ಸ್ವಾವಲಂಬನೆಯತ್ತ ಹೆಜ್ಜೆಹಾಕಲು ಮಹಿಳೆಯರೇ ಶುರುಮಾಡಿದ ಈ ಕ್ಯಾಂಟೀನ್ ಈಗ ನಗರದಲ್ಲಿ ಕಾರ್ಯಾರಂಭ ಮಾಡಿದೆ. ಇದು ಜಿಲ್ಲೆಗೇ ಮೊದಲ ಸವಿರುಚಿ ಕ್ಯಾಂಟೀನ್.
Advertisement
7 ಮಹಿಳೆಯರ ತಂಡಒಕ್ಕೂಟದ ಜಿಲ್ಲಾಧ್ಯಕ್ಷೆ ಸಹಿತ 7 ಮಂದಿ ಸದಸ್ಯೆಯರು ಈ ಕ್ಯಾಂಟೀನ್ ನಡೆಸುತ್ತಿದ್ದಾರೆ. ಇದರಲ್ಲಿ ಚಾಲಕಿ, ಅಡುಗೆತಯಾರಿಸುವುದು ಎಲ್ಲವೂ ಅವರೇ.
ತಿಂಡಿ: 10ರಿಂದ 20 ರೂ.ಇಡ್ಲಿ, ಚಪಾತಿ, ಪೂರಿ, ಪರೋಟ, ಗೋಳಿಬಜೆ, ನೀರುಳ್ಳಿ ಬಜೆ, ಪೋಡಿ, ಅಕ್ಕಿರೊಟ್ಟಿ, ಪುಂಡಿ, ಎಗ್ ಬೋಂಡ, ಪಲಾವ್, ಇತ್ಯಾದಿ.
ಚಹಾ, ಕಾಫಿ, ಹಾಲು: 10 ರೂ.
ತರಕಾರಿ ಊಟ: 25 ರೂ.
ಚಿಕನ್ ಸುಕ್ಕ: 30 ರೂ., ಕಬಾಬ್: 10ರೂ.
Related Articles
ಸಂಚಾರಿ ಕ್ಯಾಂಟೀನ್ ಮೂಲಕ ವ್ಯಾಪಾರ ಮಾಡಿ, ಖರ್ಚು ಕಳೆದು ಉಳಿದ ಆದಾಯವನ್ನು ಮಹಿಳೆಯರು ಸಮಾನಾಗಿ ಹಂಚಿಕೊಳ್ಳುತ್ತಾರೆ. ಇವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ.
Advertisement
10 ಲಕ್ಷ ರೂ. ನೆರವುರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಕ್ಯಾಂಟೀನ್‌ಗೆ10 ಲಕ್ಷರೂ. ಬಡ್ಡಿರಹಿತ ಸಹಾಯ ನೀಡಲಾಗಿದೆ. ಇದರಿಂದ ವಾಹನ ಹಾಗೂ ಅಗತ್ಯ ಪರಿಕರಗಳನ್ನು ಖರೀದಿಸಲಾಗಿದೆ. 6ನೇ ತಿಂಗಳಿಂದ ತಿಂಗಳಿಗೆ 15 ಸಾವಿರ ರೂ. ನಂತೆ ಅಸಲನ್ನು ಹಿಂದಿರುಗಿಸಬೇಕಿದೆ. ಪ್ಲಾಸ್ಟಿಕ್ ಬಳಕೆ ಇಲ್ಲ
ಕ್ಯಾಂಟೀನ್‌ನಲ್ಲಿ ಯಾವುದಕ್ಕೂ ಪ್ಲಾಸ್ಟಿಕ್ ಬಳಕೆ ಇಲ್ಲ. ಸ್ಟೀಲ್ ತಟ್ಟೆ-ಲೋಟಗಳನ್ನೇ ಬಳಸಲಾಗುತ್ತದೆ. ತ್ಯಾಜ್ಯ ಹಾಕಲು ಬಾಕ್ಸ್ ಇದೆ. ಸಂಜೆ ಕಸವನ್ನು ನಗರಸಭೆಯತ್ಯಾಜ್ಯ ವಾಹನಕ್ಕೆ ನೀಡಲಾಗುತ್ತದೆ. ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಹೊರಗಿನ ಆಹಾರ ಇಲ್ಲ
ಕ್ಯಾಂಟೀನ್‌ನಲ್ಲಿ ಯಾವುದೇ ಹೊರಗಿನ ಆಹಾರ ಇಲ್ಲ. ಪುಂಡಿ, ಅಕ್ಕಿರೊಟ್ಟಿಯನ್ನು ಮಹಿಳೆಯರು ಮನೆಯಲ್ಲೇ ಮಾಡಿ ಹಾಟ್‌ಬಾಕ್ಸ್‌ನಲ್ಲಿಟ್ಟು ತರುತ್ತಾರೆ. ಉತ್ತಮ ರುಚಿಯ ಆರೋಗ್ಯಕರ ಆಹಾರ ಪೂರೈಸಲಾಗುತ್ತಿದೆ. ತಾ. ಘಟಕ ಗಳಿಗೂ ಕ್ಯಾಂಟೀನ್ ವಿಸ್ತರಣೆ
ಸ್ವ ಉದ್ಯೋಗಕ್ಕಾಗಿ ಕ್ಯಾಂಟೀನ್ ಒಂದು ಉತ್ತಮ ಅವಕಾಶ. ಸರಕಾರಿ ಕಚೇರಿಗಳ ಮುಂಭಾಗ, ಜನ ಸೇರುವಲ್ಲಿ ಸಂಚಾರಿ ಕ್ಯಾಂಟೀನ್ ನಿಲ್ಲಿಸಲು ಅನುವು ಮಾಡಿಕೊಟ್ಟು ಮಹಿಳೆಯರ ಸ್ವಾವಲಂಬನೆಯ ನಡೆ ಪ್ರೋತ್ಸಾಹಿಸಬೇಕಿದೆ. ಮುಂದೆ ತಾ. ಘಟಕಗಳಿಗೂ ಕ್ಯಾಂಟೀನ್ ವಿಸ್ತರಣೆ ಆಗಲಿದೆ.
– ಧನಲಕ್ಷ್ಮೀ ಸುಧಾಕರ್ ಪೂಜಾರಿ, ಜಿಲ್ಲಾಧ್ಯಕ್ಷರು, ಸ್ತ್ರೀ ಶಕ್ತಿ ಒಕ್ಕೂಟ – ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ