ನಾರಾಯಣಪುರ: ಭಜನೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜೀವಂತಿಕೆ ಹೊಂದಿವೆ. ಇಂತಹ ಜಾನಪದ ಕಲೆಗಳನ್ನು ಉಳಿಸಿ-ಬೆಳೆಸಬೇಕು ಎಂದು ಜಾನಪದ ಪರಿಷತ್ ಹುಣಸಗಿ ತಾಲೂಕು ಅಧ್ಯಕ್ಷ ಬಸವರಾಜ ಭದ್ರಗೋಳ ಹೇಳಿದರು.
ಕೊಡೇಕಲ್ ಪಟ್ಟಣದಲ್ಲಿ ಈಚೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅತ್ಯಂತ ವೇಗವಾಗಿ ಬೆಳಿಯುತ್ತಿರುವ ತಾಂತ್ರಿಕ ಯುಗದಲ್ಲಿ ಜಾನಪದ ಕಲೆ ಮರೆಯಾಗುತ್ತಿದೆ. ಕಲಾವಿದರೂ ಕೂಡ ತಮ್ಮ ಕಲೆಗಳಿಂದ ದೂರವಾಗುತ್ತಿದ್ದಾರೆ. ಇಂತ ಪರಿಸ್ಥಿತಿಯಲ್ಲಿ ಕೂಡ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಜನೆ, ಬಯಲಾಟ, ನಾಟಕ, ಡೊಳ್ಳು, ಹಂತಿ ಪದ, ಸೋಬಾನ ಪದ ಸೇರಿದಂತೆ ನಾನಾ ಹಂತದ ಸಾಕಷ್ಟು ಕಲಾವಿದರು ತಮ್ಮ ಕಲೆ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ಪುರಷ್ಕೃತ ಶಿವಪ್ಪ ಹೆಬ್ಟಾಳ, ಒಕ್ಕೂಟದ ತಾಲೂಕು ಅಧ್ಯಕ್ಷ ಸಂಗಪ್ಪ ಹೆಬ್ಟಾಳ, ಪ್ರಮುಖರಾದ ಚಂದ್ರಪ್ಪ ಕಟ್ಟಿಮನಿ, ಗುಡದಪ್ಪ ಹನೀಫ್, ಹಣಮಂತ, ಪರಮಣ್ಣ, ಚಿದಾನಂದ, ಅಂಬ್ರಪ್ಪ ಗುಡಗುಂಟಿ, ಹಣಮಂತ ಪೈದೊಡ್ಡಿ, ಮಲ್ಲಪ್ಪ ಹನೀಫ್, ದೇವಮ್ಮ, ಹಳ್ಳೆಮ್ಮ, ಯಲ್ಲಮ್ಮ, ನಾಗಮ್ಮ, ಪರಮವ್ವ, ಹಣಮಂತಿ ಸೇರಿ ಕೊಟೇಗುಡ್ಡ, ಕೊಡೇಕಲ್ ಗ್ರಾಮಗಳ ಕಲಾವಿದರು, ಅಕ್ಕನ ಬಳಗದ ಸದಸ್ಯರು ಉಪಸ್ಥಿತರಿದ್ದರು.