Advertisement
ಇಲ್ಲಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ 416 ರನ್ ಗುರಿ ಪಡೆದ ನ್ಯೂಜಿಲ್ಯಾಂಡ್ “ಎ’ 302ಕ್ಕೆ ಆಲೌಟ್ ಆಯಿತು. ಸೌರಭ್ ಕುಮಾರ್ 103 ರನ್ನಿತ್ತು 5 ವಿಕೆಟ್ ಉಡಾಯಿಸಿದರು. ಈ ಐದೂ ವಿಕೆಟ್‌ಗಳನ್ನು ಅವರು ಲೆಗ್ ಬಿಫೋರ್ ರೂಪದಲ್ಲಿ ಕೆಡವಿದ್ದು ವಿಶೇಷ. ಮೊದಲ ಸರದಿಯಲ್ಲಿ ಅವರು 4 ವಿಕೆಟ್ ಉರುಳಿಸಿದ್ದರು.
ಆರಂಭಕಾರ ಜೋ ಕಾರ್ಟರ್ 111 ರನ್ ಬಾರಿಸಿ (230 ಎಸೆತ, 12 ಬೌಂಡರಿ, 1 ಸಿಕ್ಸರ್) ಸೋಲು ತಪ್ಪಿಸಲು ಭಾರೀ ಪ್ರಯತ್ನಪಟ್ಟರು. ಇವರು ಪೆವಿಲಿಯನ್ ಸೇರಿಕೊಂಡದ್ದೇ 9ನೇ ವಿಕೆಟ್ ರೂಪದಲ್ಲಿ. ಕಾರ್ಟರ್ ಸಾಹಸದಿಂದಾಗಿ ನ್ಯೂಜಿಲ್ಯಾಂಡ್ “ಎ’ ಒಂದು ಹಂತದಲ್ಲಿ 3 ವಿಕೆಟಿಗೆ 197 ರನ್ ಗಳಿಸಿ ಪಂದ್ಯವನ್ನು ಉಳಿಸಿಕೊಳ್ಳುವ ಸಾಧ್ಯತೆಯನ್ನು ತೆರೆದಿರಿಸಿತ್ತು. ಆದರೆ ಸೌರಭ್ ಕುಮಾರ್ ಪ್ರವಾಸಿ ಸರದಿಯ ಮೇಲೆ ಘಾತಕವಾಗಿ ಎರಗಿದರು. 51 ರನ್ ಅಂತರದಲ್ಲಿ ಕೊನೆಯ 5 ವಿಕೆಟ್ ಉರುಳಿತು. ಜೋ ಕಾರ್ಟರ್ ಅವರಿಗೆ ಡೇನ್ ಕ್ಲೀವರ್ (44) ಮತ್ತು ಮಾರ್ಕ್ ಚಾಪ್‌ಮನ್ (45) ಉತ್ತಮ ಬೆಂಬಲವಿತ್ತರು. 3ನೇ ಹಾಗೂ 4ನೇ ವಿಕೆಟಿಗೆ ಕ್ರಮವಾಗಿ 85 ಮತ್ತು 82 ರನ್ ಒಟ್ಟುಗೂಡಿಸಿದರು. ಚಾಪ್‌ಮನ್ ಅವರನ್ನು ಔಟ್ ಮಾಡುವ ಮೂಲಕ ಸಫìರಾಜ್ ಖಾನ್ ಭಾರತಕ್ಕೆ ದೊಡ್ಡ ಬ್ರೇಕ್ ಒದಗಿಸಿದರು. ಈ ಜೋಡಿ 19 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿ ಪಂದ್ಯವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ.
Related Articles
Advertisement
ಸಂಕ್ಷಿಪ್ತ ಸ್ಕೋರ್:ಭಾರತ “ಎ’-293 ಮತ್ತು 7 ವಿಕೆಟಿಗೆ 359 ಡಿಕ್ಲೇರ್. ನ್ಯೂಜಿಲ್ಯಾಂಡ್ “ಎ’-237 ಮತ್ತು 302 (ಜೋ ಕಾರ್ಟರ್ 111, ಮಾರ್ಕ್ ಚಾಪ್‌ಮನ್ 45, ಡೇನ್ ಕ್ಲೀವರ್ 44, ಸೌರಭ್ ಕುಮಾರ್ 103ಕ್ಕೆ 5,ಸರ್ಫರಾಜ್ ಖಾನ್ 48ಕ್ಕೆ 2).