Advertisement

ಮಂಗಳೂರು: ಕಾಮಗಾರಿ ಆದರೂ ಉದ್ಘಾಟನೆಗೆ “ನೀತಿ ಸಂಹಿತೆ’ ಬಿಸಿ!

03:29 PM Apr 01, 2024 | Team Udayavani |

ಮಹಾನಗರ: ಕೆಲವೇ ವಾರದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ನಗರದೆಲ್ಲೆಡೆ ಚುನಾವಣೆ ನೀತಿ ಸಂಹಿತಿ ಜಾರಿಯಲ್ಲಿದೆ. ಇದೇ ಕಾರಣಕ್ಕೆ ನಗರದಲ್ಲಿ ಈಗಾಗಲೇ ಕೆಲವೊಂದು ಮಹತ್ವದ ಕಾಮಗಾರಿಗಳು ಪೂರ್ಣ ಗೊಂಡಿದ್ದರೂ ಉದ್ಘಾಟನೆಗೆ ನೀತಿ ಸಂಹಿತೆಯ ಬಿಸಿ ತಟ್ಟಿದೆ.

Advertisement

ಕಳೆದ ವಿಧಾನಸಭಾ ಚುನಾವಣೆ ವೇಳೆಗೆ ಕಾಮಗಾರಿ ಪೂರ್ಣಗೊಂಡಿದ್ದ ಕದ್ರಿ ಮಾರುಕಟ್ಟೆ ಸಂಕೀರ್ಣದ ಉದ್ಘಾಟನೆ ಇನ್ನೂ ನಡೆದಿಲ್ಲ. ಇಲ್ಲಿ 12.30 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ನೂತನ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸಲಾಗಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತೀಚೆಗೆ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈಗಾಗಲೇ ಪಕ್ಕದಲ್ಲಿರುವ ತಾತ್ಕಾ
ಲಿಕ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿರುವವರನ್ನು ನೂತನ ಮಾರುಕಟ್ಟೆಗೆ ಸ್ಥಳಾಂತರಿಸುವ ಕುರಿತು ಮಾತುಕತೆ ನಡೆಸ
ಲಾಗಿದೆ. ಸದ್ಯದಲ್ಲೇ ಉದ್ಘಾಟನೆಯ ಮಾತುಕತೆ ನಡೆಸಲಾಗಿತ್ತಾದರೂ ಇನ್ನೂ ಆರಂಭಗೊಂಡಿಲ್ಲ.

ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ನೀಡಲು ಲಾಲ್‌ಬಾಗ್‌ ಬಳಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ
ಕ್ರೀಡಾ ವಸತಿ ನಿಲಯದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಎರಡು ಮಹಡಿಯ ಈ ವಸತಿ ನಿಲಯದಲ್ಲಿ 50 ಮಕ್ಕಳ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಕೆಲವು ತಿಂಗಳ ಹಿಂದೆ ದಿನಾಂಕ ನಿಗದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ
ಅದು ಮೊಟಕುಗೊಂಡಿತ್ತು. ಆದರೆ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಉದ್ಘಾಟನೆ ಮಾಡುವಂತಿಲ್ಲ. ಅಲ್ಲೇ ಪಕ್ಕದಲ್ಲಿ ಅಭಿವೃದ್ಧಿಗೊಂಡ ಸ್ಕೇಟಿಂಗ್‌ ರಿಂಕ್‌ ಉದ್ಘಾಟನೆಯೂ ಬಾಕಿ ಉಳಿದಿದೆ.

Advertisement

ನಿರ್ವಹಣೆಯೂ ಇಲ್ಲ, ಉದ್ಘಾಟನೆಯೂ ಇಲ್ಲ
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ “ಕ್ಲಾಕ್‌ಟವರ್‌’ ಪೂರ್ಣ ಗೊಂಡು ಕೆಲವು ವರ್ಷ ಕಳೆದಿವೆ. ಕ್ಲಾಕ್‌
ಟವರ್‌-ಎ.ಬಿ. ಶೆಟ್ಟಿ ವೃತ್ತ, ಹ್ಯಾಮಿಲ್ಟನ್‌ ವೃತ್ತ, ರಾವ್‌ ಆ್ಯಂಡ್‌ ರಾವ್‌ ವೃತ್ತ ರಸ್ತೆ ಮತ್ತು ಪುರಭವನ ಎದುರಿನ ಪಾರ್ಕ್‌ ಸುಂದ ರ ಗೊಳಿ ಸಿದ ಬಳಿಕ ಕ್ಲಾಕ್‌ಟವರ್‌ಗೂ ಉದ್ಘಾಟನೆ ಮಾಡಲು ಚಿಂತನೆ ನಡೆದಿತ್ತು. ಕೆಲವು ತಿಂಗಳ ಹಿಂದೆ ಪಾರ್ಕ್‌ ಉದ್ಘಾಟನೆಗೊಂಡರೂ ಕ್ಲಾಕ್‌ ಟವರ್‌ಗೆ ಇನ್ನೂ ಅಧಿಕೃತ ಉದ್ಘಾಟನ ಭಾಗ್ಯ ದೊರಕಿಲ್ಲ. ಪಾಲಿಕೆ-ಸ್ಮಾರ್ಟ್ ಸಿಟಿ ಸಮನ್ವಯದ ಕೊರತೆಯಿಂದ‌ ದುಬಾರಿ ಕ್ಲಾಕ್‌ಟವರ್‌ಗೆ ಸದ್ಯ ನಿರ್ವಹಣೆ ಇಲ್ಲದಂತಾಗಿದೆ.

ಹೊಸ ಕಾಮಗಾರಿಗೂ ಹಿನ್ನಡೆ
ನೀತಿ ಸಂಹಿತೆಯ ಕಾರಣ ನಗರದಲ್ಲಿ ಅತ್ಯಗತ್ಯದ ಕಾಮಗಾರಿ ಮಾಡಬಹುದೇ ವಿನಾ ಯಾವುದೇ ಹೊಸ ಕಾಮಗಾರಿ
ಆರಂಭಿಸುವಂತಿಲ್ಲ. ಇದರಿಂದಾಗಿ ಮಂಗಳೂರು ಸ್ಮಾರ್ಟ್‌ ಸಿಟಿಯ ಕೆಲವು ಕಾಮಗಾರಿಗೆ ಹಿನ್ನಡೆ ಉಂಟಾದಂತಾಗಿದೆ.
ನಿಗದಿಯಂತೆ 3 ತಿಂಗಳಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆ ಪೂರ್ಣಗೊಳ್ಳಲಿದೆ. ಆದರೆ ಕೆಲವೊಂದು ಯೋಜನೆಯ
ಟೆಂಡರ್‌ ಇನ್ನೂ ಬಾಕಿ ಉಳಿಸಿಕೊಂಡಿದೆ. ಪಂಪ್‌ವೆಲ್‌ನಲ್ಲಿ ನಿರ್ಮಾಣಕ್ಕೆ ಉದ್ದೇಶಿತ ಪಂಪ್‌ವೆಲ್‌ ಇಂಟಿಗ್ರೇಟೆಡ್‌ ಟರ್ಮಿನಲ್‌
ಮತ್ತು ವಾಣಿಜ್ಯ ಸಂಕೀರ್ಣಕ್ಕೆ ಪರಿಷ್ಕೃತ ದರದಲ್ಲಿ ಇನ್ನು ಟೆಂಡರ್‌ ಕರೆಯಬೇಕು. ಆದರೆ ಇದಕ್ಕೆ ಸದ್ಯ ತಡೆಯುಂಟಾಗಿದೆ.

*ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next