Advertisement
ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಹಕಾರ ಮತ್ತು ಕೃಷಿ ಕ್ಷೇತ್ರಗಳೆಂಬ ಪಂಚಮುಖ ಸಾಧನೆಯ ಸರದಾರ, ಈ ಎಲ್ಲಾ ರಂಗದ ಸಾಧನೆಗಳೇ ಅವರ ವ್ಯಕ್ತಿತ್ವದ ಕಲಶಗಳು. ಅವರೊಬ್ಬ ವ್ಯಕ್ತಿಯಾಗಿ ಅಲ್ಲ ನಾಡಿನ ಶಕ್ತಿಯಾಗಿ ಅಭಿಮಾನ ಭಾಜನರು.
Related Articles
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಸೀತಾರಾಮ ರೈ ಅವರು ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಕೃಷಿ ಮೇಳ ಆಯೋಜಿಸಿ ಅಭೂತಪೂರ್ವ ಯಶಸ್ವಿಗೆ ಕಾರಣಕರ್ತರಾಗಿದವರು. ದಿನಂಪ್ರತಿ ಸಾವಿರಾರು ಜನರು ಆಗಮಿಸಿ ಕೃಷಿ ಮೇಳಕ್ಕೆ ಪಾಲ್ಗೊಳ್ಳುವ ಮೂಲಕ ಇತಿಹಾಸ ನಿರ್ಮಾಣಗೊಂಡಿತು. ರೈಗಳ ಯಶಸ್ವಿ ಸಂಘಟನೆಗೆ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಉಲ್ಲೇಖನೀಯ. ಕೃಷಿ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಇರುವ ರೈಗಳು ತಾನು ಓರ್ವ ಕೃಷಿಕನಾಗಿ ಆಧುನಿಕ ಕೃಷಿಕ ಪೂರಕ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡಿರುವುದಕ್ಕೆ ಇಂತಹ ಹತ್ತಾರು ಕಾರ್ಯಕ್ರಮಗಳು ಉದಾಹರಣೆ.
Advertisement
ಧಾರ್ಮಿಕ ಸೇವಕ :ಹಲವು ದೇವಾಲಯಗಳ ಜೀರ್ಣೋದ್ಧಾರ ಮಾಡಿ ಬ್ರಹ್ಮಕಲಶೋತ್ಸವ ನಡೆಸಿರುವ ರೈಗಳು ಧಾರ್ಮಿಕ ಕ್ಷೇತ್ರದ ಸಂವರ್ಧನೆಗೆ ನೀಡಿರುವ ಕೊಡುಗೆಯೂ ದೊಡ್ಡದೇ. ಸವಣೂರಿನ ಶ್ರೀ ಮಹಾವಿಷ್ಣುಮೂರ್ತಿದೇವಸ್ಥಾನ, ಮುಗೇರಿನ ಶ್ರೀ ಮಹಾವಿಷ್ಣುಮೂರ್ತಿದೇವಸ್ಥಾನ, ಶಾಂತಿಮೊಗರಿನ ಶ್ರೀ ಸುಬ್ರಹ್ಮಣ್ಯೇಶ್ವರದೇವಸ್ಥಾನ, ದೇವರಕಾನದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಮತ್ತು ನಾವೂರಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳು. ಜೊತೆಗೆ ಪ್ರತಿ ವರುಷವೂ ಸುತ್ತಲಿನ ದೇವಳಗಳಲ್ಲಿ ಅನ್ನದಾನ ಸೇವೆ. ಸ್ಥಳೀಯ ದೈವ-ದೇವರುಗಳ ಸ್ಥಾನಗಳ ಉದ್ಧಾರದ ನಾಯಕತ್ವವಹಿಸಿದ್ದಾರೆ. ಸವಣೂರಿನ ಯುವಕ ಮಂಡಲದ ಮಾಜಿ ಅಧ್ಯಕರಾಗಿ, ಸವಣೂರಿನಯುವಕ, ಯುವತಿ ಮಂಡಲಗಳು ಮತ್ತುಅಂಬೇಡ್ಕರ್ ಸಂಘಗಳಿಗೆ ಸ್ವಂತ ಸೂರುಗಳ ಕೊಡುಗೆ ನೀಡಿದ್ದಾರೆ. ಪುತ್ತೂರಿನ ಬಾಲವನದ ಈಜುಕೊಳದ ನಿರ್ಮಾಣದಲ್ಲಿ ಮಹತ್ತರ ಪಾತ್ರವಹಿಸಿದ ರೈಗಳು ಸತತ 8 ವರ್ಷಗಳ ಕಾಲ ಪುತ್ತೂರಿನ ಬಂಟರ ಸಂಘದ ಅಧ್ಯಕ್ಷರಾಗಿ, ರೂ. 2.30 ಕೋಟಿ ವೆಚ್ಚದಲ್ಲಿ ಸಂಘಕ್ಕೆ ಸುಸಜ್ಜಿತ ಸಭಾಭವನ ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ನೂತನ ಕಟ್ಟಡಗಳ ಕೊಡುಗೆ ನೀಡಿದ್ದಾರೆ. ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಸ್ಥಾಪಕಾಧ್ಯಕ್ಷರಾಗಿ ಸ್ವಂತ ನಿವೇಶನ ಮತ್ತು ಕಟ್ಟಡಗಳ ಕೊಡುಗೆ ನೀಡಿದ್ದಾರೆ.ರಾಜ್ಯ ಮತ್ತುಜಿಲ್ಲಾ ಮಟ್ಟಗಳ ತುಳು, ಕೃಷಿ, ಸಾಹಿತ್ಯ, ಜನಪದ ಕಲೆಗಳ ಸಮ್ಮೇಳನಗಳು ಮತ್ತು ಯುವಜನ ಮೇಳಗಳ ಆಯೋಜನೆಯಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಶ್ರೇಷ್ಠ ಸಹಕಾರಿ, ಗಡಿನಾಡ ಪ್ರಶಸ್ತಿ, ಕಳೆದ 54 ವರ್ಷಗಳಿಂದ ಸಂಪೂರ್ಣವಾಗಿ ತೊಡಗಿಸಿಕೊಂಡು ಸಹಕಾರ ಕ್ಷೇತ್ರದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿರುವ ಹಿರಿಯ ಸಹಕಾರಿ ಧುರೀಣ ಸವಣೂರು ಕೆ. ಸೀತಾರಾಮ ರೈ. ಸಹಕಾರಿ ಕ್ಷೇತ್ರದಲ್ಲಿ ರೈ ಅವರ ದಣಿವರಿಯದ ಉತ್ಸಾಹದ ಸೇವೆಗೆ ಅರ್ಹವೆಂಬಂತೆ ಕರ್ನಾಟಕ ಸರಕಾರವು ಈ ವರ್ಷ ಪ್ರತಿಷ್ಠಿತ ”ಸಹಕಾರ ರತ್ನ ಪ್ರಶಸ್ತಿ” ನೀಡಿದೆ. ಹೀಗೆ ಸನ್ಮಾನ, ಗೌರವಗಳ ಸರಮಾಲೆಯೇ ಅವರಿಗೆ ಅರ್ಹವಾಗಿ ಸಂದಿರುವುದು ರೈಗಳ ಜೀವಮಾನದ ಸಾಧನೆ ತೊಡಿಸಿದ ಕೀರ್ತಿ ಕೀರಿಟವಾಗಿದೆ.