Advertisement
ಅರ್ಧದಲ್ಲೇ ಹಣ ಹಿಂಪಡೆಯಬೇಡಿವೇತನದಾರರು ಉದ್ಯೋಗಿಗಳ ಭವಿಷ್ಯನಿಧಿ(ಇಪಿಎಫ್) ಮೂಲಕ ಕಡ್ಡಾಯ ಉಳಿತಾಯವನ್ನು ಮಾಡುವಂಥ ವ್ಯವಸ್ಥೆ ಇದೆ. ಪ್ರತೀ ತಿಂಗಳೂ ಮೂಲ ವೇತನದಲ್ಲಿ ನಿರ್ದಿಷ್ಟ ಪ್ರಮಾಣದ ಮೊತ್ತವನ್ನು ಉದ್ಯೋಗಿಗಳು ಪಾವತಿಸಿದರೆ, ಉದ್ಯೋಗದಾತರೂ ಅದಕ್ಕೆ ತಕ್ಕನಾದ ಭಾಗವನ್ನು ಜಮೆ ಮಾಡುತ್ತಾರೆ. ವೇತನ ಏರಿಕೆಯಾದಂತೆ ಇಪಿಎಫ್ ಕಂತಿನ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಹೀಗಾಗಿ ನಿವೃತ್ತಿಯ ತನಕ ಇಪಿಎಫ್ ಖಾತೆಯನ್ನು ತಪ್ಪದೇ ಮುಂದುವರಿಸಿ. ಕೆಲವರು ತಮ್ಮ ಅಲ್ಪಾವಧಿ ಅಗತ್ಯಗಳಿಗಾಗಿ ಇಪಿಎಫ್ನ ಹಣವನ್ನು ಹಿಂಪಡೆದು ಬಿಡುತ್ತಾರೆ. ಅನಿವಾರ್ಯವಾದಲ್ಲಿ ಮಾತ್ರ ಈ ಕ್ರಮ ಅನುಸರಿಸಿ ಎಂಬುದು ಉದ್ಯೋಗಿಗಳಿಗೆ ತಜ್ಞರ ಕಿವಿಮಾತು.
ವಾಲಂಟರಿ ಪ್ರಾವಿಡೆಂಟ್ ಫಂಡ್(ವಿಪಿಎಫ್) ಅನ್ನುವುದು ಇಪಿಎಫ್ನ ವಿಸ್ತೃತ ಹೂಡಿಕೆ ಯೋಜನೆಯಾಗಿದ್ದು, ಇಪಿಎಫ್ಗೆ ಸಮನಾದ ಬಡ್ಡಿಯೇ ವಿಪಿಎಫ್ಗೂ ಇದೆ. ದೀರ್ಘಾವಧಿ ಲಾಭ ಪಡೆಯಬೇಕೆಂದು ಇಚ್ಛಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದ್ದು, ಈಗ ನಿಮ್ಮ ವೆಚ್ಚಗಳನ್ನು ತಗ್ಗಿಸಿದರೆ ನಾಳೆಯ ದಿನಗಳಿಗೆ ಹಣಕಾಸಿನ ಭದ್ರತೆ ಸಾಧ್ಯವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ವಿಪಿಎಫ್, ಇಪಿಎಫ್ ಮಾದರಿಯಲ್ಲಿಯೇ ಇರುವ ಇನ್ನೊಂದು ಹೂಡಿಕೆಯ ಅವಕಾಶ ಎಂದರೆ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್). ಆದರೆ ಇದರಲ್ಲಿ ಅಷ್ಟು ಪ್ರಮಾಣದ ಬಡ್ಡಿ ಸಿಗುವುದಿಲ್ಲ. ಬದಲಾಗಿ 15 ವರ್ಷಗಳಲ್ಲಿ ಮೆಚೂರ್ ಆಗಿ ಹಣ ಕೈಗೆ ಸಿಗುತ್ತದೆ. ಆವಶ್ಯಕತೆಗೆ ತಕ್ಕಂತೆ ನಿರ್ದಿಷ್ಟ ಅವಧಿಯ ಬಳಿಕ ಸಾಲ ಅಥವಾ ಹಣ ಹಿಂಪಡೆಯುವ ಅವಕಾಶವೂ ಇರುತ್ತದೆ.
Related Articles
ಇಪಿಎಫ್ ಮತ್ತು ಎನ್‌ಪಿಎಸ್ ಈ ಎರಡರ ಹೂಡಿಕೆಯಲ್ಲಿ ಫ್ಲೆಕ್ಸಿಬಿಲಿಟಿಗೆ ಸಂಬಂಧಿಸಿದಂತೆ ಅನೇಕ ಆಯ್ಕೆಗಳನ್ನು ನೀಡಲಾಗಿದೆ. ಹಣ ಹಿಂಪಡೆಯಲು ಅನುಕೂಲ ವಾಗುವಂತೆ ಹೊಸ ನಿಯಮ ರೂಪಿಸಲಾಗಿದ್ದು, ಇಪಿಎಫ್ ಮತ್ತು ಎನ್‌ಪಿಎಸ್‌ಗಳ ನಡುವೆ ಪೋರ್ಟ ಬಿಲಿಟಿಗೂ ಈಗ ಅವಕಾಶವಿದೆ. ನಿವೃತ್ತಿ ಹೊತ್ತಿಗೆ ಇವುಗಳ ಮೂಲಕ ಗರಿಷ್ಠ ಗಳಿಕೆಯನ್ನು ಹೊಂದಲು ನೆರವಾಗುತ್ತದೆ.
Advertisement