ದೋಹಾ: ಕತಾರ್ ಮತ್ತು ಸೌದಿ ಅರೇಬಿಯಾ ನಡುವಿನ ವಾಯುಪ್ರದೇಶ, ಭೂಮಿ ಮತ್ತು ಸಮುದ್ರ ಗಡಿಗಳನ್ನು ತೆರೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಸೋಮವಾರ (ಜ.4)ರ ರಾತ್ರಿಯಿಂದಲೇ ಗಡಿ ತೆರೆಯಲಾಗಿದೆ
ಕುವೈತ್ ವಿದೇಶಾಂಗ ಸಚಿವ ಹೆಚ್.ಇ.ಶೇಖ್ ಡಾ.ಅಹಮ್ಮದ್ ನಾಸರ್ ಅಲ್-ಮೊಹಮ್ಮದ್ ಅಲ್-ಸಬಾ ಈ ಘೋಷಣೆ ಮಾಡಿದ್ದಾರೆ.
ಕತಾರ್ ನ ಅಮಿರ್ ಮತ್ತು ಸೌದಿ ಅರೇಬಿಯಾದ ರಾಜಕುಮಾರರೊಂದಿಗೆ ಕುವೈತ್ ನ ಅಮಿರ್ ಮಾತುಕತೆ ನಡೆಸಿದ್ದಾರೆ. ಅಲ್-ಉಲಾ ಸಭೆಯ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಗಡಿ ತೆರಯಲು ಒಪ್ಪಲಾಯಿತು ಎಂದು ಹೆಚ್.ಇ.ಶೇಖ್ ಡಾ.ಅಹಮ್ಮದ್ ನಾಸರ್ ಅಲ್-ಮೊಹಮ್ಮದ್ ಅಲ್-ಸಬಾ ಹೇಳಿದರು.
ಇದನ್ನೂ ಓದಿ:ಒನ್ ಡೇ ಕ್ರಿಕೆಟ್ ಗೆ 50ರ ಸಂಭ್ರಮ: ಉದಯವೇ ವಿಸ್ಮಯ, ಅಚ್ಚರಿ, ಅನಿರೀಕ್ಷಿತ, ರೋಮಾಂಚನ!
2017ರ ಜೂನ್ ನಲ್ಲಿ ಕತಾರ್ ವಿರುದ್ಧ ಬಹ್ರೇನ್, ಕುವೈಟ್, ಒಮಾನ್, ಈಜಿಪ್ಟ್, ಯುಎಇ ಮತ್ತು ಸೌದಿ ಅರೇಬಿಯಾ ದೇಶಗಳು ತಿರುಗಿ ಬಿದ್ದಿದ್ದವು. ಆ ದೇಶದೊಂದಿಗಿನ ವಾಯು, ನೆಲ ಮತ್ತು ಜಲ ಮಾರ್ಗದ ಗಡಿಗಳನ್ನು ಮುಚ್ಚಿದ್ದವು.