Advertisement

Arthritis ನಿಂದ ಬಳಲುತ್ತಿದ್ದೇನೆ: ಭವಿಷ್ಯದ ಬಗ್ಗೆ ನಿರ್ಧರಿಸಬೇಕಿದೆ:ಸೈನಾ ನೆಹ್ವಾಲ್

09:19 PM Sep 02, 2024 | Team Udayavani |

ಹೊಸದಿಲ್ಲಿ: ಭಾರತದ ಖ್ಯಾತ ಶಟ್ಲರ್, ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್’ತಾನು ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದು ನಿವೃತ್ತಿಯ ಕುರಿತು ಈ ವರ್ಷದ ಅಂತ್ಯದಲ್ಲಿ ತೀರ್ಮಾನ ಮಾಡಬೇಕಾಗಿದೆ’ ಎಂದು ಹೇಳಿದ್ದಾರೆ.

Advertisement

34 ರ ಹರೆಯದ ಸೈನಾ ಇತ್ತೀಚಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಚೆಫ್-ಡಿ-ಮಿಷನ್ ಆಗಿದ್ದ ಶೂಟರ್ ಗಗನ್ ನಾರಂಗ್ ಅವರ ಪಾಡ್‌ಕ್ಯಾಸ್ಟ್ ‘House of Glory’ ಯಲ್ಲಿ ಮಾತನಾಡಿದರು. “ಮೊಣಕಾಲು ಸಮಸ್ಯೆಯಿದೆ. ನನಗೆ ಸಂಧಿವಾತವಿದೆ. ನನ್ನ ಕಾರ್ಟಿಲೆಜ್ ಕೆಟ್ಟ ಸ್ಥಿತಿಗೆ ಹೋಗಿದೆ. ಎಂಟು-ಒಂಬತ್ತು ಗಂಟೆಗಳ ಕಾಲ ನಿಲ್ಲುವುದು ತುಂಬಾ ಕಷ್ಟ. ಇಂತಹ ಸ್ಥಿತಿಯಲ್ಲಿ ವಿಶ್ವದ ಅತ್ಯುತ್ತಮ ಆಟಗಾರರಿಗೆ ಹೇಗೆ ಸವಾಲು ಒಡ್ಡುವುದು? ಎರಡು ಗಂಟೆಗಳ ತರಬೇತಿಯು ಅತ್ಯುನ್ನತ ಮಟ್ಟದ ಆಟಗಾರರೊಂದಿಗೆ ಆಡಲು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಸಾಕಾಗುವುದಿಗಿಲ್ಲ. ತನ್ನ ವೃತ್ತಿಜೀವನವು ಅಂತಿಮ ಹಂತದಲ್ಲಿದೆ ಎಂಬ ಅಂಶವನ್ನು ಇನ್ನು ಮುಂದೆ ಕಡೆಗಣಿಸಲಾಗುವುದಿಲ್ಲ”ಎಂದು ಹೇಳಿದ್ದಾರೆ.

ಲಂಡನ್ ಒಲಿಂಪಿಕ್ಸ್ 2012 ರಲ್ಲಿ ಕಂಚಿನ ಪದಕದೊಂದಿಗೆ ಒಲಿಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಶಟ್ಲರ್, 2010 ಮತ್ತು 2018 ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಮಾಜಿ ವಿಶ್ವದ ನಂ.1 ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next