Advertisement

ಇನ್ಮುಂದೆ ಸೌದಿ ಅರೇಬಿಯಾದಲ್ಲಿ ಛಡಿ ಏಟಿನ ಶಿಕ್ಷೆ ರದ್ದು-ಸುಪ್ರೀಂಕೋರ್ಟ್ ತೀರ್ಮಾನ: ವರದಿ

08:17 AM Apr 26, 2020 | Nagendra Trasi |

ರಿಯಾದ್: ಸೌದಿ ಅರೇಬಿಯಾ ಸುಪ್ರೀಂಕೋರ್ಟ್ ಛಡಿ(ಚಾಟಿ) ಏಟಿನ ಶಿಕ್ಷೆಯನ್ನು ರದ್ದುಪಡಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಇನ್ಮುಂದೆ ದೇಹದಂಡನೆ ಶಿಕ್ಷೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂಬ ಹೊಸ ನಿಯಮ ಜಾರಿಗೆ ತರಲಿದೆ ಎಂದು ವರದಿ ವಿವರಿಸಿದೆ.

Advertisement

ಸುಪ್ರೀಂಕೋರ್ಟ್ ನ ಜನರಲ್ ಕಮಿಷನ್ ಈ ನಿರ್ಧಾರ ಕೈಗೊಂಡಿದೆ. ಛಡಿ ಏಟಿನ ಶಿಕ್ಷೆಯನ್ನು ರದ್ದುಗೊಳಿಸುವ ಬಗ್ಗೆ ತೀರ್ಪು ಕೈಗೊಳ್ಳಲು ಕೆಲವು ಸಮಯ ತೆಗೆದುಕೊಂಡಿತ್ತು. ಕೈದಿಗಳಿಗೆ ಬೇರೆ ಶಿಕ್ಷೆಯನ್ನು ವಿಧಿಸಬೇಕೋ ಅಥವಾ ದಂಡ ವಿಧಿಸಬೇಕೊ ಅಥವಾ ಎರಡನ್ನೂ ಮಿಶ್ರಣ ಮಾಡಬೇಕೆ ಎಂಬ ಬಗ್ಗೆ ಪರಿಶೀಲನೆ ನಡೆಸಿರುವುದಾಗಿ ವರದಿ ತಿಳಿಸಿದೆ.

ರಾಜ ಸಲ್ಮಾನ್ ಅವರು ಮಾನವ ಹಕ್ಕುಗಳ ಸುಧಾರಣೆ ಹಿನ್ನೆಲೆಯಲ್ಲಿ ಜಾರಿಗೆ ತಂದ ನಿರ್ದೇಶನದ ಪ್ರಕಾರ ಮತ್ತು ಈ ಬಗ್ಗೆ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ನೇರ ಅವಗಾಹನೆಯಲ್ಲಿ ನಿರ್ಧಾರ ಮುಂದುವರಿಯಲಿದೆ ಎಂದು ಹೇಳಿದೆ.

ಸೌದಿ ಅರೇಬಿಯಾದಲ್ಲಿ ವಿವಿಧ ರೀತಿಯ ಅಪರಾಧಗಳಿಗೆ ಛಡಿ ಏಟಿನ ಶಿಕ್ಷೆ ವಿಧಿಸಲಾಗುತ್ತಿತ್ತು. ಸೌದಿ ನ್ಯಾಯಾಧೀಶರು ಕೂಡಾ ಸಾರ್ವಜನಿಕವಾಗಿ ಕಿರುಕುಳ ಕೊಟ್ಟವರಿಗೆ, ಅಪರಾಧ ಎಸಗಿದವರಿಗೆ ಛಡಿ ಏಟಿನ ಶಿಕ್ಷೆಯ ತೀರ್ಪು ನೀಡುತ್ತಿದ್ದರು. ಆದರೆ ಈ ಬಗ್ಗೆ ಮಾನವ ಹಕ್ಕು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next