Advertisement

ಮೆರೆದ ಭಕ್ತಿ: ಸುರಿದ ಬಣ್ಣ 

09:39 AM Mar 22, 2019 | Team Udayavani |

ಸವದತ್ತಿ: ಪಟ್ಟಣದ ಪದಕಿ ಗಲ್ಲಿ, ಆನಿ ಅಗಸಿ, ಗಾಂಧಿ  ಚೌಕ, ಹಳೇ ಬಸ್‌ ನಿಲ್ದಾಣ ಹಾಗೂ ಗುರ್ಲಹೊಸೂರ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಯುವಕರು, ಮಕ್ಕಳು ಬಣ್ಣ ಎರಚುತ್ತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

Advertisement

ಆಯಾ ಗಲ್ಲಿಯ ಹಿರಿಯರೆಲ್ಲರೂ ಒಂದು ಬಾರಿ ಕಾಮನ ಮೂರ್ತಿಯನ್ನು ಹಲಗಿ ಬಾರಿಸುತ್ತ ತಂದು ಕಟ್ಟಿಗೆಯ ಮೇಲಿರಿಸಿ ಇನ್ನೊಂದು ಬಾರಿ ದೇವಸ್ಥಾನಗಳಲ್ಲಿನ ದೀಪವನ್ನು ಮೇವಿನ ದೀವಿಗೆ ಹಚ್ಚಿಕೊಂಡು ಹಾಡುತ್ತ ಕೂಗುತ್ತ ತಂದು ಕಾಮ ದಹನ ಮಾಡಿ ಲಬೋ ಲಬೋ ಎನ್ನುತ್ತ ಸಂಭ್ರಮಿಸಿದರು. ಪೊಲೀಸ್‌ ಇಲಾಖೆ ಬಂದೋಬಸ್ತ್ಏ ರ್ಪಡಿಸಿತ್ತು. ಮುಂಜಾನೆಯಿಂದ ಕಾಮದಹನ ಮುಕ್ತಾಯವಾಗುವರೆಗೂ ಪೊಲೀಸ್‌ ಸಿಬ್ಬಂದಿ ಸ್ಥಳೀಯವಾಗಿ ಸುತ್ತುವ ಕಾರ್ಯ ಚುರುಕಾಗಿತ್ತು.

ಪರೀಕ್ಷಾ ದಿನದಂದೇ ಹೋಳಿ ಹಬ್ಬ: ಹೋಳಿ ಹಬ್ಬದಂದೇ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು ಅಡ್ಡಿ ಆತಂಕವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ನಂತರ ವಿದ್ಯಾರ್ಥಿಗಳು ಕೂಡ ಕಾಮದಹನದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಇನ್ನು ಇತರ ಗ್ರಾಮಗಳಿಗೆ ಹೋಗುವ ವಿದ್ಯಾರ್ಥಿಗಳನ್ನು ಪಾಲಕರು ಕರೆದೊಯ್ಯುವ ದೃಶ್ಯಗಳು ಸಾಮಾನ್ಯವಾಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next