ಅನುಗೊಂಡನಹಳ್ಳಿ: ಐತಿಹಾಸಿಕ ಹಿನ್ನೆಲೆ ಹಾಗೂ ನೂರಾರು ಎಕರೆ ಕೃಷಿ ಪ್ರದೇಶಕ್ಕೆ ನೀರುಣಿಸುತ್ತಿದ್ದ, ನಂದಿ ಬೆಟ್ಟದ ತಪ್ಪಲಿನಲ್ಲಿ ಹುಟ್ಟಿ ತಮಿಳುನಾಡಿಗೆ ಹರಿಯುತ್ತಿದ್ದ ದಕ್ಷಿಣ ಪಿನಾಕಿನಿ ನದಿ ಇಂದು ಅಳಿವಿನಂಚಿನಲ್ಲಿದೆ. ಇದು ಪರಿಸರ ಪ್ರೇಮಿಗಳಲ್ಲಿಕಳವಳ ತರಿಸಿದೆ.ಕೆರೆ ಉಳಿವಿಗಾಗಿ ಹೊಸಕೋಟೆಯ ದೊಡ್ಡ ಅಮಾನಿ ಕೆರೆ ಉಳಿಸಿ ಎಂದು ಪರಿಸರ ಪ್ರೇಮಿಗಳು ಪೋಸ್ಟರ್ ಪ್ರದರ್ಶಿಸಿ ಹೊಸಕೋಟೆ ದೊಡ್ಡ ಅಮಾನಿ ಕೆರೆ ಬಳಿ ಮೌನ ಪ್ರತಿಭಟನೆ ನಡೆಸಿದರು.
ಕೆರೆ ತ್ಯಾಜ್ಯ: ಕೊಕ್ಕರೆ, ಹಂಸ ಪಕ್ಷಿಗಳಿಗೆ ಆಶ್ರಯ ನೀಡುತ್ತಿರುವ ಕೆರೆ ಅಂಗಳಕಸ ವಿಲೇವಾರಿ ತಾಣವಾಗಿದೆ, ಕೆಡವಿದ ಹಳೆ ಮನೆಗಳ ಅವಶೇಷ, ಬೆಂಗಳೂರು ಸುತ್ತಮುತ್ತ ಸಂಗ್ರಹಿಸಿದ ಕಸವನ್ನು ತಂದು ಸುರಿಯ ಲಾಗುತ್ತಿದೆ, ಕೆರೆ ಏರಿಮೇಲೆ ಪ್ರತಿ ದಿನ ಅನೈತಿಕ ಚಟುವಟಿಕೆ ನಡೆಯುತ್ತಿವೆ, ಮದ್ಯ ವ್ಯಸನಿಗಳ ಅಡ್ಡೆಯಾಗಿದೆ,ಕೆರೆಯಂಗಳ ಒತ್ತುವರಿ, ನಗರಸಭೆಯಿಂದ ಹಿಡಿದು ಬಿಬಿಎಂಪಿ ಹಾಗೂ ಸುಂಕ ವಸೂಲಾತಿ ಕೇಂದ್ರ ದವರು ಕಸ ತಂದು ಸುರಿಯು ತ್ತಿರುವುದು ಪ್ರಮುಖ ಸಮಸ್ಯೆಯಾಗಿದೆ.
ಈ ಬಗ್ಗೆ ಸ್ಥಳೀಯರು ವಾಯು ವಿಹಾರಕ್ಕೆ ಬಂದ ಸಂದರ್ಭದಲ್ಲಿ ಕಸ ಹಾಕುವುದನ್ನು ವಿರೋಧಿಸಿ ಪೊಲೀಸರಿಗೆ ದೂರು ನೀಡಿ ಕಸ ವಿಲೇವಾರಿ ಮಾಡಿಸಿದ್ದರು. ಆದರೂ, ಕಿಡಿಗೇಡಿಗಳು ರಾತ್ರಿ ವೇಳೆ ಕಸ ಹಾಕುತ್ತಿರುವುದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಸ ಹಾಕದಂತೆ, ಅನೈತಿಕ ಚಟುವಟಿಕೆಗಳು ತಡೆಯಲು ಹೆಚ್ಚುವರಿಯಾಗಿ ಸೂಕ್ತ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ, ನಗರಸಭೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳು ಕಂಡು ಕಾಣದಂತೆ ಸುಮ್ಮನಿರುವುದು ಇನ್ನಷ್ಟು ಆತಂಕ ಮೂಡಿಸಿದೆ.
ಪರಿಸರ ಪ್ರೇಮಿಗಳು, ಪಕ್ಷಿ ಪ್ರಿಯರ ತಾಣ: ನಗರದ ಕೂಗಳತೆ ದೂರದಲ್ಲಿರುವ ದೊಡ್ಡ ಅಮಾನಿ ಕೆರೆಯಲ್ಲಿ 200ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ವಲಸೆ ಬಂದು ಹೋಗು ತ್ತವೆ. ಕಳೆದ ನಾಲ್ಕೈದು ವರ್ಷಗಳಿಂದ ಬೇರೆ ದೇಶದ ಪಕ್ಷಿಗಳೂ ವಲಸೆ ಬಂದು ತನ್ನ ಸಂತಾನೋತ್ಪತ್ತಿಯಲ್ಲಿ ತೊಡಗುತ್ತಿವೆ. ಇದನ್ನು ನೋಡಲು ಹಾಗೂ ಕ್ಯಾಮರಾದಲ್ಲಿ ಸೆರೆ ಹಿಡಿಯಲು ವಾರಾಂತ್ಯದಲ್ಲಿ ಬೆಂಗಳೂರಿನ ಸುತ್ತ ಮುತ್ತಲ ನೂರಾರು ಪರಿಸರ ಪ್ರೇಮಿಗಳು ಹಾಗೂ ಪಕ್ಷಿ ಛಾಯಾ ಗ್ರಾಹಕರು ಬರುವುದು ಸಾಮಾನ್ಯವಾಗಿದೆ. ಇದೊಂದು ಪ್ರವಾಸಿ ತಾಣ ವಾಗುವ ಎಲ್ಲಾ ಲಕ್ಷಣಗಳಿವೆ.
ರಾಜಹಂಸ ಪಕ್ಷಿ ಮೊದಲ ಭೇಟಿ: ಕಳೆದ ವರ್ಷ ಮೊದಲ ಬಾರಿಗೆ ರಾಜಹಂಸ ಪಕ್ಷಿಗಳು ಹೊಸಕೋಟೆ ದೊಡ್ಡ ಅಮಾನಿ ಕೆರೆಗೆ ಆಗಮಿಸಿದ್ದು, ಪಕ್ಷಿ ಪ್ರೇಮಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿತ್ತು. ಸಾವಿರಾರು ಜನ ಈ ರಾಜ ಹಂಸ ಪಕ್ಷಿಗಳ ವೀಕ್ಷಣೆಗೆ ಕೆರೆ ಪ್ರದೇಶಕ್ಕೆ ಭೇಟಿ ನೀಡಿದ್ದರು.
ಏರಿ ಮೇಲೆ ಸಸಿ ನೆಡುವ ಕಾರ್ಯ: ಪರಿಸರ ಪ್ರೇಮಿಗಳು, ವಾಯು ವಿಹಾರಕ್ಕೆ ಬರುವವರು ಹಾಗೂ ಪಕ್ಷಿ ಛಾಯಾಗ್ರಾಹಕರು ವರ್ಷದಲ್ಲಿ ಹಲವು ಬಾರಿ ಈ ಕೆರೆಯ ಕಟ್ಟೆಯ ಮೇಲಿರುವತ್ಯಾಜ್ಯ ಸ್ವಚ್ಛಗೊಳಿಸಲು ಅಭಿಯಾನ ಹಮ್ಮಿ ಕೊಳ್ಳುತ್ತಾರೆ. ಜೊತೆಗೆ ಕೆರೆ ಕಟ್ಟೆಯ ಮೇಲೆ ನೂರಾರು ಸಸಿ ನೆಟ್ಟಿದ್ದಾರೆ. ಪರಿಸರ ಪ್ರೇಮಿಗಳು ವಾರದಲ್ಲಿ ಮೂರು ಬಾರಿ ಸಸಿಗಳಿಗೆ ನೀರು ಹಾಕುವಕಾರ್ಯ ಮಾಡುತ್ತಿದ್ದಾರೆ.
ಕಿಡಿಗೇಡಿಗಳಿಂದ ಹಲ್ಲೆ : ಕೆಲವು ಬಾರಿ ಫೋಟೋ ತೆಗೆಯಲು ಬರುವ ಪರಿಸರ ಪ್ರೇಮಿಗಳ ಮೇಲೆ ಮದ್ಯ ಸೇವಿಸಿ ಅಕ್ರಮ ಚಟುವಟಿಕೆ ನಡೆಸುವವ ರಿಂದ ಹಲ್ಲೆ ಹಾಗೂ ಸುಲಿಗೆ ಯತ್ನ ನಡೆದಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ದಿನದಿಂದ ದಿನಕ್ಕೆ ಹೊಸಕೋಟೆಯ ಐತಿಹಾಸಿಕ ದೊಡ್ಡ ಅಮಾನಿ ಕೆರೆ ಅಳಿವಿನಂಚಿಗೆ ದೂಡಲ್ಪಡುತ್ತಿದೆ. ಪರಿಸರ ಪ್ರೇಮಿ ಗಳೆಲ್ಲ ಸೇರಿ ಮೌನ ಪ್ರತಿಭಟನೆ ಮಾಡಿ ಕೆರೆ ಉಳಿಸಿ ಅಭಿಯಾನ ನಡೆಸುತ್ತಿದ್ದೇವೆ.ಕೂಡಲೇ ನೂರಾರು ಪಕ್ಷಿಗಳಿಗೆ ಆಶ್ರಯ ನೀಡುತ್ತಿರುವಕೆರೆ ಉಳಿಸಲು ಸ್ಥಳೀಯ ಅಧಿಕಾರಿಗಳು ಸೂಕ್ತಕ್ರಮಕೈಗೊಳ್ಳಬೇಕಿದೆ.
-ಪುರುಷೋತ್ತಮ, ಪರಿಸರ ಪ್ರೇಮಿ