Advertisement
ಎಲ್ಲಾ ಯೋಜನೆಗಳಿಗೆ ನೆಹರು, ಗಾಂಧಿ ಇಟ್ಟಿದ್ದಾರೆ ಬೇರೆಯವರ ಹೆಸರು ಇಟ್ಟರೆ ಕಾಂಗ್ರೆಸ್ ನಾಯಕರಿಗೆ ಆಗೋದಿಲ್ಲ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು 25 ವರ್ಷ ಸೆರೆವಾಸ ಅನುಭವಿಸಿದವರು, ಅಂತಹ ಹೋರಾಟಗಾರನ ಬಗ್ಗೆ ವಿರೋಧ ಸರಿಯಲ್ಲ.
Related Articles
Advertisement
ಸಾವರ್ಕರ್ ಹೆಸರನ್ನು ಇರಿಸುವುದಕ್ಕೆ ಸಂಪೂರ್ಣ ಬೆಂಬಲವಿದೆ. ಹಿಂದೂ ಸಿದ್ಧಾಂತ ಪ್ರತಿಪಾದಕರೆಂಬ ಕಾರಣಕ್ಕೆ ಅವರ ಹೆಸರಿಡುವುದನ್ನು ವಿರೋಧಿಸುವುದು ಸರಿಯಲ್ಲ. ಹಾಗಾದರೆ ಹಿಂದೂ ಆಗಿ ಹುಟ್ಟುವುದೇ ತಪ್ಪಾ? ಎಂದು ಅಶೋಕ್ ಅವರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನವರ ಗೊಡ್ಡು ಬೆದರಿಕೆಗೆ ನಾವು ಹೆದರೋದಿಲ್ಲ, ಸಾವರ್ಕರ್ ಹೆಸರನ್ನು ಇಟ್ಟೇ ಇಡ್ತೇವೆ ಎಂದು ಅಶೋಕ್ ಖಚಿತ ಧ್ವನಿಯಲ್ಲಿ ನುಡಿದಿದ್ದಾರೆ.
ಹೊಟೇಲ್ ಪ್ರಾರಂಭದ ವಿಚಾರಸಂಪನ್ಮೂಲ ಕ್ರೋಡೀಕರಣ ಮಾಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಹಾಗೆಂದು ಕೋವಿಡ್ ಬಗ್ಗೆ ನಿರ್ಲ್ಯಕ್ಷ್ಯ ವಹಿಸುವುದಿಲ್ಲ. ಈ ಕುರಿತಾಗಿ ಜೂನ್ 1ರ ನಂತರ ಕೇಂದ್ರದ ನಿರ್ದೇಶನವನ್ನು ನೋಡಿಕೊಂಡು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವ ಅಶೋಕ್ ಅವರು ಹೇಳಿದರು. ರಾಜ್ಯದಲ್ಲಿ ಹೊಟೇಲ್ ವ್ಯವಹಾರವನ್ನು ಪ್ರಾರಂಭಿಸಲು ನಮ್ಮ ಸರ್ಕಾರ ಮುಕ್ತ ಮನಸ್ಸನ್ನು ಹೊಂದಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡುವುದಿಲ್ಲ ಎಂದೂ ಸಚಿವ ಅಶೋಕ್ ಅವರು ನುಡಿದರು.