Advertisement
ಇದು ಒಂದೆಡೆಯಾದರೆ, ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗಳಲ್ಲಿ ಕೆಎಂಎಫ್ ಹಾಲಿನ ಉತ್ಪನ್ನಗಳ ಕೊರತೆ ಕಂಡು ಬಂದಿದೆ. ಇದರಿಂದಾಗಿಯೇ ಗ್ರಾಹಕರು ಅನಿವಾರ್ಯವಾಗಿ ಖಾಸಗಿ ಹಾಲಿನ ಉತ್ಪನ್ನಗಳ ಮೊರೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕುಸಿಯುವುದು ಸಾಮಾನ್ಯ ಸಂಗತಿ. ಆದರೆ, ನಂದಿನಿ ಉತ್ಪನ್ನಗಳಿಗೆ ಬೇಸಿಗೆಯಲ್ಲಿ ಎಂದೂ ಬರ ಬಂದಿರಲಿಲ್ಲ. ಈ ವರ್ಷ ಗ್ರಾಹಕರ ಬೇಡಿಕೆಗೆ ತಕ್ಕಂತೆ ಯಾವ ಉತ್ಪನ್ನಗಳೂ ನಂದಿನಿ ಬೂತ್‌ಗಳಿಗೆ ಬರುತ್ತಿಲ್ಲ. ವಿಶೇಷವಾಗಿ ಜನ ಸಾಮಾನ್ಯರು ದಿನ ಬೆಳಗಾದರೆ ಬಳಸುವ ಹಾಲು, ಮೊಸರು ಪೂರೈಕೆಯಲ್ಲಿ ಕೊರತೆ ಕಂಡು ಬಂದಿದೆ ಎಂದು ಜಿಲ್ಲಾ ಕೇಂದ್ರದಲ್ಲಿರುವ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಮಾಲಿಕರು ಹೇಳುತ್ತಿದ್ದಾರೆ.
Related Articles
Advertisement
ಬೇಡಿಕೆ 500 ಲೀ., ಪೂರೈಕೆ 350 ಲೀ. : ಬೇಸಿಗೆಯಲ್ಲಿ ಹಾಲು, ಮೊಸರಿಗೆ ಭಾರೀ ಬೇಡಿಕೆ ಇದೆ. ಆದರೆ, ಚಿಮೂಲ್ ನಂದಿನಿ ಮಿಲ್ಕ್ ಬೂತ್ ಗಳಿಗೆ ತಲಾ 500, 600 ಲೀಟರ್ ಬೇಡಿಕೆ ಇದ್ದರೆ ಬರೀ 400 ರಿಂದ 350 ಲೀ. ಮಾತ್ರ ಪೂರೈಸಲಾಗುತ್ತಿದೆ. 150 ರಿಂದ 200 ಲೀಟರ್ ಹಾಲು ಪೂರೈಕೆ ಕುಂಠಿತವಾಗಿದೆ. ಬೆಳಗ್ಗೆ ಪೂರೈಸುವ ಹಾಲು ಅರ್ಧಗಂಟೆಯಲ್ಲಿ ಮುಗಿಯುತ್ತದೆ. ಮತ್ತೆ ಎರಡನೇ ಶಿಫ್ಟ್ನಲ್ಲಿ ಹಾಲು ಪೂರೈಕೆ ಆಗುವವರೆಗೂ ಗ್ರಾಹಕರಿಗೆ ಹಾಲು ಸಿಗುವುದಿಲ್ಲ. ಮಧ್ಯಾಹ್ನ ಹಾಲು ಕೊಟ್ಟರೆ ಮತ್ತೆ ಸಂಜೆಗೆ ಹಾಲು ಇರಲ್ಲ ಎಂದು ಜಿಲ್ಲಾ ಕೇಂದ್ರದಲ್ಲಿರುವ ಮಿಲ್ಕ್ ಬೂತ್ ಮಾಲಿಕರು ನಂದಿನಿ ಉತ್ಪನ್ನಗಳ ಕೊರತೆ ಬಗ್ಗೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ನಂದಿನಿ ಉತ್ಪನ್ನಗಳಿಗೆ ಕೊರತೆ ಇಲ್ಲ. ಆಮೂಲ್ ಉತ್ಪನ್ನಗಳಲ್ಲಿ ಕೆಲವೊಂದು ಮೊದಲಿನಿಂದಲೂ ಎಲ್ಲಾ ಕಡೆ ಮಾರಾಟ ಆಗುತ್ತಿದೆ. ಹಾಗಂತ ಜಿಲ್ಲೆಯಲ್ಲಿ ನಂದಿನಿ ಉತ್ಪನ್ನಗಳಿಗೆ ಯಾವುದೇ ರೀತಿಯಲ್ಲಿ ಕೊರತೆ ಇಲ್ಲ. ಬೇಸಿಗೆಯಲ್ಲಿ ಸಹಜವಾಗಿ ಹಾಲಿನ ಉತ್ಪಾದನೆ ಕುಸಿತ ಇರುತ್ತದೆ. ಆದರೆ, ಜಿಲ್ಲೆಯಲ್ಲಿ ನಂದಿನಿ ಹಾಲು, ಮೊಸರು, ಮತ್ತಿತರ ಉತ್ಪನ್ನಗಳಲ್ಲಿ ಗ್ರಾಹಕರಿಗೆ ಯಾವುದೇ ಕೊರತೆ ಇಲ್ಲ. ●ಪದ್ಮಾ, ಎಂಡಿ, ಮೇಗಾ ಡೇರಿ, ನಂದಿ ಕ್ರಾಸ್, ಚಿಕ್ಕಬಳ್ಳಾಪುರ.
ಬೆಣ್ಣೆ ಪೂರೈಕೆ ಆಗಿ ತಿಂಗಳ ಮೇಲಾಗಿದೆ ಕೋಲಾರ -ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ನಂದಿನಿ ಮಿಲ್ಕ್ ಔಟ್ ಲೇಟ್‌ಗಳಿಗೆ ಬೆಣ್ಣೆ ಸರಬರಾಜು ಆಗಿ ತಿಂಗಳ ಮೇಲೆ ಆಗಿದೆ. ತುಪ್ಪ ಕೂಡ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಪನ್ನೀರಿಗೆ ಬೇಡಿಕೆ ಇದ್ದರೂ ಕಡಿಮೆ ಪ್ರಮಾಣದಲ್ಲಿ ಸರಬರಾಜು ಮಾಡಲಾಗುತ್ತಿದೆ. ●ಹೆಸರೇಳಲು ಇಚ್ಛಿಸದ ನಂದಿನಿ ಉತ್ಪನ್ನ ಮಾರಾಟ ಮಳಿಗೆ ಮಾಲಿಕ.