್ಥಿ, ಎಂಜಿಎಂ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next