Advertisement
ಶೇಷಾದ್ರಿಪುರಂ ಸಮೂಹ ವಿದ್ಯಾಸಂಸ್ಥೆಗಳ ಬೆಳ್ಳಿ ಮಹೋತ್ಸವದ ಪ್ರಯುಕ್ತ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ರಾಷ್ಟ್ರ ನಿರ್ಮಾಣಕ್ಕಾಗಿ ಶಿಕ್ಷಣ ಮತ್ತು ಜ್ಞಾನ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
Related Articles
Advertisement
ಶಿಕ್ಷಣದಲ್ಲಿ ಆಂತರಿಕ ಮೌಲ್ಯ ಅಗತ್ಯ: ಆಧುನಿಕ ಶಿಕ್ಷಣ ವ್ಯವಸ್ಥೆಯ ಪಠ್ಯಕ್ರಮದಲ್ಲಿ ಆಂತರಿಕ ಮೌಲ್ಯವನ್ನು ಸೇರಿಸುವ ಅಗತ್ಯವಿದೆ. ಮಠಗಳ ಅಧೀನದ ಶಾಲೆಗಳಿಂದ ಶಿಕ್ಷಣ ವ್ಯವಸ್ಥೆಯ ಪೂರ್ಣ ಪ್ರಮಾಣದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವೇ ಎಂಬುದನ್ನು ಚಿಂತಿಸಬೇಕು. ಶಿಕ್ಷಣ ಸಂಸ್ಥೆಗಳು ಮಕ್ಕಳ ಬೌದ್ಧಿಕ ಹಾಗೂ ಭೌತಿಕ ಅಭಿವೃದ್ಧಿಗೆ ಅಗತ್ಯವಿರುವ ಪಠ್ಯಕ್ರಮ ರೂಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವಯಂ ಪ್ರತಿಷ್ಠೆ ಬೇಡ: ಸ್ವಯಂ ಪ್ರತಿಷ್ಠೆಗೆ ಒಳಗಾದ ವ್ಯಕ್ತಿ ಒಬ್ಬಂಟಿಯಾಗುತ್ತಾನೆ. ಹುಟ್ಟು ಸಾವಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ ಎಲ್ಲರನ್ನು ಸಮಾನವಾಗಿ ಕಾಣಬೇಕು. ಶಾಂತಿ, ಸೌಹಾರ್ದತೆ ಮತ್ತು ನೆಮ್ಮದಿಯಿಂದ ಬಾಳಬೇಕು. ಆದರೆ, ಕೆಲವು ಭಾಗದಲ್ಲಿ ಅಹಿಂಸೆಯಿಂದ ಜನ ಸಾಯುತ್ತಿದ್ದಾರೆ. ಜಾಗತಿಕ ತಾಪಮಾನ ಮತ್ತು ಆರ್ಥಿಕತೆ ಪ್ರತಿಯೊಬ್ಬರ ಭವಿಷ್ಯದ ಮೇಲೂ ಪ್ರಭಾವ ಬೀರಲಿದೆ.
ವಿಶ್ವದ ಸಮಾನತೆಯನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಏಕತೆ, ಸಾಮಾಜಿಕ ಜವಾಬ್ದಾರಿ ಮತ್ತು ಧಾರ್ಮಿಕ ಸೌಹಾರ್ದತೆ ಅತಿ ಅವಶ್ಯಕ ಎಂದು ಹೇಳಿದರು. ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಪ್ರಧಾನ ಕಾರ್ಯದರ್ಶಿ ಡಾ.ವೂಡೆ ಪಿ.ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ನನಗೆ ಸಂಬಂಧಿಸಿದ್ದಲ್ಲ; ನಿಮಗೆ ಬಿಟ್ಟಿದ್ದು: ಪ್ರಧಾನಿ ಮೇದಿಯವರ ಭಾರತದ ಬಗ್ಗೆ ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದಲೈಲಾಮ ಅವರು, ಇದು ನನಗೆ ಸಂಬಂಧಿಸಿದ್ದಲ್ಲ. ನಿಮಗೆ ಬಿಟ್ಟಿದ್ದು ಎಂದರು. ಸ್ವಧರ್ಮದಿಂದ ಸತ್ತರೂ ಪರವಾಗಿಲ್ಲ. ಪರಧರ್ಮ ಎಂದರೆ ಭಯ ಆಗುತ್ತದೆ ಎಂದು ಭಗವದ್ಗೀತೆಯ ಶ್ಲೋಕವನ್ನು ಉಲ್ಲೇಖೀಸಿ ವಿಶ್ವನಾಥ ಶರ್ಮ ಅವರು ಧರ್ಮದ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಏನೂ ಉತ್ತರ ನೀಡುವುದಿಲ್ಲ ಎಂದು ದಲೈಲಾಮ ಅವರು ಸುಮ್ಮನಾದರು.
ವಾಸ ಯೋಗ್ಯ ಅನ್ಯ ಗೃಹದ ಹುಡುಕಾಟ: “ಆಧುನಿಕ ತಂತ್ರಜ್ಞಾನವು ಪ್ರಪಂಚವನ್ನು ಸಂಕೀರ್ಣಗೊಳಿಸಿದೆ. ಸಂಪರ್ಕ ವ್ಯವಸ್ಥೆ ಸಾಕಷ್ಟು ಅಭಿವೃದ್ಧಿಯಾಗಿದೆ. ತಂತ್ರಜ್ಞಾನದ ಸದುಪಯೋಗ, ದುರುಪಯೋಗ ಆಗುತ್ತಿರುವುದರಿಂದ ಅನೇಕ ಸಮಸ್ಯೆಯೂ ಹುಟ್ಟಿಕೊಂಡಿದೆ. ಭೂಮಿ ಮೇಲಿರುವ ಸಂಪತ್ತನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದ್ದೇವೆ.
ಮುಂದಿನ ಪೀಳಿಗೆಗೆ ಏನನ್ನೂ ಉಳಿಸಲು ಸಾಧ್ಯವಿಲ್ಲ ಎಂಬಂತಾಗಿದೆ. ಭೂಮಿಯ ಮೇಲೆ ಒತ್ತಡದ ಬದುಕು ನಡೆಸುತ್ತಿದ್ದೇವೆ. ವಾಸಕ್ಕೆ ಯೋಗ್ಯವಾಗಿರುವ ಅನ್ಯ ಗೃಹದ ಹುಡುಕಾಟ ಆರಂಭವಾಗಿದೆ. ಇದಕ್ಕೆ ಜ್ಞಾನ ಮತ್ತು ಆಧ್ಯಾತ್ಮಿಕ ಚಿಂತನೆ ಬಹಳ ಅಗತ್ಯ,’ ಎಂದು ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದರು.
ನಳಂದ ತತ್ವಜ್ಞಾನವನ್ನು ಟಿಬೆಟಿಯನ್ ಭಾಷೆಯಲ್ಲಿ ಚೆನ್ನಾಗಿ ವಿವರಿಸಲಾಗಿದೆ. ಇಂತಹ ಪ್ರಾಚೀನ ತತ್ವಶಾಸ್ತ್ರವನ್ನು ಅಧ್ಯಯನದ ಮೂಲಕ ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಶಾಂತಿಯುತ ವ್ಯಕ್ತಿಯಿಂದ ಶಾಂತಿಯುತ ಕುಟುಂಬ, ಸಮಾಜ ಹಾಗೂ ವಿಶ್ವ ನಿರ್ಮಾಣ ಸಾಧ್ಯ.-ದಲೈಲಾಮ, ಟಿಬೇಟಿಯನ್ ಧರ್ಮ ಗುರು