Advertisement

ಸೌಕೂರು ಏತ ನೀರಾವರಿ ತಡೆ ನಿವಾರಣೆ : 81 ಕೋ.ರೂ.ಗಳಲ್ಲಿ 8 ಗ್ರಾಮಗಳಿಗೆ ಕೃಷಿ ನೀರು

12:59 AM Mar 27, 2021 | Team Udayavani |

ಕುಂದಾಪುರ: ಕೃಷಿ ಚಟುವಟಿಕೆಗಾಗಿ ಮಂಜೂರಾದ 81 ಕೋ.ರೂ.ಗಳ ಸೌಕೂರು ಏತ ನೀರಾವರಿ ಯೋಜನೆಗಿದ್ದ ಅಡೆತಡೆ ನಿವಾರಣೆ ಹಂತದಲ್ಲಿದೆ. ಪೈಪ್‌ಲೈನ್‌ ಹೋಗಲು ಅನೇಕ ಕಡೆ ಖಾಸಗಿ ಜಮೀನಿನ ಅವಶ್ಯವಿದ್ದು ಕೆಲವೆಡೆ ಮರಗಳ ತೆರವಿನ ಅಗತ್ಯವಿತ್ತು.

Advertisement

ಯೋಜನೆ
2019-20ರ ರಾಜ್ಯ ಬಜೆಟ್‌ನಲ್ಲಿ ಸೌಕೂರು ಏತ ನೀರಾವರಿ ಯೋಜನೆಗೆ ಅನುದಾನ ಮಂಜೂ ರಾಗಿತ್ತು. ಟೆಂಡರ್‌ ಮುಗಿದು ಕಾಮಗಾರಿ ನಡೆಯುತ್ತಿದೆ. ಮೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳ ಲಿದ್ದು ಟ್ರಯಲ್‌ಗಾಗಿ ಪೈಪ್‌ಗ್ಳಲ್ಲಿ ನೀರು ಹರಿಸಲಾಗುತ್ತದೆ. ಡಿಸೆಂ ಬರ್‌ನಿಂದ ಪೂರ್ಣ ಪ್ರಮಾಣದಲ್ಲಿ ರೈತರ ಕೃಷಿಭೂಮಿ ಹಸನಾಗಲಿದೆ.

ಅಡೆತಡೆ
ಪೈಪ್‌ಲೈನ್‌ ಅಳವಡಿಸ ಬೇಕಾದ ಕರ್ಕುಂಜೆ, ಭಟ್ರಹಾಡಿ, ಗುಲ್ವಾಡಿ, ಮಾವಿನಕಟ್ಟೆ ಮೊದಲಾದೆಡೆ ಸಮಸ್ಯೆ
ಗಳಿದ್ದವು. ಇದರಿಂದಾಗಿ ಕಾಮಗಾರಿ ಕುಂಠಿತವಾಗುತ್ತಿತ್ತು. ಮಂದಗತಿ ಯಲ್ಲಿ ಕಾಮಗಾರಿ ಸಾಗಿದರೆ ಮೇ ತಿಂಗಳಲ್ಲಿ ನೀರು ಹರಿಸಲು ಕಷ್ಟ, ಮಳೆ ಬಂದರೆ ಕಾಮಗಾರಿ ಪೂರ್ಣಗೊಳಿಸುವುದು ಕಷ್ಟ ಎಂಬ ವಾತಾವರಣ ಇತ್ತು.

ಇದಕ್ಕಾಗಿ ಶಾಸಕರು ಎಲ್ಲೆಲ್ಲಿ ಖಾಸಗಿ ಭೂಮಿಯಲ್ಲಿ ಪೈಪ್‌ಲೈನ್‌ ಹಾದು ಹೋಗುತ್ತದೋ ಅಲ್ಲಿನ ಜನರ ಜತೆ ಮಾತನಾಡಿ ಪೈಪ್‌ಲೈನ್‌ ಹೋಗುವಂತೆ ಮಾತುಕತೆ ಮೂಲಕ ಮನ ಒಲಿಸಿದರು.

ಮರಗಳ ತೆರವು ನಡೆಯಬೇಕಾದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ತೆರವಿಗೆ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Advertisement

ಭೇಟಿ
ಶುಕ್ರವಾರ ಸೌಕೂರು ಏತ ನೀರಾವರಿ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಿಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಭೇಟಿ ನೀಡಿದರು. ಇವರ ಜತೆಗೆ ವಾರಾಹಿ ನೀರಾವರಿ ಯೋಜನೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಪ್ರಸನ್ನ, ಸಹಾಯಕ ಎಂಜಿನಿಯರ್‌ ಎನ್‌.ಜಿ. ಭಟ್‌, ಗುತ್ತಿಗೆದಾರ ಸಂಸ್ಥೆಯ ಪರವಾಗಿ ಶಿವ ಎಸ್‌. ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

ಎರಡು ತಿಂಗಳಲ್ಲಿ ಪೂರ್ಣ
ಕಾಮಗಾರಿ ಸಸೂತ್ರವಾಗಿ ನಡೆಯುತ್ತಿದ್ದು ಮೇ ಅಂತ್ಯದೊಳಗೆ ಪೂರ್ಣಗೊಂಡು ಪ್ರಾಯೋಗಿಕವಾಗಿ ನೀರು ಹರಿಸಲಿದ್ದೇವೆ. 1,800 ಹೆಕ್ಟೇರ್‌ ಕೃಷಿಭೂಮಿಗೆ ಇದರಿಂದ ಸಹಾಯವಾಗಲಿದೆ.
-ಪ್ರಸನ್ನ, ಎಇಇ, ವಾರಾಹಿ ನೀರಾವರಿ ಯೋಜನೆ

ಅಡೆತಡೆ ನಿವಾರಿಸಲಾಗಿದೆ
ಪೈಪ್‌ಲೈನ್‌ ಕಾಮಗಾರಿಗೆ ಖಾಸಗಿ ಭೂಮಿಯಲ್ಲಿ ಇದ್ದ ಆಕ್ಷೇಪಗಳನ್ನು ಮಾತುಕತೆ ಮೂಲಕ ಬಗೆಹರಿಸಲಾಗಿದೆ. ಮರಗಳ ತೆರವಿಗೆ ಇಲಾಖೆಗಳಿಗೆ ಸೂಚಿಸಲಾಗಿದೆ. ಬೈಂದೂರಿನ ಕೃಷಿಕರಿಗೆ ಅನುಕೂಲವಾಗಲು à ಯೋಜನೆ ಮಂಜೂರಾಗಿದ್ದು ಸಿದ್ದಾಪುರ ಏತನೀರಾವರಿ ಹಾಗೂ ವಾರಾಹಿ ಬಲದಂಡೆ ಯೋಜನೆ ಮಂಜೂರಾತಿ ಹಂತದಲ್ಲಿದೆ.
-ಬಿ.ಎಂ. ಸುಕುಮಾರ್‌ ಶೆಟ್ಟಿ ಶಾಸಕರು, ಬೈಂದೂರು

8 ಗ್ರಾಮಗಳಿಗೆ ನೀರು
ಕರ್ಕುಂಜೆ, ಹಟ್ಟಿಯಂಗಡಿ, ಗುಲ್ವಾಡಿ, ಕೆಂಚನೂರು, ಕನ್ಯಾನ, ದೇವಲ್ಕುಂದ, ತಲ್ಲೂರು ಹಾಗೂ ಭಾಗಶಃ ಕಟ್‌ಬೆಲೂ¤ರಿನ 1,800 ಹೆಕ್ಟೇರ್‌ ಪ್ರದೇಶಕ್ಕೆ ಈ ನೀರು ಉಪಯೋಗ ವಾಗಲಿದೆ. ಕಟ್‌ಬೆಲೂ¤ರು ಹಾಗೂ ತಲ್ಲೂರು ಗ್ರಾಮಗಳಿಗೆ ಪೂರ್ಣಪ್ರಮಾಣದಲ್ಲಿ ಲಭ್ಯವಿಲ್ಲ. ಗುರುತ್ವಾಕರ್ಷಣ ಬಲದಲ್ಲಿ ನೀರು ಹರಿಸಲು ಈ ಭಾಗ ಎತ್ತರದಲ್ಲಿರುವ ಕಾರಣ ಸಾಧ್ಯವಾಗುತ್ತಿಲ್ಲ. ಅಷ್ಟಲ್ಲದೇ ಸರಿಸುಮಾರು 15 ಸಾವಿರ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ.

17 ಕಡೆ ವಿತರಣೆ
8 ಗ್ರಾಮಗಳ 33 ಕಡೆಗಳಲ್ಲಿ ಚೆಕ್‌ ಡ್ಯಾಂಗಳು ನಿರ್ಮಾಣವಾಗಲಿದೆ. 17 ಕಡೆ ನೀರು ವಿತರಣೆ ಕೇಂದ್ರಗಳಿರುತ್ತವೆ. 725 ಎಚ್‌.ಪಿ.ಯ ಮೂರು ಪಂಪ್‌ಗ್ಳನ್ನು ಬಳಸಲಾಗುತ್ತದೆ. ಪೈಪ್‌ಗ್ಳಲ್ಲಿ ಹಾಗೂ ಚೆಕ್‌ಡ್ಯಾಂಗಳಲ್ಲಿ ಸಂಗ್ರಹಗೊಳ್ಳುವ ನೀರನ್ನು ರೈತರು ಕೃಷಿಗೆ ಬಳಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next