Advertisement

ರಂಗಭೂಮಿ ಕಲೆ ಉಳಿಸಿ-ಬೆಳಸಿ: ಹುಲಗಪ್ಪ

03:03 PM Apr 15, 2022 | Team Udayavani |

ಯಲಬುರ್ಗಾ: ರಂಗಭೂಮಿಯಲ್ಲೇ ನಿಜವಾದ ಮತ್ತು ಜೀವಂತ ಕಲೆ ಅಡಗಿದ್ದು, ಅದನ್ನು ಉಳಿಸಿ-ಬೆಳೆಸುವ ಕೆಲಸ ಎಲ್ಲೆಡೆ ನಡೆಯಬೇಕಿದೆ ಎಂದು ಗ್ರಾಪಂ ಮಾಜಿ ಸದಸ್ಯ ಹುಲಗಪ್ಪ ಬಂಡಿವಡ್ಡರ ಹೇಳಿದರು.

Advertisement

ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದಲ್ಲಿ ಶ್ರೀದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಯುವ ನಾಟ್ಯ ಸಂಘದ ಪದಾಧಿಕಾರಿಗಳು ಹಮ್ಮಿಕೊಂಡ ಮನ ಮೆಚ್ಚಿದ ಮೈಲಾರಿ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.

ಚಲನಚಿತ್ರದಲ್ಲಿ ದೃಶ್ಯ ಮತ್ತು ನಟನೆಯಲ್ಲಿ ಏನಾದರೂ ಲೋಪದೋಷಗಳಾದರೆ ಅದನ್ನು ಸರಿಪಡಿಸಿಕೊಳ್ಳುವ ಅವಕಾಶ ಇರುತ್ತದೆ. ಆದರೆ ರಂಗಭೂಮಿ ಪ್ರದರ್ಶನದಲ್ಲಿ ತಿದ್ದುಪಡಿಗೆ ಹಾಗೂ ತಿರುಚಲು ಯಾವುದೇ ಅವಕಾಶ ಇರುವುದಿಲ್ಲ ಎಂದರು.

ರಂಗಭೂಮಿಯಲ್ಲಿ ನಟನೆ ಮಾಡುವುದು ಒಂದು ಸವಾಲಿನ ಕೆಲಸವಾಗಿದೆ. ರಂಗಕಲೆಯನ್ನು ಕರಗತ ಮಾಡಿಕೊಂಡರೆ ಉತ್ತಮ ಸಾಮಾಜಿಕ ನಾಟಕಗಳನ್ನು ಹೊರತರಬಹುದು ಎಂಬುದಕ್ಕೆ ಚಿಕ್ಕಬನ್ನಿಗೋಳ ಯುವಕರೇ ಪ್ರಮುಖ ಉದಾಹರಣೆಯಾಗಿದ್ದಾರೆ. ಒಂದು ಕಾಲದಲ್ಲಿ ರಂಗಭೂಮಿಯೂ ಕೆಲವರ ಸ್ವತ್ತಾಗಿತ್ತು. ವಿವಿಧ ಕ್ಷೇತ್ರದ ರಂಗಾಸಕ್ತರಿಂದ ರಂಗಭೂಮಿ ಪ್ರಯೋಗಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ವಿನೂತನ ಪರಂಪರೆ ಮುಂದುವರಿಯಬೇಕಿದೆ ಎಂದರು.

ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಹಾಗೂ ಮಾನವೀಯತೆಯನ್ನು ಬೆಳೆಸುವಲ್ಲಿ ರಂಗಭೂಮಿ ಕಲೆ ಸಹಕಾರಿಯಾಗಿದೆ. ರಂಗಭೂಮಿ ಕಲೆಯನ್ನು ಕಲಾವಿದರು ಮತ್ತು ಕಲಾಸಕ್ತರು ಹೆಚ್ಚೆಚ್ಚು ಪ್ರೋತ್ಸಾಹಿಸುವ ಮೂಲಕ ಅದನ್ನು ಉಳಿಸಿ, ಬೆಳೆಸಬೇಕು ಎಂದರು.

Advertisement

ವೇದಮೂರ್ತಿ ಕಲ್ಲಯ್ಯಜ್ಜನವರು ವಹಿಸಿದ್ದರು. ಮುಖಂಡ ಶಂಕರಗೌಡ ಮಾಲಿಪಾಟೀಲ್‌ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಈಳಿಗೇರ್‌, ಹನುಮಂತಪ್ಪ ಉಪ್ಪಾರ್‌, ಶರಣಪ್ಪ ಪೂಜಾರ, ಶರಣಪ್ಪ ಹಟ್ಟಿ, ಕನಕಪ್ಪ, ಹನುಮಪ್ಪ ಪೂಜಾರ, ವೀರೇಶ ಹತ್ತಿ, ಶರಣು ಕೋವಿ, ನಾಗರಾಜ ಚೊಣ್ಣದ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next