Advertisement

ಟ್ರಾಫಿಕ್‌ ಕಿರಿಕಿರಿಗೆ ಮುಕ್ತಿ ಎಂದು?

03:29 PM Nov 14, 2019 | Naveen |

„ಡಿ.ಎಸ್‌. ಕೊಪ್ಪದ
ಸವದತ್ತಿ:
ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆಗೆ ಕಡಿವಾಣ ಹಾಕಲು ಏಕಮುಖೀ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ ಸಾರಿಗೆ ಬಸ್‌ಗಳು ಮಾತ್ರ ಕಾನೂನು ಪಾಲನೆ ಮಾಡದೇ ಸಂಚರಿಸುವದರಿಂದ ಸಾರ್ವಜನಿಕರಿಗೆ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ.

Advertisement

ಸವದತ್ತಿ ಪಟ್ಟಣಕ್ಕೆ ಜಮಖಂಡಿ, ಗೋಕಾಕ, ವಿಜಯಪುರ, ಧಾರವಾಡ-ಹುಬ್ಬಳ್ಳಿ ಸೇರಿದಂತೆ ಇತರೇ ಭಾಗಗಳಿಂದ ದಿನನಿತ್ಯ ಸಾವಿರಾರು ವಾಹನಗಳ ಸಂಚರಿಸುತ್ತವೆ. ಈ ವಾಹನ ದಟ್ಟಣೆಯಿಂದ ಪಟ್ಟಣದಲ್ಲಿ ಟ್ರಾಫಿಕ್‌ ಕಿರಿಕಿರಿ ಉಂಟಾಗುತ್ತಿತ್ತು. ಇದನ್ನು ತಡೆಗಟ್ಟಲು ಭಾರೀ ಪ್ರಮಾಣದ ವಾಹನಗಳನ್ನು ಪಟ್ಟಣದ ಒಳಗಡೆ ಬರದಂತೆ ನಿರ್ಭಂದಿಸಿ ಬೈಪಾಸ್‌ ಮೂಲಕ ಸವದತ್ತಿ ಬಸ್‌ ನಿಲ್ದಾಣ ತಲುಪುವಂತೆ ಕ್ರಮ ಕೈಕೊಳ್ಳಲಾಗಿತ್ತು. ಆದರೆ ಸಾರಿಗೆ ಇಲಾಖೆ ಬಸ್‌ ಗಳು ಮಾತ್ರ ಈ ನಿಯಮವನ್ನು ಗಾಳಿಗೆ ತೂರಿ ಪಟ್ಟಣದ ಒಳಗಡೆ ನೇರವಾಗಿ ಒಳ ನುಗ್ಗಿ ಸ್ಥಳೀಕರಿಗೆ ಸಮಸ್ಯೆ ಉಂಟು ಮಾಡುತ್ತಿವೆ ಎಂದ ಸಾರ್ವಜನಿಕರು ಆರೋಪಿಸಿದ್ದಾರೆ.

ವ್ಯಾಪಾರಸ್ಥರಿಗೆ ನಿತ್ಯ ತೊಂದರೆ: ಎಪಿಎಂಸಿಯಿಂದ ಒಳ ನುಗ್ಗುವ ಭಾರೀ ಗಾತ್ರದ ವಾಹನಗಳನ್ನು ತಡೆಯಲೆಂದೆ ಪೊಲೀಸ್‌ ಇಲಾಖೆಯಿಂದ ಪೇದೆಗಳನ್ನು ನಿಯೋಜನೆ ಮಾಡಲಾಗಿದ್ದು, ಈ ನಿಯೋಜನೆಗೊಂಡ ಪೇದೆಗಳನ್ನು ಸಹ ಕಡೆಗಣಿಸಿ ಬಸ್‌ಗಳು ಒಳ ನುಗ್ಗಿ ಸಂತೆ ಮಾಡುವ ಸಾರ್ವಜನಿಕರಿಗೆ, ಬೀದಿ ವ್ಯಾಪಾರಸ್ಥರಿಗೆ ತಲೆನೋವಾಗಿ ಪರಿಣಮಿಸಿವೆ.

ಏಕಮುಖೀ ಸಂಚಾರದಲ್ಲಿ ಒಳನುಗ್ಗುವ ಬಸುಗಳ ಬೆನ್ನಟ್ಟಿ ತಡೆದ ಪೋಲಿಸ್‌ ಪೇದೆಗಳ ವಿರುದ್ದವೂ ಸಹ ತಿರುಗಿ ಬೀಳುವ ಚಾಲಕ ಸಿಬ್ಬಂದಿಗೆ ಗಣ್ಯರ ಮತ್ತು ಅಧಿಕಾರಿಗಳ ಶಿಪಾರಸು ಶ್ರೀರಕ್ಷೆಯಾಗಿದೆ. ಸ್ಥಳೀಕರು ಸಹ ಕೆಲವೊಮ್ಮೆ ಚಾಲಕರ ವಿರುದ್ದ ಸಂಘರ್ಷಕ್ಕೆ ಇಳಿದು ಬಸ್‌ಗಳನ್ನು ವಾಪಸ್‌ ಕಳುಹಿಸಿದ್ದು, ಸವದತ್ತಿ ಪಟ್ಟಣಕ್ಕೆ ಸಾಮಾನ್ಯವೆಂಬಂತಾಗಿದೆ.

ಕ್ರಮ ಕೈಗೊಳ್ಳದ ಪೊಲೀಸ್‌ ಇಲಾಖೆ: ಪೊಲೀಸ್‌ ಇಲಾಖೆಗೂ ಸಹಕರಿಸದ ಬಸ್‌ ಚಾಲಕ ಈ ವರ್ತನೆಯಿಂದಾಗಿ ಸ್ಥಳೀಯ ಪ್ರಜ್ಞಾವಂತರು ನ್ಯಾಯಾಲಯದ ಮೂಲಕವೇ ಪ್ರಶ್ನಿಸುವ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಖೇಧಕರ ಸಂಗತಿಯಾಗಿದೆ. ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರ್ಯನಿರ್ವಹಿಸಬೇಕಾದ ಇಲಾಖೆಗಳು ಸಮಯ ಉಳಿಸುವ ಬರದಲ್ಲಿ ಜೀವ ಹಾನಿಗೆ ಆಸ್ಪದ ನೀಡದೇ ಕ್ರಮ ಕೈಗೊಳ್ಳಬೇಖು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next