Advertisement

ಸೌದಿ ಅರೇಬಿಯಾ ಇಂದಿನಿಂದ ಸಂಪೂರ್ಣ ಅನ್ ಲಾಕ್‌ ; ಆದರೆ ಧಾರ್ಮಿಕ ಆಚರಣೆಗಿಲ್ಲ ರಿಲೀಫ್‌

12:25 AM Jun 22, 2020 | Hari Prasad |

ಸೌದಿ ಅರೇಬಿಯಾ: ಕಳೆದ ಮೂರು ತಿಂಗಳಿಂದ ಸೌದಿ ಅರೇಬಿಯಾದಲ್ಲಿ ಜಾರಿಯಲ್ಲಿದ್ದ ಲಾಕ್‌ ಡೌನ್‌ ನಿಯಮಗಳನ್ನು ಇಂದು ಹಿಂತೆದುಗೊಳ್ಳಲಾಗಿದೆ.

Advertisement

ರಾತ್ರಿ ಓಡಾಟದ ಮೇಲೆ ಇದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಕೋವಿಡ್‌-19 ಸೋಂಕು ನಿಯಂತ್ರಣಕ್ಕಾಗಿ ಮಾರ್ಚ್‌ನಲ್ಲಿ ಸೌದಿ ಸರಕಾರ ಲಾಕ್‌ ಡೌನ್‌ ನಿಯಮಗಳನ್ನು  ಜಾರಿ ಮಾಡುವುದರೊಂದಿಗೆ ಕೆಲವು ಪಟ್ಟಣ ಹಾಗೂ ನಗರಗಳಲ್ಲಿ 24 ಗಂಟೆಗಳ ನಿಷೇದಾಜ್ಞೆ ಹೇರಿತ್ತು.

ಆದರೆ ಇದೀಗ ಸೋಂಕು ಪ್ರಸರಣ ಮಟ್ಟ ಕಡಿತವಾಗುತ್ತಿರುವ ಹಿನ್ನಲೆಯಲ್ಲಿ ಲಾಕ್‌ಡೌನ್‌ ನಿಯಮಗಳನ್ನು ದೇಶ ಹಿಂತೆಗೆದುಕೊಳ್ಳುತ್ತಿದ್ದು, ಕಳೆದ ಮೇ ತಿಂಗಳ ನಂತರದ ದಿನಗಳಲ್ಲಿ  ಮೂರು ಹಂತಗಳಲ್ಲಿ ಸಂಚಾರ ಸೇರಿದಂತೆ ಆರ್ಥಿಕ ಕ್ಷೇತ್ರಕ್ಕೂ ವಿನಾಯಿತಿ ನೀಡಲಾಗಿದೆ.

ಧಾರ್ಮಿಕ ಆಚರಣೆಗಿಲ್ಲ ರಿಲೀಫ್‌
ದೇಶ ಆನ್‌ಲಾಕ್‌ ಆದರೂ ಧಾರ್ಮಿಕ ಉದ್ದೇಶಗಳಿಗಾಗಿ ಪ್ರವಾಸ ಬರುವವರು, ಅಂತಾರಾಷ್ಟ್ರೀಯ ಪ್ರವಾಸಿಗರು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಲೊಳ್ಳುವವರಿಗೆ ನಿಬಂಧನೆಗಳು ಮುಂದುವರೆಯಲ್ಲಿದ್ದು, 50ಕ್ಕೂ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂಬ ನಿಯಮ ಮುಂದುವರಿದಿದೆ.

Advertisement

ಹಜ್‌ ಯಾತ್ರೆಗೂ ಕೋವಿಡ್‌ ಬಿಸಿ
ಈ ಬಾರಿಯ ವಾರ್ಷಿಕ ಹಜ್‌ ಯಾತ್ರೆಗೂ ಕೋವಿಡ್‌ ಬಿಸಿ ತಟ್ಟಿದ್ದು, ಯಾತ್ರಾ ಸ್ಥಳಕ್ಕೆ ಭೇಟಿ ನೀಡುವವರ ಸಂಖ್ಯೆಯನ್ನು ಕಡಿತಗೊಳಿಸಲು ಸೌದಿ ಅರೇಬಿಯಾ ನಿರ್ಧರಿಸಿದೆ. ಪ್ರತೀ ವರ್ಷ ವಾರಗಳ ಕಾಲ ನಡೆಯುವ ಮೆಕ್ಕಾ ಮದೀನ ಯಾತ್ರೆಗೆ ಸುಮಾರು ಇಪ್ಪತ್ತೈದು ಲಕ್ಷ ಮಂದಿ ಭೇಟಿ ನೀಡುತ್ತಿದ್ದರು.

ಆದರೆ ಈ ಬಾರಿ ಕೋವಿಡ್ 19 ಸೋಂಕಿನಿಂದಾಗಿ ಯಾತ್ರೆ ಕೈಗೊಳ್ಳುವವರ ಪ್ರಮಾಣ ಅಧಿಕ ಮಟ್ಟದಲ್ಲಿ ಕುಸಿಯಲಿದ್ದು, ಮಾರ್ಚ್‌ ತಿಂಗಳಲ್ಲಿ ಈ ಯಾತ್ರೆಯನ್ನು ಈ ಬಾರಿ ನಿಷೇಧಿಸುವುದಾಗಿ ಸೌದಿ ಅರೇಬಿಯಾ ಮನವಿ ಮಾಡಿಕೊಂಡಿತ್ತು. ಜತೆಗೆ ಮುಂದಿನ ಆದೇಶದ ತನಕ ಉಮ್ರಾ ಯಾತ್ರೆಯನ್ನು ಅಮಾನತು ಮಾಡಲು ಸಹ ವಿನಂತಿಸಿಕೊಂಡಿತ್ತು.

ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 1,54,223 ಸೋಂಕು ಪ್ರಕರಣಗಳು ದಾಖಲಾಗಿದ್ದು, 1230 ಮಂದಿ ಅಸುನೀಗಿದ್ದಾರೆ. ಅರಬ್‌ ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾದಲ್ಲೇ ಪ್ರಕರಣ ಹೆಚ್ಚು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next