ಆ್ಯಮ್‌ಸ್ಟರ್‌ಡ್ಯಾಮ್: “ಮಣ್ಣನ್ನು ರಕ್ಷಿಸೋಣ’ ಆಂದೋಲನ ನಡೆಸುತ್ತಿರುವ ಸದ್ಗುರು ಜಗ್ಗಿ ವಾಸುದೇವ ಅವರು ಬುಧವಾರ ನೆದರ್ಲೆಂಡ್‌ನಿಂದ ಜರ್ಮನಿಯತ್ತ ಪ್ರಯಾಣ ಆರಂಭಿಸಿದ್ದಾರೆ.
ನೆದರ್ಲೆಂಡ್‌ನ ರಾಜಧಾನಿ ಆ್ಯಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆಯುತ್ತಿರುವ ಫ್ಲೋರಿಯೇಡ್ ಎಕ್ಸ್‌ಪೋ 2022ನಲ್ಲಿ ಸದ್ಗುರು ಭಾಗವಹಿಸಿದ್ದರು.
ಅನಂತರ ಅಲ್ಲಿನ ಹಲವು ಗಣ್ಯರೊಂದಿಗೆ ಮಾತನಾಡಿ, ಮಣ್ಣನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಇದನ್ನೂ ಓದಿ:ಮುಂಬೈ-ಅಹಮದಾಬಾದ್: ಬುಲೆಟ್ ರೈಲು ಯೋಜನೆಗೆ ಶೇ.89ರಷ್ಟು ಭೂಮಿ ಸ್ವಾಧೀನ: ಸಚಿವ ವೈಷ್ಣವ್
ಸದ್ಗುರು ಅವರು ಮಾ.21ರಂದು ಲಂಡನ್‌ನಿಂದ “ಮಣ್ಣು ರಕ್ಷಿಸೋಣ’ ಆಂದೋಲನ ಆರಂಭಿಸಿದ್ದು, ಆಂದೋಲನದ ಭಾಗವಾಗಿ 100 ದಿನಗಳಲ್ಲಿ 27 ರಾಷ್ಟ್ರಗಳ ಸುತ್ತ ಒಟ್ಟು 30 ಸಾವಿರ ಕಿ.ಮೀ ಪ್ರಯಾಣ ನಡೆಸಲಿದ್ದಾರೆ.