Advertisement

ನಿಲುವು ಬದಲು: ಬಿಕಿನಿ ಧರಿಸಲಿರುವ ಸೌದಿ ಸ್ತ್ರೀಯರು!

08:40 AM Aug 04, 2017 | Karthik A |

ಹೊಸದಿಲ್ಲಿ: ಸಂಪ್ರದಾಯವಾದಿಗಳ ನಾಡಿನಲ್ಲಿ ‘ಕರಿ ಪರದೆ’ಯ ಹಿಂದೆ ಅವಿತೇ ಬದುಕುತ್ತಿದ್ದ ಮಹಿಳೆಗೀಗ ಸ್ವಾತಂತ್ರ್ಯದ ಅನುಭವ. ಮೈ ಚರ್ಮ ಚೂರು ಕೂಡ ಕಾಣದಂತೆ ಬಟ್ಟೆ ತೊಟ್ಟು, ಅಸ್ತಿತ್ವದಲ್ಲಿದ್ದೂ ಅಜ್ಞಾತದಲ್ಲಿ ದಿನ ದೂಡುತ್ತಿದ್ದ ಸ್ತ್ರೀಯರಿನ್ನು ಬಿಕಿನಿ ಧರಿಸಿ ಬೀಚ್‌ನಲ್ಲಿ ಸುತ್ತಾಡಬಹುದು! ಇಂಥ ಅಚ್ಚರಿ ಬೆಳವಣಿಗೆಗೆ ಕಾರಣ ‘ರೆಡ್‌ ಸೀ ರೆಸಾರ್ಟ್‌’.

Advertisement

ಇದು ಸೌದಿ ಅರೇಬಿಯಾದ ಮಹಿಳೆಯರಿಗೆ ಸಿಕ್ಕಿದ ‘ಅರೆಕಾಲಿಕ ಸ್ವಾತಂತ್ರ್ಯ’. ಹಾಗೇ ಸೌದಿಯಂಥ ಸೌದಿಯಲ್ಲೇ ಇಷ್ಟೊಂದು ಮುಕ್ತಾ ಮುಕ್ತ ಅವಕಾಶ ನೀಡುವುದರ ಹಿಂದೆ ವಾಣಿಜ್ಯ ಉದ್ದೇಶ ಅಡಗಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಸಂಪ್ರದಾಯದ ಬಟ್ಟೆಯನ್ನು ಕಳಚಿ ಕೊಂಚ ಪಕ್ಕಕ್ಕಿರಿಸಿದ ದುಬೈ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಿ, ಅಗಾಧವಾಗಿ ಬೆಳೆದದ್ದನ್ನು ಕಣ್ಣಾರೆ ಕಂಡ ಸೌದಿ ದೊರೆ ಮಹಮ್ಮದ್‌ ಬಿನ್‌ ಸಲ್ಮಾನ್‌, ಸೌದಿಯ ವಾಯವ್ಯ ಕರಾವಳಿಯಲ್ಲಿನ ಬೀಚ್‌ನಲ್ಲಿ ಐಷಾರಾಮಿ ರೆಡ್‌ ಸೀ ರೆಸಾರ್ಟ್‌ ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಬೀಚ್‌ ರೆಸಾರ್ಟ್‌ಗೆ ಭೇಟಿ ನೀಡುವ ಮುಸ್ಲಿಂ ಮಹಿಳೆಯರು ಬುರ್ಖಾ ಬದಲಿಗೆ ತಮ್ಮಿಷ್ಟದ ಉಡುಗೆ ಧರಿಸಬಹುದು. ಬೇಕಿದ್ದರೆ ತುಂಡುಡುಗೆ (ಬಿಕಿನಿ) ತೊಟ್ಟು ಸಮುದ್ರ ತಟದಲ್ಲಿ ಸುತ್ತಾಡಬಹುದು ಎಂದು ದೊರೆ ಹೇಳಿದ್ದಾರೆ.

ಈ ರೆಸಾರ್ಟ್‌ ಅನ್ನು ಮಧ್ಯಪ್ರಾಚ್ಯದ ಪ್ರಮುಖ ಪ್ರವಾಸಿ ಕೇಂದ್ರವಾಗಿಸುವ ಉದ್ದೇಶ ಹೊಂದಿರುವ ಸಲ್ಮಾನ್‌, ಅದಕ್ಕಾಗಿ, ಮಹಿಳೆಯರಿಗೆ ತುಂಡುಡುಗೆ ತೊಡಲುವಕಾಶ ನೀಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಹಿಳೆಯರನ್ನು ದಾಳವಾಗಿ ಬಳಸುತ್ತಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next