Advertisement
ಆದರೆ ಹಣ ಖರ್ಚು ಮಾಡಲು ಸಾಧ್ಯವಾಗದ, ಆದರೆ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಅವರಿಗೆ ಗುರುವಾಗಿ ಸಹಾಯ ಮಾಡಿ ಗುರಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಧಾರವಾಡದ ಕೃಷಿ ವಿವಿಯ ಪ್ರಾಧ್ಯಾಪಕಿ ಡಾ.ಅಶ್ವಿನಿ ಅವರು.
Related Articles
Advertisement
ಮೂಲತಃ ದಾವಣಗೆರೆಯ ಶರಣಯ್ಯ ಮತ್ತು ಶರಣಮ್ಮ ದಂಪತಿ ಮಗಳಾಗಿರುವ ಸೌಭಾಗ್ಯ ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ದಾವಣಗೆರೆಯಲ್ಲಿ ಮುಗಿಸಿ ಧಾರವಾಡದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದ 2022 ರಲ್ಲಿ ಪದವಿ ಪಡೆದುಕೊಂಡಿದ್ದರು. ನಂತರ ಡಾ.ಅಶ್ವಿನಿ ಅವರ ಮಾರ್ಗದರ್ಶನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ಮಾಡಿಕೊಂಡಿದ್ದರು. ಪ್ರಸ್ತುತ ಅವರು ಧಾರವಾಡದಲ್ಲಿಯೇ ವಾಸವಾಗಿದ್ದಾರೆ.
ಆರು ತಿಂಗಳ ಹಿಂದೆ ಹೃದ್ರೋಗ ಖಾಯಿಲೆ ಎದುರಾದಾಗ ನನ್ನ ಮಗಳಂತೆ ಸೌಭಾಗ್ಯ ನನ್ನ ಉಪಚರಿಸಿದ್ದರು. ಅವಳಿಗೆ ಮಾರ್ಗದರ್ಶನ ನೀಡಿದ್ದಕ್ಕೆ ಸಾರ್ಥಕಭಾವ ಮೂಡಿದೆ. ಹೆಣ್ಣುಮಕ್ಕಳು ಉನ್ನತ ಹುದ್ದೆಗೆ ಏರಬೇಕು ಎನ್ನುವ ನನ್ನೊಳಗಿನ ಛಲಕ್ಕೆ ಬಲ ಬಂದಿದೆ.-ಡಾ.ಅಶ್ವಿನಿ, ಸೌಭಾಗ್ಯ ಅವರ ಮಾರ್ಗದರ್ಶಕಿ. ನನ್ನ ಮನೆ ಜಿಲ್ಲಾಧಿಕಾರಿ ಕಚೇರಿ ಸಮೀಪವಿತ್ತು. ನನ್ನ ತಂದೆ ಅನೇಕ ಬಾರಿ ನೀನು ಅವರಂತೆ ಜಿಲ್ಲಾಧಿಕಾರಿ ಆಗಬೇಕು. ಇದು ನನ್ನ ಕನಸು ಎನ್ನುತ್ತಿದ್ದರು. ಇಂದು ನನ್ನ ತಂದೆಯ ಕನಸು ಇಡೇರೇದೆ. ಪರೀಕ್ಷೆಯಲ್ಲಿ ೧೦೧ನೇ ರ್‍ಯಾಂಕ್ ಬಂದಿರುವುದು ನನಗೆ ಅತ್ಯಂತ ಹರ್ಷ ತಂದಿದೆ. ಕಷ್ಟಪಟ್ಟು ಓದಿದಕ್ಕೆ ಒಳ್ಳೆಯ ಫಲಿತಾಂಶ ಸಿಕ್ಕಿದೆ.
-ಸೌಭಾಗ್ಯ ಬೀಳಗಿಮಠ,