ಆಳಂದ: ಭಾರತದ ಮೊದಲು ಮಹಿಳಾ ಶಿಕ್ಷಕಿಯಾಗಿರುವ ಜೋತಿಭಾ ಫುಲೆ ಪತ್ನಿ ಸಾವಿತ್ರಿಬಾಯಿ ಫುಲೆ ಮಹಿಳಾ ಸಮುದಾಯಕ್ಕೆ ಸ್ಫೂ ರ್ತಿದಾಯಕ ಎಂದು ಗ್ರಾಪಂ ಸದಸ್ಯ ಸೂರ್ಯಕಾಂತ ಜಿಡಗಿ ಹೇಳಿದರು.
ತಾಲೂಕಿನ ನಿಂಬರಗಾ ಗ್ರಾಮದ ದೇವನಾಂಪ್ರಿಯ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ 191ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಕಷ್ಟದ ದಿನಮಾನಗಳಲ್ಲೂ ಸಾವಿತ್ರಿಬಾಯಿ ಶೋಷಿತ ಸಮುದಾಯದ ಮಹಿಳೆಯರಿಗೆ ಅಕ್ಷರ ಕಲಿಸಿ ಅವರನ್ನು ಮೇಲೆತ್ತುವಲ್ಲಿ ಶ್ರಮಿಸಿದ್ದಾರೆ.
ಅವರ ಕೊಡುಗೆ ಸ್ಮರಿಸಿ, ಸರಳ ಜೀವನ ಅನುಸರಿಸಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಕಾಂಗ್ರೆಸ್ ಯುವ ಮುಖಂಡ ಗುರು ಕಾಮಣಗೋಳ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಪೃಥ್ವಿ ಹೈದ್ರಾಬಾದ ಕರ್ನಾಟಕ ಶೋಷಿತ ಮಹಿಳೆಯರ ಅಭಿವೃದ್ಧಿ ಸಂಸ್ಥೆ ಗೌರವ ಅಧ್ಯಕ್ಷ ಡಾ| ಸಂಜೀವಕುಮಾರ ನಿರ್ಮಲ್ಕರ ಮಾತನಾಡಿ, ಸಾವಿತ್ರಿಬಾಯಿ ಫುಲೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದರು.
ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ ಸಂಗಿತಾ ಮಾತನಾಡಿದರು. ರೇಣುಕಾ ಯಳಸಂಗಿ ಪ್ರಾರ್ಥನಾ ಗೀತೆ ಹಾಡಿದರು. ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ವರ್ಷ ಸ್ವಾಗತಿಸಿದಳು. ವಾಣಿಜ್ಯ ಶಾಸ್ತ್ರದ ಉಪನ್ಯಾಸಕಿ ಸಾವಿತ್ರಿ ಎಲ್. ಧಂಗಾಪುರ, ಎನ್‌ಎಸ್‌ಎಸ್ ಅಧಿ ಕಾರಿ ಸುಜಾತಾ ಕಂಟೆಪ್ಪ ವಾಗ್ಧರ್ಗಿ, ಲತಾ ನಿರ್ಮಲ್ಕರ ಇದ್ದರು. ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿ ಮಾಲುಂಬಿ ನಿರೂಪಿಸಿದರು, ಕೋಮಲ ವಂದಿಸಿದರು.