Advertisement
ಸಾರ್ವಜನಿಕ ಗಣೇಶೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸ್ ಬಂದೋಬಸ್ತ್ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾಸಗಿ ಜಾಗದಲ್ಲಿ ವೀರ ಸಾವರ್ಕರ್, ಬಾಲಗಂಗಾಧರ ತಿಲಕ್ ಸೇರಿದಂತೆ ಯಾರದ್ದೇ ಭಾವಚಿತ್ರ, ವಿಗ್ರಹ ಇಡಲು ನಮ್ಮ ಅಭ್ಯಂತರ ಇಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಜವಾಹರಲಾಲ್ ನೆಹರೂ, ಚಂದ್ರಶೇಖರ್ ಆಜಾದ್, ವೀರ್ ಸಾವರ್ಕರ್ ಇತರ ಯಾರ ಭಾವಚಿತ್ರ ಹಾಕಬೇಕಾದರೂ ಸ್ಥಳೀಯ ಸಂಸ್ಥೆಗಳ ಪರವಾನಿಗೆ ಪಡೆಯಬೇಕಾಗುತ್ತದೆ ಎಂದರು.
ಸಾವರ್ಕರ್ ಫೋಟೋ ತೆರವುಗೊಳಿಸಿದರೆ ಕೈ ಕಡೀತೀವಿ ಎನ್ನುವ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಯಾರ್ಯಾರೋ ಏನೇನೋ ಮಾತನಾಡುತ್ತಾರೆ. ಜನರಿಗೆ ಮಾತನಾಡುವ ಹಕ್ಕಿದೆ. ಕೆಲವು ಜನರು ಕಾನೂನು ಉಲ್ಲಂಘಿಸಿ ಮಾತನಾಡುತ್ತಾರೆ. ಇನ್ನೂ ಕೆಲವರು ಕಾನೂನಿನ ಇತಿಮಿತಿಗಳಲ್ಲಿ ಮಾತನಾಡುತ್ತಾರೆ. ಎಲ್ಲರ ಬಗ್ಗೆ ನಾವು ಕಾಮೆಂಟ್ ಮಾಡಲು ಆಗುವುದಿಲ್ಲ. ಗಣೇಶೋತ್ಸವದಲ್ಲಿ ಡಿಜೆ, ಡಾಲ್ಬಿ ಸೌಂಡ್ ಕುರಿತು ನ್ಯಾಯಾಲಯದ ಮಾರ್ಗಸೂಚಿ ಪಾಲಿಸಬೇಕು. ಮಾರ್ಗಸೂಚಿ ಉಲ್ಲಂಘಿಸಿದರೆ ಅಧಿ ಕಾರಿಗಳು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದರು.