Advertisement

ಸವದತ್ತಿ: ಗ್ರಾಮೀಣ ಜನರ ಗುಳೇ ತಪ್ಪಿಸಲು ನರೇಗಾ ಸಹಕಾರಿ

04:52 PM Jun 10, 2023 | Team Udayavani |

ಸವದತ್ತಿ: ತಾಲೂಕಿನ ಉಗರಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರ್ಲಾಪೂರದಲ್ಲಿ ತಾಲೂಕಾ ಪಂಚಾಯತಿ, ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಗಳಿಂದ ಶುಕ್ರವಾರ ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.

Advertisement

ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ ಮಾತನಾಡಿ, ಗ್ರಾಮೀಣರು ಉದ್ಯೋಗ ಅರಸಿ ಪರಸ್ಥಳಗಳಿಗೆ ಗುಳೇ ಹೋಗುವದನ್ನು ತಪ್ಪಿಸಲು ನರೇಗಾದಡಿ ಆಯಾ ಗ್ರಾಮಗಳಲ್ಲಿ ಉದ್ಯೋಗ ನೀಡಲಾಗುತ್ತಿದೆ. ಬಡ ಕೂಲಿಕಾರರು ಆರೋಗ್ಯದಿಂದರಲು ಗ್ರಾಮ ಆರೋಗ್ಯದಡಿ ಆರೋಗ್ಯ ತಪಾಸಣೆಗೂ ಒತ್ತು ನೀಡಲಾಗುತ್ತಿದೆ. ಕೂಲಿಕಾರರು ಕೆಲಸಕ್ಕೆ
ನೀಡುವ ಮಹತ್ವವನ್ನು ಆರೋಗ್ಯಕ್ಕೂ ನೀಡಬೇಕೆಂದು ಪ್ರತಿ ಪಂಚಾಯಿತಿ ವ್ಯಾಪ್ತಿಯ ನರೇಗಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಈ ಶಿಬಿರ ಆಯೋಜಿಸಿ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದರು.

ಪಿಡಿಒ ಮಹೇಶ ತೆಲಗರ ಮಾತನಾಡಿ, ಗ್ರಾಮೀಣ ಭಾಗದ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸಬಾರದೆಂದು ನರೇಗಾದಡಿ ಆಯಾ ಗ್ರಾಮಗಳಲ್ಲಿಯೇ ಕೆಲಸ ನೀಡಲಾಗುತ್ತಿದೆ. ಇದೇ ವರ್ಷದ ಏಪ್ರೀಲ್‌ನಿಂದ ಕೂಲಿ ದರವನ್ನು ರೂ. 309 ರಿಂದ ರೂ. 316 ಕ್ಕೆ ಹೆಚ್ಚಿಸಲಾಗಿದೆ.

ನರೇಗಾ ಕಾರ್ಡ್‌ದಾರರಿಗೆ ಆರ್ಥಿಕ ವರ್ಷದಲ್ಲಿ 100 ಮಾನವ ದಿನಗಳಿಗೆ ಕೆಲಸ ನೀಡಿ ಆರ್ಥಿಕವಾಗಿ ಸಬಲರಾಗರನ್ನಾಗಿಸುವಲ್ಲಿ
ನರೇಗಾ ಮುನ್ನೆಡೆದಿದೆ. ಆರೋಗ್ಯ ಶಿಬಿರದ ಸದುಪಯೋಗ ಪಡೆಯಬೇಕು ಎಂದರು. ಗ್ರಾ.ಪಂ ಉಪಾಧ್ಯಕ್ಷ ಶಿವನಗೌಡ ಗಡಾದಗೌಡರ, ಚನ್ನಮ್ಮ ದಿಡಗನ್ನವರ, ಉಮೇಶ ದಳವಾಯಿ, ಆಯುಷ್‌ ವೈದ್ಯಾಧಿಕಾರಿ ಜ್ಯೋತಿ ಬಸರಿ, ಬಿಎಚ್‌ಇಒ ಆರ್‌. ಎಸ್‌. ಚಟ್ನಿಸ್‌, ಸಿಎಚ್‌ಓ ನಿಂಗಣ್ಣ ಗೊರವನಕೊಳ್ಳ, ಮಂಜುಳಾ ಪವಾರ, ಎನ್‌.ಎ. ಪೂಜೇರ, ಎ.ಕೆ. ಮುಲ್ಲಾ, ನಿಂಗನಗೌಡ ಪಾಟೀಲ, ದೊಡ್ಡಯಲ್ಲಪ್ಪ ಗಂಟಿ, ಸಿದ್ಧಾರೂಢ ವಗ್ಗನವರ, ಬಸವರಾಜ ಜಾಲಗಾರ, ಸುಧೀರಗೌಡ ಪಾಟೀಲ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next