Advertisement
ಅವರು ಗುರುವಾರ ಸ್ಥಳೀಯ ರಬಕವಿ-ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ತೇರದಾಳದ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ರೈತರ ಸಭೆಯಲ್ಲಿ ಮಾತನಾಡಿದರು.ಕಬ್ಬು ಪೂರೈಕೆ ಮಾಡಿದ ರೈತರು ಲಿಖಿತ ರೂಪದಲ್ಲಿ ಮತ್ತು ಅಗತ್ಯವಾದ ದಾಖಲೆಗಳ ಜೊತೆಗೆ ಇದೇ ೧೮ ರಿಂದ ೨೪ ಸಂಜೆ ೫.೩೦ ರ ಒಳಗಾಗಿ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
Related Articles
Advertisement
ಈ ಸಂದರ್ಭದಲ್ಲಿ ರೈತ ಮುಖಂಡರು ಸರ್ಕಾರ ನಿಗದಿ ಮಾಡಿದ ಬೆಲೆಗೆ ನಮ್ಮ ಸಮ್ಮತಿ ಇರುವುದಿಲ್ಲ. ನಾವು ಇಷ್ಟರಲ್ಲಿಯೇ ಕಬ್ಬು ಪೂರೈಕೆ ಮಾಡಿದ ರೈತರ ಸಭೆಯನ್ನು ಕರೆಯುತ್ತೇವೆ. ಅಲ್ಲಿ ಬಿಲ್ ಕುರಿತು ಚರ್ಚೆ ಮಾಡಿ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ಪತ್ರಿಕೆಗೆ ತಿಳಿಸಿದರು.
ಈಗಿರುವ ಕಬ್ಬಿನ್ ಬಿಲ್ಲನ್ನು ಪಡೆದುಕೊಂಡು ಮುಂದಿನ ಹಣಕ್ಕಾಗಿ ಮತ್ತು ಹಣದ ಮೇಲಿನ ಬಡ್ಡಿಗಾಗಿ ಮತ್ತೆ ನಾವು ಹೋರಾಟ ಮಾಡುತ್ತೇವೆ ಎಂದು ರೈತ ಸಂಘದ ಮುಖಂಡ ಬಂಡು ಪಕಾಲಿ ಪತ್ರಿಕೆಗೆ ತಿಳಿಸಿದರು.
ಮೂರು ವರ್ಷ ಹೋರಾಟದ ಫಲವಾಗಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ನ್ಯಾಯ ಒದಗಿದಂತಾಗಿದೆ. ಸಕ್ಕರೆ ಕಾರ್ಖಾನೆಯು ಇನ್ನೂ ಹೆಚ್ಚಿನ ಬಿಲ್ ನೀಡಬೇಕಾಗಿದೆ ಎಂದು ರೈತ ಸಂಘದ ಮುಖಂಡ ಹೊನ್ನಪ್ಪ ಬಿರಡಿ ತಿಳಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಶ್ರೀಕಾಂತ ಘೂಳನ್ನವರ, ಶಿವಪ್ಪ ಹೋಟಕರ್, ಧರಿಗೌಡರ, ಭುಜಬಲಿ ಕೆಂಗಾಲಿ, ಯಲ್ಲಪ್ಪ ಮೂಸಿ, ಸರೇಶ ತೇಲಿ, ಮಹಾದೇವ ಬುಗಡಿ, ರಾಮಪ್ಪ ಹೊಸೂರ, ಭೀಮಶಿ ಕರಿಗೌಡರ, ಪರಪ್ಪಾ ಕಮಲದಿನ್ನಿ, ಬಾಹುಬಲಿ ನಂದಗಾವಿ ಇದ್ದರು.