Advertisement

Ayodhya ಬಾಲಕ ರಾಮನಿಗೆ ಮೊದಲ ಹೋಳಿಯ ಸಂಭ್ರಮ:ಫೋಟೋ ವೈರಲ್‌

12:46 AM Mar 25, 2024 | Team Udayavani |

ಲಕ್ನೋ: ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠೆಯಾದ ಬಳಿಕ ಇದೇ ಮೊದಲ ಬಾರಿಗೆ ಮಂದಿರದಲ್ಲಿ ಹೋಳಿ ಹಬ್ಬದ ಆಚರಣೆ ನಡೆದಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತನಾಗಿರುವ ಬಾಲಕ ರಾಮನಿಗೆ ಫಾಲ್ಗುಣ ಶುಕ್ಲಾ ಏಕಾದಶಿ ಅಥವಾ ರಂಗಭಾರಿ ಏಕಾದಶಿ ನಿಮಿತ್ತ ಹೋಳಿಯ ಬಣ್ಣಗಳನ್ನು ಹಚ್ಚಿ, ಪೂಜೆ ನೆರವೇರಿಸಲಾಗಿದೆ. ಭಕ್ತರು ಕೂಡ ಹೋಳಿ ಬಣ್ಣಗಳಿಂದ ಅಲಂಕೃತನಾದ ಬಾಲಕ ರಾಮನ ದರ್ಶನ ಪಡೆದು ಹರ್ಷಿತರಾಗಿದ್ದಾರೆ. ಬಣ್ಣ ಹಚ್ಚಿ ಕೊಂಡಿರುವ ಬಾಲಕ ರಾಮನ ಫೋಟೋಗಳನ್ನು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next