Advertisement
ಕೂರ್ಮಾ ಬಳಗದಿಂದ ಬುಧವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ ಸಾವರ್ಕರ್ ಸಾಹಿತ್ಯ ಸಂಭ್ರಮ “ಜಯೋಸ್ತುತೇ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ಚಿಂತನೆ ಯಂತೆ ಸಾವರ್ಕರ್ ತಮ್ಮ 7ನೇ ವರ್ಷದಲ್ಲಿ ಪ್ರತಿಜ್ಞೆ ಮಾಡಿ, ಜೀವನ ಪೂರ್ತಿ ಅದರಂತೆಯೇ ಬದುಕಿದರು. ಆರಂಭದಲ್ಲಿ ಮಿತ್ರಮೇಳ ಎಂಬ ಸಂಘಟನೆ ಕಟ್ಟಿಕೊಂಡು ಯುವಕರಿಗೆ ಶಿವಾಜಿಯ ಜೀವನದ ಪ್ರೇರಣದಾಯಿ ಸಂದೇಶ ನೀಡುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಅವರನ್ನು ಸಜ್ಜುಗೊಳಿಸುತ್ತಿದ್ದರು. ಸಾವರ್ಕರ್ ವಿದೇಶದಲ್ಲೂ ಮದನ್‌ಲಾಲ್ ದಿಂಗ್ರ ಸಹಿತವಾಗಿ ಅನೇಕರಿಗೆ ಸ್ವಾತಂತ್ರ್ಯ ದೀಕ್ಷೆ ನೀಡಿದ್ದರು. ಜೈಲಿನಲ್ಲಿ ಶಾರೀರಿಕ ಹಿಂಸೆಯನ್ನು ಅನುಭವಿಸಿ, ಮಾನಸಿಕ ಸ್ವಾಸ್ಥ éವನ್ನು ಕಾಪಾಡಿಕೊಂಡು ಅನೇಕ ಕೈದಿಗಳ ಮನಪರಿರ್ವನೆ ಮಾಡಿದ್ದಾರೆ ಎಂದರು.
Related Articles
Advertisement
ಇದನ್ನೂ ಓದಿ:ಯುವಕರೇ ನಮ್ಮ ದೇಶದ ಶಕ್ತಿ: ಪ್ರಧಾನಿ ಮೋದಿ
ಸಾಮಾಜಿಕ ಕ್ರಾಂತಿಅಸ್ಪೃಶ್ಯತೆ ನಿವಾರಣೆಗಾಗಿ ಸಾವರ್ಕರ್ ಅನೇಕ ಹೋರಾಟ ಮಾಡಿದ್ದಾರೆ. ಕೆಲವು ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರದ ಒಳಗೆ ಪ್ರವೇಶ ನೀಡದೇ ಇರುವುದನ್ನು ಕಟುವಾಗಿ ಖಂಡಿಸಿ, ಆ ಸಮುದಾಯವನ್ನು ಸಾಮೂಹಿಕವಾಗಿ ದೇವಸ್ಥಾನದ ಒಳಗೆ ಕರೆದುಕೊಂಡು ಹೋಗಿದ್ದಾರೆ. ಅವರಿದ್ದ ಪರಿಸರದಲ್ಲಿ 400 ದೇವಸ್ಥಾನದಲ್ಲಿ ಈ ರೀತಿಯ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಸುಧಾರಣೆ ತಂದಿದ್ದಾರೆ. ಇದಕ್ಕೆ ಪುರಕವಾಗಿ ಪುಸ್ತಕಗಳನ್ನು ಬರೆದು ಜಾಗೃತಿ ಮೂಡಿಸಿದ್ದಾರೆ. ಸಾವರ್ಕರ್ ತಮ್ಮ ಹಿಂದುತ್ವ ಎನ್ನುವ ಪುಸ್ತಕದ ಮೂಲಕ ಹಿಂದುತ್ವಕ್ಕೆ ಹೊಸ ತಿರುವು ನೀಡುವ ಜತೆಗೆ ಹಿಂದುತ್ವದ ಚರ್ಚೆಯನ್ನು ಸಮಗ್ರವಾಗಿ ಅದರಲ್ಲಿ ಮಾಡಿದ್ದಾರೆ ಎಂದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಾತ್ಯಕಿ ಅವರನ್ನು ಸಭಾಂಗಣಕ್ಕೆ ಸ್ವಾಗತಿಸಿ, ಆನಂತರ ಭಾರತಮಾತೆ, ಸ್ವಾಮಿ ವಿವೇಕಾನಂದ ಹಾಗೂ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡಿದರು. ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಧರ್ಮ ಡಿಸ್ಪ್ಯಾಚ್‌ನ ಲೇಖಕ ಸಂದೀಪ್ ಬಾಲಕೃಷ್ಣನ್, ಕೂರ್ಮಾ ಬಳಗದ ಸಂಚಾಲಕ ಶ್ರೀಕಾಂತ್ ಶೆಟ್ಟಿ, ಲೇಖಕ ಪ್ರಕಾಶ್ ಮಲ್ಪೆ, ಶಾಸಕ ಲಾಲಾಜಿ ಆರ್. ಮೆಂಡನ್ ಉಪಸ್ಥಿತರಿದ್ದರು. ಗೀತೆಗಾಯನ, ನೃತ್ಯಮಾಲಿನಿ ಕೇಶವ ಪ್ರಸಾಸ್, ಕಿಶೋರ್ ಪೆರ್ಲ, ಯಶವಂತ ಅವರ ತಂಡದಿಂದ ಸಾವರ್ಕರ್ ರಚಿತ ಗೀತೆಗಾಯನ ಹಾಗೂ ಕಲಾವಿದೆ ಮಂಜರಿ ಚಂದ್ರ ಅವರ ತಂಡದಿಂದ ನೃತ್ಯ ಪ್ರದರ್ಶನ ಗೊಂಡಿತು. ಮಹೇಶ್ ಮಲ್ಪೆ ಅವರು ರುಬಿಕ್ ಕ್ಯೂಬ್ ಮೂಲಕ ಸಾವರ್ಕರ್ ಚಿತ್ರ ಹಾಗೂ ಕಲಾವಿದ ರಾಘವೇಂದ್ರ ಅಮಿನ್ ರೇಖಾಚಿತ್ರದಲ್ಲಿ ಸಾವರ್ಕರ್ ಚಿತ್ರ ಬಿಡಿಸಿ ಗಮನ ಸೆಳೆದರು. ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು. ಸಂಧಾನ ಪತ್ರ, ಕ್ಷಮಾಪಣೆ ಪತ್ರವಲ್ಲ
ಸಾವರ್ಕರ್‌ಗೆ ಬ್ರಿಟಿಷ್ ಸರಕಾರ ಎರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಂಡಮಾನ್ ಮತ್ತು ರತ್ನಾಗಿರಿಯ ಜೈಲಿನಿಂದಲೇ ಅನೇಕ ರೀತಿಯ ಕ್ರಾಂತಿಕಾರಿ ಚಟುವಟಿಕೆಯನ್ನು ನಡೆಸಿದ್ದಾರೆ. ಸಾವರ್ಕರ್ ಎಂದೂ ತಮ್ಮನ್ನು ಜೈಲಿದಿಂದ ಬಿಡುಗಡೆ ಮಾಡಿ ಎಂದು ಕ್ಷಮಾಪಣೆ ಪತ್ರವನ್ನು ಬ್ರಿಟಿಷರಿಗೆ ನೀಡಿಲ್ಲ. ಬದಲಾಗಿ ಸಂಧಾನ ಅಥವಾ ಆವೇದನ ಪತ್ರವನ್ನು ನೀಡಿದ್ದರು. ಆದರೆ ಬ್ರಿಟಿಷರು ಯಾವ ಸಂಧಾನಕ್ಕೂ ಒಪ್ಪಲಿಲ್ಲ. ಸಾವರ್ಕರ್ ಏಳು ಬಾರಿ ಬರೆದಿದ್ದ ಪತ್ರವನ್ನು ಬ್ರಿಟಿಷರು ತಿರಸ್ಕರಿಸಿದ್ದರು ಎಂದು ಸಾತ್ಯಕಿ ಸಾವರ್ಕರ್ ಹೇಳಿದರು.