Advertisement

ಸವಣೂರು ಕೃಷಿ ಇಲಾಖೆಯ ಕಟ್ಟಡಕ್ಕೆ  ಬೇಲಿ

03:07 PM Nov 08, 2018 | |

ಸವಣೂರು: ಸವಣೂರು ಮುಖ್ಯ ಪೇಟೆಯ ಸಮೀಪವೇ ಇರುವ ಕೃಷಿ ಇಲಾಖೆಯ ಕಟ್ಟಡವು ಯಾವುದೇ ಉಪಯೋಗವಿಲ್ಲದೆ ಅನಾಥವಾಗಿ ಪಾಳು ಬಿದ್ದಿತ್ತು. ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಉದಯವಾಣಿ ಸುದಿನ ಅ. 10ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿತ್ತು.

Advertisement

ಕೃಷಿ ಇಲಾಖೆಯ ಜಾಗದಲ್ಲಿ ಖಾಸಗಿಯವರು ಮಾರ್ಗ ನಿರ್ಮಾಣ ಮಾಡಿದ್ದರು. ಆದರೂ ಈ ಕುರಿತು ಇಲಾಖೆ ಯಾವುದೇ ಗಮನ ಹರಿಸಿರಲಿಲ್ಲ. ಈ ವಿಚಾರವನ್ನು ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ತಡವಾಗಿ ಎಚ್ಚೆತ್ತ ಕೃಷಿ ಇಲಾಖೆ ತನ್ನ ಜಮೀನಿಗೆ ಬೇಲಿ ಅಳವಡಿಸಿಕೊಂಡಿದೆ. ಬೇಲಿ ಅಳವಡಿಕೆ ಸಂದರ್ಭ ಕಡಬ ಹೋಬಳಿ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ, ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ., ಸದಸ್ಯರಾದ ಗಿರಿಶಂಕರ ಸುಲಾಯ, ಸತೀಶ್‌ ಬಲ್ಯಾಯ, ಸತೀಶ್‌ ಅಂಗಡಿಮೂಲೆ ಭೇಟಿ ನೀಡಿ ಪರಿಶೀಲಿಸಿದರು.

ಕಟ್ಟಡ ಉಪಯೋಗವಾಗಲಿ
ಕೃಷಿ ಇಲಾಖೆ ತನ್ನ ಜಮೀನಿಗೆ ಬೇಲಿ ಅಳವಡಿಸಿಕೊಂಡಿರುವುದು ಸ್ವಾಗತಾರ್ಹ. ಹಾಗೆಯೇ ಪಾಳು ಬಿದ್ದ ಎರಡು ಸರಕಾರಿ ಕಟ್ಟಡಗಳು ಶೀಘ್ರ ದುರಸ್ತಿ ಭಾಗ್ಯ ಕಂಡು ಸದುಪಯೋಗವಾಗಬೇಕು ಎನ್ನುವುದು ಸಾರ್ವಜನಿಕರ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next