Advertisement
ಹಾಸನದ ಹೊರ ವಲಯ ಬೂವನಹಳ್ಳಿಯಲ್ಲಿ ಜಿಲ್ಲಾ ಕಸಾಪ ಹಮ್ಮಿಕೊಂಡಿರುವ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆಯ ಆಸ್ಮಿತೆ ಉಳಿಯಬೇಕಾದರೆ ನೆನಪು ಗಳನ್ನು ಅಳಿಸಿ ಹಾಕುತ್ತಿರುವ ಯಾಂತ್ರಿಕ ಬದುಕಿನ ವಿರುದ್ಧ ಹೋರಾಡುತ್ತಲೇ ನಮ್ಮತನ ಹೆಚ್ಚು ಮಾಡಿ ಕೊಳ್ಳಬೇಕು. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ನಮ್ಮ ಬದುಕನ್ನು ಆವರಿಸುತ್ತದೆ. ಅಂತಹ ಸಂದರ್ಭದಲ್ಲಿ ಮಾನವೀಯತೆ, ಕಲೆ, ಸಾಹಿತ್ಯ, ನೃತ್ಯ, ನಾಟಕ, ಸಿನಿಮಾ ಸೇರಿದಂತೆ ಅಂತರ್ ಸಂಬಂಧಿ ವಿಷಯ ಗಳನ್ನು ಕನ್ನಡದ ಪರವಾದ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Related Articles
Advertisement
ಬೂವನಹಳ್ಳಿಹಿರಿಮೆ: ಬೂವನಹಳ್ಳಿಯ ಮುಖಂಡ, ಮಾಜಿ ಶಾಸಕ ಬಿ.ವಿ.ಕರೀಗೌಡ ಅವರು ಮಾತನಾಡಿ, ಇಬ್ಬರು ಶಾಸಕರನ್ನು ಕೊಟ್ಟ ರಾಜಕೀಯ ಪ್ರಭಾವದ, ಶಿಕ್ಷಣಕ್ಕೆ ಕೊಡುಗೆ ನೀಡಿದ ಬೂವನಹಳ್ಳಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮಗೆ ಹೆಮ್ಮೆ. ಸಮ್ಮೇಳನವು ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.
ಇತಿಹಾಸ ನಿರ್ಮಾಣ: ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್,ಮಲ್ಲೇಶಗೌಡ ಅವರು ಪ್ರಾಸ್ತಾವಿನ ನುಡಿಗಳನ್ನಾಡಿ, ಗ್ರಾಮೀಣ ಪ್ರದೇಶಕ್ಕೆ ಕಸಾಪ ಕೊಂಡೊ ಯ್ಯುವುದಾಗಿ ಚುನಾವಣೆ ವೇಳೆ ಹೇಳಿದ್ದಕ್ಕೆ ಪೂರಕ ವಾಗಿ ಈಗ ಬೂವನಹಳ್ಳಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಪರಿಷತ್ತಿನ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿದೆ ಎಂದು ಹೇಳಿದರು.
ನಿಕಟಪೂರ್ವ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮೇಟಿಕೆರೆ ಹಿರಿಯಣ್ಣ, ಕೆಆರ್‌ಡಿಸಿಎಲ್ ಉಪಾಧ್ಯಕ್ಷ ಜಿವಿಟಿ ಬಸವರಾಜು ಅವರು ಮಾತನಾಡಿದರು. ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿ ದರು. ಜಿಲ್ಲಾಕಸಾಪ ಗೌರವಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ಅವರು ಸ್ವಾಗತಿಸಿದರು. ಮತೋರ್ವ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ ಅವರು ಸಾಹಿತ್ಯ ಸಮ್ಮೇಳನಾಧ್ಯಕ್ಷರ ಪರಿಚಯ ನೀಡಿದರು.
ಕಸಾಪ ನಿಕಟಪೂರ್ವ ಜಿಲ್ಲಾಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಜಯರಾಮ್,ಜಿಪಂ ಮಾಜಿ ಅಧ್ಯಕ್ಷ ಸ್ವಾಮಿಗೌಡ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚ.ನಾ ಅಶೋಕ್. ಜಿಲ್ಲಾ ಕಸಾಪ ಕೋಶಾದ್ಯಕ್ಷ ಬಿ.ಎನ್.ಜಯರಾಂ, ಆರ್. ಶಂಕರ್, ಕೆ.ಟಿ. ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು. ಎಚ್.ಕೆ. ಲಕ್ಷ್ಮಿನಾರಾಯಣ ನಿರೂಪಿಸಿದರು.