Advertisement

ಫಲಾನುಭವಿಗಳಿಂದಲೇ ಯೋಜನೆ ಯಶಸ್ವಿ: ಅಂಗಾರ

07:59 AM Jan 24, 2019 | |

ಸವಣೂರು: ಯೋಜನೆಗಳ ಯಶಸ್ವಿ ಅನುಷ್ಠಾನ ಫಲಾನುಭವಿಗಳ ಪಾಲ್ಗೊಳ್ಳುವಿಕೆ ಹಾಗೂ ಸದು ಪಯೋಗ ವನ್ನು ಅವಲಂಬಿಸಿದೆ. ಸರಕಾರ ಯಾವ ಯೋಜನೆ ತಂದರೂ ಸಾರ್ವಜನಿಕರ ಸಹಭಾಗಿತ್ವದಿಂದ ಯಶಸ್ವಿಯಾಗಲು ಸಾಧ್ಯ ಎಂದು ಸುಳ್ಯ ಶಾಸಕ ಎಸ್‌. ಅಂಗಾರ ಹೇಳಿದರು.

Advertisement

ಅವರು ಬುಧವಾರ ಸವಣೂರು ಗ್ರಾ.ಪಂ. ವ್ಯಾಪ್ತಿಯ ಪುಣ್ಚಪ್ಪಾಡಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಹೊಸ ಕಾಮಗಾರಿ ಗಳಿಗೆ ಚಾಲನೆ ನೀಡಿ ಮಾತನಾಡಿದರು.

ಪುಣ್ಚಪ್ಪಾಡಿ ಗ್ರಾಮದ ನೂಜಾಜೆ ವಿದ್ಯುತ್‌ ಪರಿವರ್ತಕದ ಉದ್ಘಾಟನೆ, ನೂಜಾಜೆ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಕುಮಾರ ಮಂಗಲ ರಸ್ತೆಯ ಮರು ಡಾಮರು ಕಾಮಗಾರಿ ಉದ್ಘಾಟನೆ, ಕನ್ಯಾಮಂಗಲ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿ ಪೂಜೆ, ಉದ್ಯೋಗ ಖಾತರಿಯಲ್ಲಿ ನಿರ್ಮಾಣವಾಗುತ್ತಿರುವ ಪುಣ್ಚಪ್ಪಾಡಿ ಶಾಲಾ ಆವರಣ ಗೋಡೆ ಕಾಮಗಾರಿ ವೀಕ್ಷಣೆ, ಕುಮಾರಮಂಗಲ ಶಾಲಾ ಆವರಣಗೋಡೆಗೆ ಗುದ್ದಲಿಪೂಜೆ, ಪುಣ್ಚಪ್ಪಾಡಿ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಆವರಣ ಗೋಡೆ ಉದ್ಘಾಟನೆ, ಓಡಂತರ್ಯದಲ್ಲಿ ಸಮೂಹ ನೀರಾವರಿ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ಹಸ್ತಾಂತರ, ದೀನ್‌ ದಯಾಳ್‌ ಜೀವನ್‌ ಜ್ಯೋತಿ ವಿದ್ಯುತ್‌ ಸಂಪರ್ಕದ ಉದ್ಘಾಟನೆ ನಡೆಯಿತು.

ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್‌, ಪುತ್ತೂರು ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕೆ., ಎಪಿಎಂಸಿ ನಿರ್ದೇಶಕ ದಿನೇಶ್‌ ಮೆದು, ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ. ಕೆ., ಉಪಾಧ್ಯಕ್ಷ ರವಿ ಕುಮಾರ್‌, ಸದಸ್ಯರಾದ ಗಿರಿಶಂಕರ್‌ ಸುಲಾಯ, ನಾಗೇಶ್‌ ಒಡಂತರ್ಯ, ಜಯಂತಿ ಮಡಿವಾಳ, ವೇದಾವತಿ ಅಂಜಯ, ಸತೀಶ್‌ ಬಲ್ಯಾಯ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ರಾಕೇಶ್‌ ರೈ ಕೆಡೆಂಜಿ, ಬಿಜೆಪಿ ಪಂಚಾಯತ್‌ ಸಮಿತಿ ಅಧ್ಯಕ್ಷ ಗಣೇಶ್‌ ಶೆಟ್ಟಿ ಕುಂಜಾಡಿ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ. ಸುಪ್ರೀತ್‌ ರೈ ಖಂಡಿಗ, ನಿರ್ದೇಶಕ ಪ್ರಜ್ವಲ ಕೆ.ಆರ್‌., ತಾ.ಪಂ. ಮಾಜಿ ಸದಸ್ಯ ಸೋಮನಾಥ ಡಿ. ಕನ್ಯಾಮಂಗಲ, ನಾಗರಾಜ ನಿಡ್ವಣ್ಣಾಯ, ಪ್ರವೀಣ್‌ ಶೆಟ್ಟಿ ನೂಜಾಜೆ ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯ ಗಿರಿಶಂಕರ್‌ ಸುಲಾಯ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next