Advertisement

ಪಠ್ಯ ಪುಸ್ತಕದಲ್ಲಿ ಸಾವರ್ಕರ್‌ ಪೋರ್ಚುಗಲ್‌ ನಾಗರಿಕ!

08:32 PM May 28, 2019 | mahesh |

ಜೈಪುರ: ರಾಜಸ್ಥಾನದಲ್ಲಿನ ಪಠ್ಯಪುಸ್ತಕ ಪರಿಷ್ಕರಣೆ ಪ್ರಕ್ರಿಯೆ ಈಗ ಮತ್ತೂಂದು ವಿವಾದವನ್ನು ಹುಟ್ಟು ಹಾಕಿದೆ. ಈಗಾಗಲೇ ಸಾವರ್ಕರ್‌ ಕುರಿತ ಪಠ್ಯವನ್ನು ತಿದ್ದಿರುವ ಪಠ್ಯಪುಸ್ತಕ ಸಮಿತಿ, ಅದರಲ್ಲಿ ಸಾವರ್ಕರ್‌ರನ್ನು ಪೋರ್ಚುಗಲ್‌ನ ನಾಗರಿಕ ಎಂಬಂತೆ ಬಿಂಬಿಸಿದೆ.

Advertisement

ಸಾವರ್ಕರ್‌ 1910-11ರಲ್ಲಿ ಬ್ರಿಟಿಷ್‌ ಸರಕಾರಕ್ಕೆ ಕ್ಷಮಾಪಣೆ ಸಲ್ಲಿಸಿದ್ದಾಗ, ತನ್ನನ್ನು ಪೋರ್ಚುಗಲ್‌ ಪುತ್ರ ಎಂದು ಬರೆದುಕೊಂಡಿದ್ದ ಎಂದು ಪಠ್ಯದಲ್ಲಿ ಉಲ್ಲೇಖೀಸಲಾಗಿದೆ. ಅಷ್ಟೇ ಅಲ್ಲ, ಈ ಹಿಂದೆ ವರದಿಯಾದಂತೆ ಸಾವರ್ಕರ್‌ಗೆ “ವೀರ’ ಎಂಬ ಪದವನ್ನೂ ಬಳಸಿಲ್ಲ. ಈ ಪ್ರಕರಣ ತೀವ್ರ ಆಕ್ಷೇಪಕ್ಕೆ ಕಾರಣವಾಗಿದ್ದು, ಇದು ಸಾವರ್ಕರ್‌ಗೆ ಮಾಡಿದ ಅವಮಾನ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next