Advertisement

ಸಾವಿತ್ರಿಬಾಯಿ ಪುಲೆ ಜೀವನ ಎಲ್ಲರಿಗೂ ಮಾದರಿ : ಡಾ.ಹನುಮಂತ ನಾಥ ಸ್ವಾಮೀಜಿ

09:41 PM Jan 05, 2023 | Team Udayavani |

ಕೊರಟಗೆರೆ :ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆ ರವರು ದೇಶದಲ್ಲಿ ಮಾಡಿದ ಶೈಕ್ಷಣಿಕ ಮತ್ತು ಸಾಮಾಜಿಕ ಸುದಾರಣೆಗಳು ಉತ್ತಮವಾದ ಕಾರ್ಯಕ್ರಮಗಳಾಗಿದ್ದು ಅವರ ಜೀವನದ ಆದರ್ಶ ಇಂದಿನ ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತ ನಾಥ ಸ್ವಾಮೀಜಿ ತಿಳಿಸಿದರು.

Advertisement

ಕೊರಟಗೆರೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆವರಣದಲ್ಲಿ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಸಾವಿತ್ರಿಭಾಯಿ ಪುಲೆ ಶಿಕ್ಷಕಿಯರ ಸಂಘದ ಕೊರಟಗೆರೆ ತಾಲೂಕು ಶಾಖೆ ವತಿಯಿಂದ ಏರ್ಪಸಿದ್ದ ರಕ್ತದಾನ ಮತ್ತು ನೇತ್ರಧಾನ ಶಿಬಿರದ ದಿವ್ಯ ಸಾನಿದ್ಯವಹಿಸಿ ಮಾತನಾಡಿ, ಹಲವಾರು ಅವಮಾನ ಅಪಮಾನಗಳನ್ನು ಸಹಿಸಕೊಂಡು ಹಿಡಿದು ಪಟ್ಟು ಬಿಡದೆ ಶಿಕ್ಷಣ ಕಲಿತು ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಮಹಿಳೆಯರಿಗೆ ಶಿಕ್ಷಣ ನೀಡಿ ಸಾಧನೆ ಮಾಡಿದ ಅಕ್ಷರದ ಅವ್ವ ಶೈಕ್ಷಣಿಕ ಕ್ರಾಂತಿಯಾಗಿ ಮಾಡಿದ ಸಾವಿತ್ರಿಬಾಯಿ ಫುಲ್ಲೆ ಅವರ ಸದಾ ಸ್ಮರಣೀರು. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತ ಎನ್ನುವ ಕಾಲ ಮುಗಿದಿದ್ದು ಈಗ ಎಲ್ಲಾ ರಂಗದಲ್ಲೂ ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ, ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರದ್ದು ಸಿಂಹಪಾಲಾಗಿದ್ದು ಉತ್ತಮ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವಂತಹ ಶಕ್ತಿ ಶಿಕ್ಷಕಿಯರಿಗಿದೆ ಎಂದು ತಿಳಿಸಿದರು.

ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಕ್ಷರ ವಂಚಿತ ಸಮುದಾಯಗಳಿಗೆ ಬೆಂಬಲಿಸಿ ಖುದ್ದು ತಾವೇ ಶಿಕ್ಷಕಿಯಾಗಿ ಅಕ್ಷರ ಕಲಿಸಿ ಮಹಿಳೆಯಾಗಿ ಜಾತಿ ವ್ಯವಸ್ಥೆವಿರುದ್ದ ಶಿಕ್ಷಣದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುವುದರೊಂದಿಗೆ ಸಮಾಜದಲ್ಲಿನ ಮಹಿಳೆಯರ ಮೇಲಿನ ಅನಿಷ್ಠ ಪದ್ದತಿಯನ್ನು ಹೋರಾಟದ ಮೂಲಕ ಕೊನೆಗಾಣಿಸಿದ ಅಕ್ಷರ ಮಾತೆ ಸಾವಿತ್ರಿಬಾಯಿ ಪುಲ್ಲೆ ರವರ ಕಾರ್ಯ ಅವಿಸ್ಮರಣೀಯ ನಮಗೆಲ್ಲ ಅವರು ಅನುಕರಣೀಯ ಅವರ ಆದರ್ಶ ಸಾಮಾಜಿಕ ನ್ಯಾಯಕ್ಕಾಗಿ ಅಕ್ಷರ ಸಮಾಜಕ್ಕಾಗಿ ಶ್ರಮಿಸಿದ ಅವರಿಗೆ ನಾವೆಲ್ಲಾ ಕೃತಜ್ಞತೆ ಸಲ್ಲಿಸಬೇಕು. ಅವರು ಸಮಾಜದಲ್ಲಿ ದಾನದಲ್ಲಿ ಶ್ರೇಷ್ಠ ದಾನ ರಕ್ತದಾನವಾಗಿದ್ದು ಜೀವ ಹೋಗುವಂತಹ ವ್ಯಕ್ತಿಗೆ ರಕ್ತ ನೀಡುವ ಮೂಲಕ ಜೀವ ಉಳಿಸುವಂತಹ ಕಾರ್ಯ ರಕ್ತದಾನದಿಂದ ಆಗುತ್ತದೆ. ಹಾಗೇ ನೇತ್ರದಾನವೂ ಸಹ ಮಹತ್ತರ ದಾನವಾಗಿದ್ದು ಪ್ರಪಂಚವನ್ನು ನೋಡಲಾರದ ವ್ಯಕ್ತಿಗೆ ಪ್ರಪಂಚ ನೋಡುವ ಅವಕಾಶವನ್ನು ನೇತ್ರದಾನದಿಂದ ಕಲ್ಪಿಸಬಹುದಾಗಿದೆ ಇಂತಹ ಮಹತ್ವದ ರಕ್ತ ಮತ್ತು ನೇತ್ರದಾನ ಶಿಭಿರ ಗಳನ್ನು ಮಾಡಿಸುವ ಮೂಲಕ ಅಕ್ಷರ ಮಾತೆ ಸಾವಿತ್ರಿಬಾಯಿ ಪುಲ್ಲೆ ಜನ್ಮದಿನಾಚರಣೆ ಅರ್ಥಪೂರ್ಣವಾಗಿ ಶಿಕ್ಷಕಿಯರು ಆಚರಣೆ ಮಾಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಸಂಪೂರ್ಣ ಹೈ ಫೌಂಡೇಶನ್ ನಿರ್ದೇಶಕಿ ರಜಿನಿ ಮಾತನಾಡಿ ಮನುಷ್ಯನು ಅಪಘಾತಗಳಾಗಿ ಮೃತಪಟ್ಟಾಗ ಮೃತನ ಕೆಲವು ಅಂಗಾಂಗಗಳು ಮತ್ತೊಬ್ಬ ವ್ಯಕ್ತಿಗೆ ಜೋಡಿಸಿದಾಗ ಆ ವ್ಯಕ್ತಿಗೆ ಜೀವದಾನ ಮಾಡಿದಂತಾಗುತ್ತದೆ, ಅನೇಕ ಜನರು ತಮ್ಮ ಅಂಗಾಂಗಗಳನ್ನು ದಾನ ಮಾಡುವುದಾಗಿ ಆಸ್ಪತ್ರೆಗಳಿಗೆ ತಿಳಿಸಿರುತ್ತಾರೆ ಆದರೆ ಅವರು ಅವರ ಮನೆಯವರಿಗೆ ತಿಳಿಸಿರಬೇಕು, ಅವರ ಮರಣದ ನಂತರ ಸಂಬಂಧಿಕರು ಹತ್ತಿರದ ಆಸ್ಪತ್ರೆಗೆ ತಿಳಿಸಿದರೆ ಮತ್ತೊಂದು ಜೀವ ಉಳಿಸುವ ಅನುಕೂಲವಾಗುತ್ತದೆ. ಇಂತಹ ವಿಷಯವನ್ನು ಸಂಬಂಧಪಟ್ಟವರಿಗೆ ವಿಷಯ ತಿಳಿಯದೆ ಇರುವವರು ವಿಷಾದನೀಯ ಇನ್ನು ಮುಂದಾದರು ನಿಮ್ಮ ಮರಣದ ನಂತರ ನಿಮ್ಮ ಅಂಗಾಂಗಗಳನ್ನು ದಾನ ಮಾಡಲು ಇಚ್ಚಿಸಿದರೆ ಮನೆಯವರಿಗೂ ಸ್ನೇಹಿತರಿಗೂ ಆಥವಾ ಹತ್ತಿರದ ಆಸ್ಪತ್ರೆಗೂ ತಿಳಿಸಿ ಮತ್ತೊಂದು ಜೀವಕ್ಕೆ ಪುನರ್ಜನ್ಮ ನೀಡಲು ಸಹಕಾರ ಮಾಡಿ ಎಂದು ತಿಳಿಸಿದರು.

ಶಿಬಿರದಲ್ಲಿ ೫೦ ಕ್ಕೂ ಹೆಚ್ಚು ಮಹಿಳಾ ಶಿಕ್ಷಕಿಯರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಸಾವಿತ್ರಿಭಾಯಿ ಪುಲ್ಲೆ ಜಿಲ್ಲಾಧ್ಯಕ್ಷೆ ಜಿ.ಎಲ್.ರಾಧಮ್ಮ, ತಾಲೂಕು ಸಂಘದ ಅಧ್ಯಕ್ಷೆ ಸುಜಾತ, ಕಾರ್ಯದರ್ಶಿ ಸ್ವಣಾಂಭ, ರೋಟರಿ ಉದ್ಯೋಗ ಅಧ್ಯಕ್ಷ ರೋಟರಿ ಜಯಶಂಕರ್, ರೋಟರಿ ಶ್ರೀಧರ್, ಸಂಪೂರ್ಣ ಪೌಂಡೇಶನ್ ಕೆ.ಕೃಷ್ಣ, ಡಾ.ಕಿರಣ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ.ಹನುಮಂತರಾಯಪ್ಪ ಸೇರಿದಂತೆ ತಾಲೂಕು ಸಾವಿತ್ರಿಭಾಯಿ ಪುಲ್ಲೆ ಶಿಕ್ಷಕಿಯರ ಸಂಘದ ಪದಾದಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next