Advertisement
ಇಲ್ಲಿನ ದೇಶಪಾಂಡೆ ನಗರದಲ್ಲಿನ ಸವಾಯಿ ಗಂಧರ್ವ ಕಲಾ ಮಂದಿರದ ನವೀಕರಣದ ವೃತ್ತಾಂತವಿದು. ಕಲಾ ಮಂದಿರದ ನವೀಕರಣಕ್ಕೆ ಈಗಾಗಲೇ ಸುಮಾರು 2.05 ಕೋಟಿ ರೂ.ನಷ್ಟುಅನುದಾನ ನೀಡಲಾಗಿದ್ದು, ಕಾಮಗಾರಿ ವೇಗ ಮಾತ್ರ ನಿರೀಕ್ಷಿತ ರೀತಿಯಲ್ಲಿಲ್ಲ ಎಂಬುದು ಹಲವರ ಅಸಮಾಧಾನವಾಗಿದೆ. ಕಲಾ ಮಂದಿರ ದ್ವಾರ ಬದಲಾವಣೆ ಕುರಿತಾಗಿ ಸಣ್ಣ ವಿವಾದವೂ ಎದ್ದಿತ್ತು.
Related Articles
Advertisement
ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದ ಕಾಮಗಾರಿ ಮುಗಿದ ಅನಂತವೂ ಮಂದಿರದಲ್ಲಿ ಇನ್ನೂ ಆಸನ, ಹವಾ ನಿಯಂತ್ರಿತ ವ್ಯವಸ್ಥೆ, ಪ್ಲೋರಿಂಗ್, ಪ್ಲಾಸ್ಟರಿಂಗ್ ಹಾಗೂ ವಿದ್ಯುತ್ ಸೌಲಭ್ಯ ಅಳವಡಿಕೆ ಕಾರ್ಯ ಆಗಬೇಕಿದೆ. ಇದಕ್ಕಾಗಿ ಮತ್ತೂಂದು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಟೆಂಡರ್ ಪಡೆದ ಗುತ್ತಿಗೆದಾರ ಸದ್ಯದಲ್ಲೇ ಕಾಮಗಾರಿ ಆರಂಭಿಸಬೇಕಿದೆ.
ಜಿಲ್ಲಾಧಿಕಾರಿ ಡಾ|ಎಸ್.ಬಿ.ಬೊಮ್ಮನಹಳ್ಳಿ, ತಹಶೀಲ್ದಾರ ಶಶಿಧರ ಮಾಡ್ಯಾಳ, ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಸವಾಯಿ ಗಂಧರ್ವ ಕಲಾ ಮಂದಿರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಲಾಮಂದಿರಕಾಮಗಾರಿಗೆ ಬೇಕಾಗುವ ಅನುದಾನ ನೀಡಲಾಗಿದ್ದು, ವೇದಿಕೆ ನವೀಕರಣಕ್ಕೆ ಬೇಕಾಗುವ ಹಣವನ್ನು ಪಾಲಿಕೆ ವಿಶೇಷ ಅನುದಾನದಲ್ಲಿ ನೀಡಲು ನಿರ್ಧರಿಸಲಾಗಿದೆ.
ಕಲಾ ಮಂದಿರದ ಬಾಕಿ ಉಳಿದಿರುವ ಕಾಮಗಾರಿಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರ ವ್ಯಕ್ತಪಡಿಸಿದ್ದು, ಅಷ್ಟರೊಳಗೆ ಕಾಮಗಾರಿ ಪೂರ್ಣಗೊಂಡು ಕಲಾ ಮಂದಿರಸಾರ್ವಜನಿಕ ಸೇವೆಗೆ ಲಭ್ಯವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.
* ಬಸವರಾಜ ಹೂಗಾರ