Advertisement
ಸುಮಾರು 3 ಕೋಟಿ ಜನಸಂಖ್ಯೆಯಿರುವ ಈ ದೇಶದಲ್ಲಿ ಈಗಾಗಲೇ 52 ಮಂದಿ ಕೋವಿಡ್ ವೈರಸ್ ಗೆ ಬಲಿಯಾಗಿದ್ದು, 4,033 ಮಂದಿಗೆ ಸೋಂಕು ದೃಢಪಟ್ಟಿದೆ. ಸೌದಿ ಅರಮನೆಯನ್ನೂ ಕೋವಿಡ್ ವೈರಸ್ ಪ್ರವೇಶಿಸಿದ್ದು, ರಾಜಮನೆತನದ 150 ಸದಸ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸಂಯುಕ್ತ ಅರಬ್ ಒಕ್ಕೂಟದಲ್ಲಿ (ಯುಎಇ) ಅತಂತ್ರರಾಗಿರುವ ಭಾರತೀಯರು ಸೇರಿದಂತೆ ವಿದೇಶಿಯರನ್ನು ಅವರವರ ದೇಶಕ್ಕೆ ವಾಪಸ್ ಕಳುಹಿಸಲು ಸಿದ್ಧ ಎಂದು ಯುಎಇ ಸರ್ಕಾರ ಹೇಳಿದೆ. ಈ ಕುರಿತು ಎಲ್ಲ ದೇಶಗಳ ರಾಯಭಾರಿ ಕಚೇರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಯಾರು ತಮ್ಮ ದೇಶಗಳಿಗೆ ಮರಳಲು ಇಚ್ಛಿಸುತ್ತಿದ್ದಾರೋ, ಅಂಥವರನ್ನು ಕಳುಹಿಸಲು ಸೂಕ್ತ ಸಿದ್ಧತೆ ಮಾಡುತ್ತೇವೆ. ಆದರೆ, ಕೋವಿಡ್ ವೈರಸ್ ಪರೀಕ್ಷೆಯಲ್ಲಿ ಅವರ ವರದಿ ನೆಗೆಟಿವ್ ಬಂದರಷ್ಟೇ ಸ್ವದೇಶಕ್ಕೆ ಕಳುಹಿಸಲಾಗುತ್ತದೆ ಎಂದೂ ಭಾರತದ ಯುಎಇ ರಾಯಭಾರಿ ಡಾ.ಅಹ್ಮದ್ ತಿಳಿಸಿದ್ದಾರೆ.