Advertisement

ಕಶೋಗ್ಗಿಯ ಸದ್ದಡಗಿಸಿ ಎಂದಿದ್ದ ಸೌದಿ ರಾಜಕುಮಾರ

06:00 AM Nov 23, 2018 | Team Udayavani |

ದುಬೈ: ಸೌದಿ ಅರೇಬಿಯಾ ಪತ್ರಕರ್ತ ಜಮಾಲ್‌ ಕಶೋಗ್ಗಿ ಹತ್ಯೆ ಪ್ರಕರಣ ಈಗ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ಗೆ ಸುತ್ತಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸಾಧ್ಯ ವಾದಷ್ಟು ಬೇಗ ಕಶೋಗ್ಗಿಯ ಸದ್ದಡಗಿಸಿ ಎಂದು ಮೊಹ ಮ್ಮದ್‌ ಬಿನ್‌ ಸಲ್ಮಾನ್‌ ಆದೇಶಿಸಿದ್ದರು ಎಂಬುದಾಗಿ ಟರ್ಕಿ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ. ಈ ಬಗೆಗಿನ ದೂರವಾಣಿ ಕರೆಯನ್ನು ಸಿಐಎ ಧ್ವನಿಮುದ್ರಿಸಿ ಕೊಂಡಿದೆ ಎಂದು ಹುರಿಯತ್‌ ಡೈಲಿ ನ್ಯೂಸ್‌ ವರದಿ ಮಾಡಿದೆ. ಕಳೆದ ತಿಂಗಳು ಅಂಕಾರಾಗೆ ಭೇಟಿ ನೀಡಿದ್ದಾಗ ಸಿಐಎ ನಿರ್ದೇಶಕ ಗಿನಾ ಹಾಸ್ಪೆಲ್‌ ಈ ಬಗ್ಗೆ ಮಾಹಿತಿ ನೀಡಿ ದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

ಶಸ್ತ್ರಾಸ್ತ್ರ ಮಾರಾಟಕ್ಕೆ ಡೆನ್ಮಾರ್ಕ್‌ ನಕಾರ: ಕಶೋಗ್ಗಿ ಪ್ರಕ ರಣದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾಗೆ ಶಸ್ತ್ರಾಸ್ತ್ರ ಮಾರಾಟ ಮಾಡಲು ಡೆನ್ಮಾರ್ಕ್‌ ನಿರಾಕರಿಸಿದೆ. ಆದರೆ ಸದ್ಯಕ್ಕೆ ಇತರ ನಿಷೇಧ ಹೇರಲು ನಿರ್ಧಾರ ಮಾಡಿಲ್ಲ ಎಂದು ಡೆನ್ಮಾರ್ಕ್‌ ಅಧಿಕಾರಿಗಳು ಹೇಳಿದ್ದಾರೆ. ಕಳೆದ ವಾರವಷ್ಟೇ ಕಶೋಗ್ಗಿ ಪ್ರಕರಣ ದಲ್ಲಿ ಭಾಗಿಯಾಗಿದ್ದರೆ ಎನ್ನಲಾಗಿರುವ 18 ಅಧಿಕಾರಿ ಗಳಿಗೆ ಜರ್ಮನಿ ಪ್ರವೇಶ ನಿರಾಕರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next