Advertisement

ವಿಮಾನದ ಇಂಜಿನ್‌ನಲ್ಲಿ ಬೆಂಕಿ: ಪಾರಾದ ಸೌದಿ ಫ‌ುಟ್ಬಾಲ್‌ ತಂಡ

03:34 PM Jun 19, 2018 | udayavani editorial |

ರೊಸ್ತೋವ್‌ ಆನ್‌ ಡಾನ್‌  : ಸೌದಿ ಅರೇಬಿಯದ ರಾಷ್ಟ್ರೀಯ ಫ‌ುಟ್ಬಾಲ್‌ ಸದಸ್ಯರ ತಂಡವನ್ನು ವಿಶ್ವ ಕಪ್‌ ಪಂದ್ಯ ನಡೆಯುವ ತಾಣಕ್ಕೆ ಒಯ್ಯುತ್ತಿದ್ದ  ವಿಮಾನದ ಒಂದು ಇಂಜಿನ್‌°ಲ್ಲಿ ಬೆಂಕಿ ಕಾಣಿಸಿಕೊಂಡ ಹೊರತಾಗಿಯೂ  ರಶ್ಯದ ರೊಸ್ತೋವ್‌ ಆನ್‌ ಡಾನ್‌ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯುವುದರೊಂದಿಗೆ ಫ‌ುಟ್ಬಾಲ್‌ ಆಟಗಾರರೆಲ್ಲ ಪಾರಾದರು.

Advertisement

ಆದರೆ ರೊಸ್ಸಿಯಾ ಏರ್‌ ಲೈನ್‌ ವಕ್ತಾರ ವಿಮಾನದ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತೆಂಬುದನ್ನು ಅಲ್ಲಗಳೆದು ಹಕ್ಕಿ ಬಡಿತದಿಂದಾಗಿ ಕೇವಲ ತಾಂತ್ರಿಕ ದೋಷವಷ್ಟೇ ಕಾಣಿಸಿಕೊಂಡಿತ್ತು ಎಂದು ಹೇಳಿದರು. 

ಸೌದಿ ಅರೇಬಿಯದ ರಾಷ್ಟ್ರೀಯ ಫ‌ುಟ್ಬಾಲ್‌ ತಂಡ ಉರುಗ್ವೇ ಎದುರಿನ ತಮ್ಮ ಎ ಬಣದ ಎರಡನೇ ಪಂದ್ಯವನ್ನು ಆಡಲು ಸೈಂಟ್‌ ಪೀಟರ್‌ಬರ್ಗ್‌ನಿಂದ ರೊಸ್ತೋವ್‌ ಆನ್‌ ಡಾನ್‌ಗೆ ರೊಸ್ಸಿಯಾ ಏರ್‌ ಲೈನ್‌ನ ಎ319 ಏರ್‌ಬಸ್‌ನಲ್ಲಿ ಪ್ರಯಾಣಿಸುತ್ತಿತ್ತು. 

ವಿಮಾನವು ಇನ್ನೇನು ಲ್ಯಾಂಡ್‌ ಆಗಲಿದೆ ಎನ್ನುವಾಗ ಒಂದು ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂತು; ಹಕ್ಕಿಯೊಂದು ಬಡಿದುದು ಕಂಡು ಬಂದು ಅದುವೇ ಪ್ರಾಥಮಿಕ ತಾಂತ್ರಿಕ ದೋಷಕ್ಕೆ ಕಾರಣವೆಂದು ಗೊತ್ತಾಯಿತು ಎಂದು ವಕ್ತಾರ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next