Advertisement

ಮಠಗಳ ಸ್ವಾಧೀನಕ್ಕೆ ಮುಂದಾದರೆ ಸಾತ್ವಿಕ ಹೋರಾಟ

01:13 PM Feb 12, 2018 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಕಾನೂನಿನ ಭಯವಿಲ್ಲದೇ ಮಠಗಳನ್ನು ಸೂಪರ್‌ಸೀಡಿ ಮಾಡಿ ತಮ್ಮ ವಶಕ್ಕೆ ಪಡೆಯಲು ಮುಂದಾಗಿರುವ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಬೇಲಿ ಮಠದ ಶಿವರುದ್ರ ಮಹಾಸ್ವಾಮೀಜಿ ಹೇಳಿದರು.

Advertisement

ರಾಜ್ಯ ಸರ್ಕಾರ ಮಠಗಳ ಸ್ವಾಧೀನಕ್ಕೆ ಮುಂದಾಗಿರುವುದರಿಂದ ನಾಡಿನ ಯತಿಗಳು ಅಸ್ಥಿತ್ವಕ್ಕಾಗಿ ಹೋರಾಟ ಮಾಡುವ ಸ್ಥಿತಿ ಬಂದಿದೆ. ಸರ್ಕಾರಕ್ಕೆ ಕಾನೂನಿನ ಭಯವಿಲ್ಲ. ಬದಲಾಗಿ ಕೆಲವರ ಒತ್ತಡಕ್ಕೆ ಮಣಿದು ಹೀಗೆಲ್ಲ ವರ್ತಿಸುತ್ತಿದೆ. ಮಠಗಳನ್ನು ಸರ್ಕಾರ ತನ್ನ ಸ್ವಾಧೀನಕ್ಕೆ ಪಡೆದರೇ ರಾಜ್ಯಾದ್ಯಂತ ಸಾತ್ವಿಕ ಹೋರಾಟ ಮಾಡಲಿದ್ದೇವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ರಾಮಚಂದ್ರಪುರ ಮಠದ ಶ್ರೀಗಳ ವಿರುದ್ಧ ದೂರು ಬಂದಾಗ ಮತ್ತು ಶ್ರೀಮಠಕ್ಕೆ ಬ್ಲ್ಯಾಕ್‌ವೆುàಲ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನಡೆದುಕೊಂಡಿರುವ ರೀತಿ ಪಕ್ಷಪಾತದಿಂದ ಕೂಡಿತ್ತು ಎಂಬುದು ರಾಜ್ಯದ ಜನತೆಯ ಅರಿವಿಗೆ ಬಂದಿದೆ.

ಕೆಲವೊಂದು ಮಠ ಹಾಗೂ ದೇವಸ್ಥಾನಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿದ್ದಾರೆ. ಆದರೆ, ಆ ಆಡಳಿತಾಧಿಕಾರಿಗಳು ಎಷ್ಟು ನಿಷ್ಠೆ, ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಯಾವುದೇ ಪ್ರಕರಣವನ್ನು ಸರ್ಕಾರ ಕೂಲಂಕಷವಾಗಿ ಪರಿಶೀಲಿಸಿ, ನಿಷ್ಪಕ್ಷಪಾತವಾಗಿ ಕ್ರಮ ತೆಗೆದುಕೊಳ್ಳಬೇಕು ಎಂಬ ಸಲಹೆ ನೀಡಿದರು.

ಅನುಷ್ಠಾನ ಏಕಿಲ್ಲ?: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಕ್ಫ್ ಆಸ್ತಿಯ ದುರ್ಬಳಕೆ ಸಂಬಂಧಿಸಿದಂತೆ ನೀಡಿದ ವರದಿಯನ್ನು ಏಕೆ ಇನ್ನೂ ಅನುಷ್ಠಾನ ಮಾಡಿಲ್ಲ? ಸರ್ಕಾರ ಆರೋಪಿಗಳನ್ನು ಶಿಕ್ಷಿಸುತ್ತಿಲ್ಲ. ಸುಳ್ಳು ಆರೋಪ ನೀಡಿದವರನ್ನು ರಕ್ಷಿಸುವ ಪ್ರಯತ್ನದಲ್ಲಿದೆ. ನಾಡಿನ ಧಾರ್ಮಿಕ ಸಂಸ್ಥೆ, ಮಠ ಹಾಗೂ ಪ್ರಾಮಾಣಿಕ ಯತಿಗಳ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಇಂತಹ ಪ್ರಕರಣ ಭಕ್ತರಿಗೆ ಸಾತ್ವಿಕ ನೋವು ನೀಡಿದರೂ ನ್ಯಾಯಾಲಯವೇ ಸೂಕ್ತವಾಗಿ ಉತ್ತರಿಸಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಮಠಗಳ ಮೇಲೆ ವಕ್ರ ದೃಷ್ಟಿ: ಸಿದ್ಧಾರೂಢ ಮಿಷನ್‌ನಿನ ಆರೂಢ ಭಾರತೀ ಮಹಾಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರದ ವಕ್ರ ದೃಷ್ಟಿ ಮಠಮಾನ್ಯಗಳ ಮೇಲೆ ಬಿದ್ದಿದೆ. ಶ್ರೀ ರಾಮಚಂದ್ರಪುರ ಮಠದ ವಿರುದ್ಧದ ಬ್ಲ್ಯಾಕ್‌ವೆುàಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಧೀನ ಸಂಸ್ಥೆಯಾದ ಸಿಐಡಿ ತನಿಖೆ ನಡೆಸಿ ಬಿ ರಿಪೋರ್ಟ್‌ ಸಲ್ಲಿಸಿತ್ತು. ನ್ಯಾಯಾಲಯ ಬಿ ರಿಪೋರ್ಟ್‌ ಅನ್ನು ತಿರಿಸ್ಕರಿಸಿತ್ತು. ಈ ಘಟನೆ ಸರ್ಕಾರದ ನಿಲುವನ್ನು ಸ್ಪಷ್ಟವಾಗಿ ವಿವರಿಸುತ್ತದೆ ಎಂದರು.

ಸಿಕ್ಕಿಹಾಕಿಸುವ ಪ್ರಯತ್ನ: ಸ್ವಾಮೀಜಿಯವರನ್ನು ಸಿಕ್ಕಿಹಾಕಿಸಲು ಸರ್ಕಾರ ಪ್ರಬಲ ಅವಕಾಶಕ್ಕಾಗಿ ಕಾಯುತ್ತಿದೆ. ಆದರೆ ಅದು ಸಾಧ್ಯವಾಗುವುದಿಲ್ಲ. ರಾಘವೇಶ್ವರ ಶ್ರೀಗಳ ಮೇಲೆ ಬಂದಿರುವ ಇನ್ನೊಂದು ಆರೋಪವೂ ಅರ್ಥಹೀನವಾಗಿದ್ದು, ಉದ್ದೇಶ ಪೂರ್ವಕವಾಗಿ ದೂರು ನೀಡಿದ್ದಾರೆ. ದೂರು ನೀಡಿದ ಮಹಿಳೆ ಪತಿಗೆ ವಿಚ್ಛೇದನೆ ನೀಡಿದ್ದರು. ಅಲ್ಲದೇ 9 ವರ್ಷದ ಹಿಂದಿನ ಪ್ರಕರಣ ಉಲ್ಲೇಖೀಸಿ ಶ್ರೀಗಳ ವಿರುದ್ಧ ದೂರು ನೀಡಿದ್ದಾರೆ. ಇದು ಸುಳ್ಳಿನ ಕಂತೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಬಳ್ಳಾರಿಯ ಹಾಲೇಶ್ವರ ಮಹಾಸಂಸ್ಥಾನದ ಹಾಲವೀರಪ್ಪಜ್ಜ ಮಹಾಸ್ವಾಮೀಜಿ ಮಾತನಾಡಿ, ಮಠಗಳ ಮೇಲೆ ಸ್ವಾಧೀನ ಸಾಧಿಸಲು ಮುಂದಾಗಿರುವ ಸರ್ಕಾರಕ್ಕೆ ರಾಜ್ಯದ ಮಸೀದಿ, ಚರ್ಚ್‌ಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲವೇ? ಹಿಂದೂ ಸಮಾಜವನ್ನೇ ನಿರಂತರವಾಗಿ ಗುರಿಯಾಗಿಸಿಕೊಳ್ಳುವುದು ಏಕೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next